Get Updates
Get notified of breaking news, exclusive insights, and must-see stories!

Saif Ali Khan: ಕೋಟಿ ಒಡೆಯ ಸೈಫ್ ಅಲಿ ಖಾನ್‌ ಮೇಲೆ ಅಟ್ಯಾಕ್ ಮಾಡಿದ್ದು ನಿಜವಾಗಿಯೂ ಕಳ್ಳನಾ?

ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿರುವ ಘಟನೆ ಇಂದು ಬೆಳಗ್ಗೆ 3 ಗಂಟೆಯ ಸುಮಾರಿಗೆ ನಡೆದಿದೆ. ಸೈಫ್‌ ಅಲಿ ಖಾನ್ ಮನೆಗೆ ಕಳ್ಳತನಕ್ಕಾಗಿ ಬಂದ ಕಳ್ಳ ನಟನ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗುತ್ತಿದೆ. ಇದರಿಂದ ಸೈಫ್‌ಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾದರೆ ಸೈಫ್‌ ಅಲಿ ಖಾನ್ ಮನೆಯಲ್ಲಿ ನಡೆದಿದ್ದು ಏನು? ಸೈಫ್ ಅಲಿ ಖಾನ್‌ ಮೇಲೆ ಅಟ್ಯಾಕ್ ಮಾಡಿದ್ದು ನಿಜವಾಗಿಯೂ ಕಳ್ಳನಾ? ಅಥವಾ ಬೇರೆಯವರ ದ್ವೇಷ ಇತ್ತಾ?

ಈ ಘಟನೆ ಬಾಂದ್ರಾದಲ್ಲಿರುವ ನಟನ ನಿವಾಸದಲ್ಲಿ ನಡೆದಿದೆ. ದಾಳಿಯ ಸಮಯದಲ್ಲಿ ಸೈಫ್ ಅವರ ಕೈ, ಬೆನ್ನುಮೂಳೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ. ಪ್ರಸ್ತುತ ಸೈಫ್ ಅಲಿ ಖಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ಧಾರೆ. ಈ ಘಟನೆ ನಡೆದ ಸಮಯದಲ್ಲಿ ನಟನ ಇತರ ಕೆಲವು ಕುಟುಂಬ ಸದಸ್ಯರು ಸಹ ಮನೆಯಲ್ಲಿದ್ದರು ಎನ್ನಲಾಗಿದೆ.

saif ali khan attacked who attacked bollywood actor saif ali khan

ಬಾಲಿವುಡ್‌ನ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಸೈಫ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮುಂಬೈನಲ್ಲಿ ತುಂಬಾ ಆಸ್ತಿಯನ್ನು ಹೊಂದಿದ ಸೈಫ್ ಬಳಿ ಬಂಗಲೆ, ಬಗೆ ಬಗೆಯ ಕಾರುಗಳು, ಆಳು ಕಾಳುಗಳಿಗೇನು ಕಮ್ಮಿ ಇಲ್ಲ. ಮನೆ ಸುತ್ತಲೂ ಕ್ಯಾಮರಾ ಕಣ್ಗಾವಲು, ಸೆಕ್ಯೂರಿಟಿ ಗಾರ್ಡ್, ಗನ್‌ಮ್ಯಾನ್‌ ಹೀಗೆ ಹಲವಾರು ಜನ ಕಾವಲುಗಾರರು ಇದ್ದಾರೆ. ಇನ್ನೂ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ ಸೈಪ್‌ಗೆ ಬಾಡಿಗಾರ್ಡ್ ಕೂಡ ಇದ್ದಾರೆ.

ಮನೆಯ ಒಳಗೆ ಒಬ್ಬ ಅಪರಿಚಿತ ವ್ಯಕ್ತಿ ಬರಬೇಕು ಅಂದರೆ ಮೊದಲು ಸೆಕ್ಯೂರಿಟಿ ಗಾರ್ಡ್, ಮನೆ ಅಂಗಳದಲ್ಲಿ ಓಡಾಡುವ ಸಾಕು ನಾಯಿಗಳು, ಗನ್‌ಮ್ಯಾನ್‌, ಬಾಡಿಗಾರ್ಡ್ ಹಾಗೂ ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಬೇಕು. ಇದಾದರೂ ಕೂಡ ಮನೆ ಕೆಲಸದವರು, ಕುಟುಂಬದ ಸದಸ್ಯರು ಇವರೆಲ್ಲರನ್ನ ದಾಟಿ ಒಬ್ಬ ನಟನನ್ನು ಅಪರಿಚಿತ ವ್ಯಕ್ತಿ ಭೇಟಿ ಮಾಡಬೇಕು. ಇಷ್ಟೆಲ್ಲಾ ಸುರಕ್ಷತಾ ವ್ಯವಸ್ಥೆಗಳಿದ್ದರೂ ಕೂಡ ಸೈಫ್ ಮನೆ ಒಳಗೆ ಪರಿಚಿತ ವ್ಯಕ್ತಿ ಹೋಗಲು ಹೇಗೆ ಸಾಧ್ಯವಾಯ್ತು? ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.

ಅಷ್ಟಕ್ಕೂ ಸೈಫ್‌ ಮನೆಗೆ ಕಳ್ಳ ಬಂದಿದ್ದು ಇಂದು ಬೆಳಗ್ಗೆ 3 ಗಂಟೆಯ ಸುಮಾರಿಗೆ. ಈ ಹೊತ್ತಲ್ಲಿ ಸೈಫ್ ಮನೆ ಬಾಗಿಲು ಓಪನ್ ಇತ್ತಾ? ಅಥವಾ ಕಳ್ಳ ಕಿಟಕಿ ಮೂಲಕ ಮನೆ ಒಳಗೆ ಪ್ರವೇಶ ಮಾಡಿದ್ದನಾ? ಕಳ್ಳ ಒಳಬರುವಾಗ ಸೆಕ್ಯೂರಿಟಿ ಗಾರ್ಡ್, ಗನ್‌ಮ್ಯಾನ್‌, ಬಾಡಿಗಾರ್ಡ್ ಯಾರೂ ಕೂಡ ಇರಲಿಲ್ಲವಾ? ಇಷ್ಟೆಲ್ಲಾ ಸೆಕ್ಯೂರಿಟಿ ಇದ್ದರೂ ಕೂಡ ಗೇಟ್ ಹಾರಿ ಬರಲು ಹೇಗೆ ಸಾಧ್ಯ? ಈ ಘಟನೆ ಹೇಗೆ ಆಗಿರಬಹುದು ಎನ್ನುವುದಕ್ಕೆ ಸರಿಯಾದ ಉತ್ತರಗಳು ಸಿಗುತ್ತಿಲ್ಲ.

ಮನೆಗೆ ಪ್ರವೇಶಿಸಿದ ವ್ಯಕ್ತಿ ಕೆಲಸದಾಕೆಯೊಂದಿಗೆ ಜಗಳವಾಡಿದ್ದಾನೆ ಎನ್ನಲಾಗುತ್ತಿದೆ. ನಟ ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ ಹಲ್ಲೆ ನಡೆದಿದೆ. ಹಾಗಾದರೆ ಸೈಫ್‌ ಮೇಲೆ ಅಟ್ಯಾಕ್ ಆಗಿದ್ದಕ್ಕೆ ಕಾರಣವೇನು? ಅಟ್ಯಾಕ್ ಮಾಡಿದರು ಯಾರು?

ಸೈಫ್ ರಾಜಮನೆತನದ ವ್ಯಕ್ತಿ

ಸೈಫ್ ರಾಜಮನೆತನದಿಂದ ಬಂದವರು. ಮುಂಬೈನಲ್ಲಿ ಕೋಟ್ಯಾಂತರ ಆಸ್ತಿಯ ಒಡೆಯ. ಬಾಲಿವುಡ್ ನಟರಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿದ ನಟರ ಪೈಕಿ ಸೈಫ್ ಅಲಿ ಖಾನ್ ಒಬ್ಬರು. ಇವರ ಮನೆ ಅರಮನೆಗೇನು ಕಡಿಮೆ ಇಲ್ಲ. ಹೀಗಾಗಿ ಇದನ್ನೆಲ್ಲಾ ನೋಡಿಕೊಳ್ಳಲು ಹಾಗೂ ಸೈಫ್ ರಕ್ಷಣೆಗಾಗಿ ಸಾಕಷ್ಟು ಭದ್ರತೆ ಇದೆ. ಇದೆಲ್ಲವನ್ನೂ ಮೀರಿ ಒಬ್ಬ ವ್ಯಕ್ತಿ ಮನೆ ಒಳಗೆ ಪ್ರವೇಶ ಮಾಡಿದ್ದಾನೆ ಅಂದರೆ ಆ ಕಳ್ಳನಿಗೆ ಸೈಫ್ ಮನೆಯವರದ್ದೇ ಸಹಕಾರ ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ದಾಳಿ ಮಾಡಿದ ಬಳಿಕ ಆ ವ್ಯಕ್ತಿ ಮನೆಯಿಂದ ತಪ್ಪಿಸಿಕೊಂಡಿದ್ದಾನೆ. ಇಷ್ಟೊಂದು ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ ಅಂದರೆ ಆತನಿಗೆ ಯಾರದ್ದೋ ಸಹಕಾರ ಇರಬೇಕು ಎನ್ನುವ ಶಂಕೆಯೂ ಇದೆ. ಹೀಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಹಾಗಾದರೆ ಸೈಫ್‌ ಮೇಲೆ ಅಟ್ಯಾಕ್‌ ಮಾಡಿದವರ ಹಿಂದೆ ಬಿಷ್ನೋಯ್ ಗ್ಯಾಂಗ್ ಕೈವಾಡವಿದಿಯಾ?

ಸೈಫ್‌ ಮೇಲೆ ಅಟ್ಯಾಕ್ ಹಿಂದೆ ಬಿಷ್ಣೋಯ್ ಗ್ಯಾಂಗ್

ಬಾಲಿವುಡ್‌ನ ಹಿರಿಯ ಹಾಗೂ ಖ್ಯಾತ ನಟನಾದ ಸಲ್ಮಾನ್‌ ಖಾನ್‌ಗೆ ಸುಮಾರು ವರ್ಷಗಳಿಂದ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರುತ್ತಲೇ ಇವೆ. ಸಲ್ಮಾನ್‌ ಖಾನ್‌ ಅವರಂತೆ ಸೈಫ್ ಅಲಿ ಅವರಿಗೂ ಜೀವ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬಂದಿರುವುದಿದೆ. ಆದರೆ ಪ್ರಸ್ತುತ ನಡೆದ ದಾಳಿಗೂ ಬಿಷ್ಣೋಯ್ ಗ್ಯಾಂಗ್‌ಗೂ ಸಂಬಂಧ ಇದಿಯಾ ಎನ್ನುವುದು ಖಾತರಿ ಆಗಿಲ್ಲ.

ಆದರೆ ಪದೇ ಪದೇ ತಮ್ಮ ನೆಚ್ಚಿನ ನಟರಿಗೆ ಬೆದರಿಕೆ ಸಂದೇಶಗಳು, ಗುಂಡಿನ ದಾಳಿ, ಕರೆಗಳು ಬರುವುದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇಂತಹ ಘಟನೆಗಳಿಂದ ಮುಂಬೈ ಪೊಲೀಸರು ಎಚ್ಚೆತ್ತುಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+