Sai Pallavi: ಸುಳ್ಳು ಸುದ್ದಿ ಹಬ್ಬಿಸಿದ್ರೆ ಸುಮ್ಮನೆ ಬಿಡಲ್ಲ ಎಂದ ಯಶ್ ಸಿನಿಮಾ ನಟಿ ಸಾಯಿ ಪಲ್ಲವಿ

ಸದಾ ನಗುಮುಖದಿಂದಲೇ ಇರುವ ನಟಿ ಸಾಯಿ ಪಲ್ಲವಿ, ತಮ್ಮ ಹೇಳಿಕೆಗಳಿಂದ ಆಗಾಗ್ಗೆ ಟೀಕೆಗಳನ್ನು ಎದುರಿಸಿದರೂ ಅವರು ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಕಡಿಮೆ. ಆದರೆ ಇತ್ತೀಚೆಗೆ ಅವರ ಬಗ್ಗೆ ಮಾಧ್ಯಮವೊಂದು ಮಾಡಿರುವ ವರದಿ ಸಾಯಿ ಪಲ್ಲವಿಗೆ ಭಾರಿ ಸಿಟ್ಟು ತರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

ಸಾಯಿ ಪಲ್ಲವಿ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆಯಿದೆ. ಸಾಯಿ ಪಲ್ಲವಿ ಸೀತೆ ಪಾತ್ರ ಮಾಡುವುದಕ್ಕೆ ಹಲವು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾ ತಂಡ ಇದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ.

Sai Pallavi Responds to Rumours of Going Vegetarian for Ramayana Role

ಇತ್ತೀಚೆಗೆ ಮಾಧ್ಯಮವೊಂದು ನಟಿ ಸಾಯಿ ಪಲ್ಲವಿ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರ ಮಾಡಲು ಸಸ್ಯಾಹಾರಿಯಾಗಿ ಬದಲಾಗಿದ್ದು, ಮಾಂಸ ಸೇವನೆ ನಿಲ್ಲಿಸಿದ್ದಾರೆ ಎಂದು ವರದಿ ಮಾಡಿತ್ತು. ಇದೇ ಸುದ್ದಿ ಇದೀಗ ಸಾಯಿ ಪಲ್ಲವಿ ಕೋಪಕ್ಕೆ ಕಾರಣವಾಗಿದೆ.

ಸುಮ್ಮನೆ ಬಿಡಲ್ಲ ಎಂದ ಸಾಯಿ ಪಲ್ಲವಿ

ಎಕ್ಸ್‌ ಖಾತೆಯಲ್ಲಿ ತಮ್ಮ ಬಗ್ಗೆ ಮಾಡಿರುವ ವರದಿಯನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ, "ಬಹುತೇಕ ಬಾರಿ ನನ್ನ ಬಗ್ಗೆ ಆಧಾರ ರಹಿತ ವದಂತಿಗಳು, ಸುಳ್ಳುಗಳು, ತಪ್ಪಾದ ಹೇಳಿಕೆಗಳನ್ನು ಹರಡುವಾಗ ನಾನು ಮೌನವಾಗಿರುತ್ತೇನೆ. ಆದರೆ ಇದು ನಿರಂತರವಾಗಿ ನಡೆಯುತ್ತಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಲು ಇದು ಉತ್ತಮ ಸಮಯವಾಗಿದೆ. ಯಾವುದೇ ಸಾಮಾಜಿಕ ಪುಟ, ಮಾಧ್ಯಮ ಅಥವಾ ವ್ಯಕ್ತಿಯು ಗಾಸಿಪ್ ಹೆಸರಿನಲ್ಲಿ ಹೀಗೆ ಅಸಹ್ಯದ ಕೆಟ್ಟ ಕಥೆಯನ್ನು ಬರೆದರೆ, ಕಾನೂನು ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಸಾಯಿ ಪಲ್ಲವಿ ಮೊದಲಿನಿಂದಲೂ ಸಸ್ಯಾಹಾರಿ

ತಮಿಳು ದಿನಪತ್ರಿಕೆಯೊಂದು ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕಾಗಿ ಮಾಂಸಾಹಾರ ಬಿಟ್ಟಿದ್ದಾರೆ ಎಂದು ವರದಿ ಮಾಡಿದೆ. ಆದರೆ ಇದು ಸುಳ್ಳು, ಸಾಯಿ ಪಲ್ಲವಿ ಮೊದಲಿನಿಂದಲೂ ಸಸ್ಯಾಹಾರಿಯಾಗಿದ್ದಾರೆ. ಅನೇಕ ಸಂದರ್ಭದಲ್ಲಿ ಸಾಯಿ ಪಲ್ಲವಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನ ಜೊತೆ ಅಡುಗೆಯವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರೆ.

ನಾನು ಮೊದಲಿನಿಂದಲೂ ಸಸ್ಯಾಹಾರಿ, ಒಂದು ಜೀವ ಸಾಯುವುದನ್ನು ನಾನು ನೋಡಲಾರೆ. ಇನ್ನೊಬ್ಬರನ್ನು ನೋಯಿಸುವುದಿಲ್ಲ ಅದು ಸರಿ ಎಂದು ನಾನು ಭಾವಿಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಸಾಧಿಸಿದ ಅಮರನ್ ಸಿನಿಮಾದಲ್ಲಿ ಶಿವ ಕಾರ್ತಿಕೇಯನ್ ಜೊತೆ ಸಾಯಿ ಪಲ್ಲವಿ ನಟಿಸಿದ್ದರು. ಸಾಯಿ ಪಲ್ಲವಿ ನಟನೆಗೆ ಭಾರಿ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಈಗ ರಾಮಾಯಣ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. 2025ರಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+