Sai Pallavi: ಬಿಕಿನಿ ಟ್ರೋಲ್‌ ಮಾಡಿದವರಿಗೆ ನಟಿ ಸಾಯಿ ಪಲ್ಲವಿ ಹೀಗಾ ಅನ್ನೋದು?

ಸಿಂಪಲ್‌ ಬ್ಯೂಟಿ, ಸಿಂಪಲ್‌ ಸ್ಟಾರ್‌ ಎಂದು ಕರೆಸಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಲಾಗುತ್ತಿದೆ. ಸಿಂಪಲ್‌ ಎನ್ನುತ್ತಾ ಎಲ್ಲ ನಟಿಯರಂತೆ ಬಿಕಿನಿ, ಸ್ವಿಮ್‌ಸೂಟ್‌ನಂತಹ ಮಾಡ್ರನ್‌ ಡ್ರೆಸ್‌ ಧರಿಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ತನ್ನ ಸಹೋದರಿ ಜೊತೆಗೆ ಪ್ರವಾಸ ಹೋಗಿದ ಫೋಟೋಗಳು ವೈರಲ್‌ ಆಗಿದ್ದವು. ಇದರಲ್ಲಿ ನಟಿಯ ಬಟ್ಟೆ ಬಗ್ಗೆ ಟ್ರೋಲ್‌ ಮಾಡಲಾಗಿತ್ತು. ಕೆಲವರು ಎಐ ಬಳಸಿ ಬಿಕಿನಿ ಧರಿಸಿರುವಂತಹ ಫೋಟೋ ಎಡಿಟ್‌ ಮಾಡಿ ವಿಕೃತಿ ಮೆರೆದಿದ್ದರು. ಈ ಎಲ್ಲದಕ್ಕೂ ಸಾಯಿ ಪಲ್ಲವಿ ಸರಿಯಾಗಿ ಜಾಡಿಸಿದ್ದು, ಟ್ರೋಲ್‌ ಮಾಡುವವರ ಬಾಯಿಗೆ ಬೀಗ ಜಡಿದಿದ್ದಾರೆ.

ಸಾಯಿ ಪಲ್ಲವಿ ಅವರ ನೈಜ ನಟನೆ ಹಾಗೂ ಸರಳತೆಗೆ ಹೆಚ್ಚಿನ ಮಂದಿ ಫ್ಯಾನ್ಸ್‌ ಇದ್ದಾರೆ. ಬೇರೆ ನಟಿಯರಂತೆ ಸಾಯಿ ಪಲ್ಲವಿ ಬೋಲ್ಡ್‌ ಹಾಗೂ ಮಾಡ್ರನ್‌ ಬಟ್ಟೆಗಳನ್ನ ಧರಿಸಲ್ಲ ಎಂಬ ಮಾತೂ ಇದೆ. ಹೀಗಿದ್ದಾಗ ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಬಿಕಿನಿ ಫೋಟೋಗಳು ವೈರಲ್‌ ಆಗಿದ್ದವು. ಸ್ವಿಮ್‌ಸೂಟ್‌, ಬಿಕಿನಿ ಬಟ್ಟೆಗಳಲ್ಲಿ ನಟಿಯನ್ನ ಕಂಡು ಅವರು ಅಭಿಮಾನಿಗಳು ಶಾಕ್‌ ಆಗಿದ್ದರು.

Sai Pallavi Reacts To Bikini Trolls Shuts Down Fake AI Photos

ಇದೇನಿದು ಸಾಯಿ ಪಲ್ಲವಿಯ ಅವತಾರಾ? ಇದನ್ನ ನಿಮ್ಮಿಂದ ನಾವು ನಿರೀಕ್ಷಿಸಿರಲಿಲ್ಲ ಎಂದು ಆ ಫೋಟೋಗಳನ್ನು ನಂಬಿದ್ದರು. ಕೆಲವರು ಇದೇ ವಿಚಾರವಾಗಿ ಅವರನ್ನ ಟ್ರೋಲ್‌ ಕೂಡ ಮಾಡಿದ್ದರು. ಸಿಂಪಲ್‌ ಎಂದು ಡವ್‌ ಮಾಡ್ತಾರೆ, ಆ ಮೇಲೆ ಅವಕಾಶಗಳು ಕಡಿಮೆ ಆದಾಗ ಈ ರೀತಿ ಅವತಾರ ಎತ್ತುತ್ತಾರೆ ಎಂದೆಲ್ಲ ಟ್ರೋಲ್‌ ಮಾಡುತ್ತಿದ್ದಾರೆ. ಕೆಲವರು ಇದೇ ವಿಚಾರವನ್ನು ದುರ್ಬಳಕೆ ಮಾಡಿಕೊಂಡು ಎಐ ಬಳಸಿ ಸಾಯಿ ಪಲ್ಲವಿ ಅವರ ಬೋಲ್ಡ್‌ ಫೋಟೋಗಳನ್ನ ಕ್ರಿಯೇಟ್‌ ಮಾಡಿ ವೈರಲ್‌ ಕೂಡ ಮಾಡಿದ್ದಾರೆ.

ಸಾಮಾನ್ಯವಾಗಿ ಸಾಯಿ ಪಲ್ಲವಿ ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವವರಲ್ಲ. ಆದರೆ ಬಿಕಿನಿ ವಿಚಾರದಲ್ಲಿ ಅವರ ಮೇಲೆ ಮಾಡಿರುವ ಟ್ರೋಲ್‌ಗಳಿಂದ ಅವರ ಅಭಿಮಾನಿಗಳಿಗೆ ತಪ್ಪು ಮಾಹಿತಿಯಂತೂ ಹೋಗಿದೆ. ಕೆಲವರು ಇದನ್ನ ನಿಜ ಎಂದು ನಂಬಿರುವ ಕಾರಣ ಕ್ಲಾರಿಟಿ ಕೊಟ್ಟಿದ್ದಾರೆ. ಟ್ರೋಲ್‌ ಮಾಡುವವರಿಗೆ ಒಂದೇ ಸಾಲಿನಲ್ಲಿ ಕೌಂಟರ್‌ ಕೂಡ ನೀಡಿದ್ದಾರೆ.

ಸಾಯಿ ಪಲ್ಲವಿ ಸಹೋದರಿ ಪೂಜಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಫೋಟೋಗಳನ್ನು ಮಾರ್ಫ್ ಮಾಡಿದ್ದಾರೆ. ಚಿತ್ರಗಳನ್ನು ಬಳಸಿಕೊಂಡು ಕೆಲವರು ಸಾಯಿ ಪಲ್ಲವಿ ಬಿಕಿನಿ ಧರಿಸಿರುವಂತೆ ಕಾಣುವಂತೆ ಮಾಡಿದ್ದಾರೆ. ಇದಕ್ಕೆ ಸಾಯಿ ಪಲ್ಲವಿ ಮತ್ತೊಂದು ಪ್ರವಾಸದ ವಿಡಿಯೋ ಶೇರ್‌ ಮಾಡಿಕೊಂಡು ಕೌಂಟರ್‌ ನೀಡಿದ್ದಾರೆ. ಇದಕ್ಕೆ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಅವರು ಹೊಸ ರೀಲ್ ಹಂಚಿಕೊಂಡಿದ್ದಾರೆ. "ಈ ಎಲ್ಲ ಚಿತ್ರಗಳು ಒರಿಜಿನಲ್‌, ಇದು ಎಐನಿಂದ ಮಾಡಿದ್ದಲ್ಲ" ಎಂದು ಟಾಂಗ್‌ ನೀಡಿದ್ದಾರೆ. ಈ ಸಾಲಿನ ಮೂಲಕ ಟ್ರೋಲ್‌ ಮಾಡುವವರ ಬಾಯಿಗೆ ಬೀಗ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+