ಸುದೀಪ್ ಬಗ್ಗೆ ಸಚಿನ್ ಮಾತು: ನೋಡ.. ನೋಡ.. ಎಷ್ಟು ಚೆಂದ!
ಕಿಚ್ಚ ಸುದೀಪ್ ಅಂದ್ರೆ ಕರ್ನಾಟಕ ಮಾತ್ರವಲ್ಲ ಆಲ್ ಇಂಡಿಯಾ ಹವಾ ಜೋರಾಗಿದೆ. ಈ ಕಾರಣಕ್ಕೆ ಸುದೀಪ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಕಿಚ್ಚ ಸುದೀಪ್ ಅವರ ನಟನೆಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಕಿಚ್ಚ ಸುದೀಪ್ ಸಿನಿಮಾ ಮಾತ್ರ ಅಲ್ಲ, ತಮ್ಮ ಕ್ರಿಕೆಟ್ ಪ್ರೀತಿಯಿಂದ ಕೂಡ ಸದಾ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಈಗ ಕಿಚ್ಚ ಸುದೀಪ್ ಮತ್ತು ಸಚಿನ್ ನಡುವಿನ ಸ್ನೇಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಸುದೀಪ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನೂ ತುಂಬಾ ಚೆನ್ನಾಗಿ ಗೊತ್ತು. ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಕ್ರಿಕೆಟ್ ಕಂಪು ಹರಿಸಿದ ಕೀರ್ತಿ ಇದೇ ಸುದೀಪ್ ಅವರಿಗೆ ಸಲ್ಲಬೇಕಿದೆ. ಹೀಗಾಗಿ ಸುದೀಪ್ ಅವರು ಟೀಂ ಇಂಡಿಯಾದ ಪ್ರತಿ ಪ್ಲೇಯರ್ಸ್ ಜೊತೆ ಉತ್ತಮವಾಗಿ ಸ್ನೇಹ & ಸಂಬಂಧ ಇಟ್ಟುಕೊಂಡಿದ್ದಾರೆ. ಅದೇ ರೀತಿ ಈ ಸ್ನೇಹ ಇದೀಗ ಮತ್ತೊಮ್ಮೆ ಜಗತ್ತಿಗೇ ಗೊತ್ತಾಗಿದೆ. ಕಿಚ್ಚ ಸುದೀಪ್ ಬಗ್ಗೆ ಸ್ವತಃ ಸಚಿನ್ ಈಗ ಪೋಸ್ಟ್ ಒಂದನ್ನ ಹಾಕಿದ್ದು ಎಲ್ಲೆಲ್ಲೂ ವೈರಲ್ ಆಗುತ್ತಿದೆ.

ಸ್ಪೆಷಲ್ ಫೋಟೋ ಹಂಚಿಕೊಂಡ ಸಚಿನ್
ಅಷ್ಟಕ್ಕೂ ಈ ಹಿಂದೆ ಸ್ಟಾರ್ ಕ್ರಿಕೆಟರ್ ಸಚಿನ್ ಅವರು ಹಾಗೂ ಸುದೀಪ್ ಒಂದೇ ವೇದಿಕೆ ಮೇಲೆ ಇದ್ದರು. ಆ ಕಾರ್ಯಕ್ರಮ ಸಂದರ್ಭದಲ್ಲಿ ನಟ ಸುದೀಪ್ & ಸಚಿನ್ ಆತ್ಮೀಯವಾಗಿ ಮಾತನಾಡಿದ್ದರು. ಇದೇ ವೇಳೆ ಯಾರೋ ಒಬ್ಬರು ಆ ಫೋಟೋ ಕೂಡ ಕ್ಲಿಕ್ ಮಾಡಿದ್ರು. ಈಗ ಅದೇ ಫೋಟೋ ಫುಲ್ ವೈರಲ್ ಆಗುತ್ತಿದೆ. ಹಾಗೇ ಸುದೀಪ್ ಮತ್ತು ಸಚಿನ್ ನಡುವೆ ಇರುವ ಸ್ನೇಹ ಕಂಡು ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಇನ್ನು ಈಗ ನಟ ಸುದೀಪ್ ಅವರು ಸಚಿನ್ ಅವರ ಪೋಟೋ + ಪೋಸ್ಟ್ ಶೇರ್ ಮಾಡಿ ಖುಷಿಪಟ್ಟಿದ್ದಾರೆ.
ಸುದೀಪ್ + ಸಚಿನ್ ಫೋಟೋ ವೈರಲ್
ಇನ್ನು ಹಲವು ದಿನದಿಂದ ಸಚಿನ್ & ಸುದೀಪ್ ಅವರ ಫೋಟೋ ವೈರಲ್ ಆಗುತ್ತಿತ್ತು. ಈ ರೀತಿ ವೈರಲ್ ಆಗುತ್ತಿದ್ದ ಫೋಟೋ ಶೇರ್ ಮಾಡಿರುವ ಸಚಿನ್ ತೆಂಡೂಲ್ಕರ್ ಅವರು ಈಗ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. 'ನಿಮ್ಮ ಜೊತೆಗಿನ ಈ ಭೇಟಿಯು ತುಂಬಾ ಖುಷಿ ಕೊಟ್ಟಿತ್ತು. ಅಲ್ಲದೆ ಆ ದಿನ ಯಾರೋ ನಮ್ಮ ಫೋಟೋ ಎಷ್ಟು ಸುಂದರವಾಗಿ ತೆಗೆದಿದ್ದಾರೆ ನೋಡಿ. ನಿಮಗೆ ದೇವರು ಸದಾ ಉತ್ತಮ ಆರೋಗ್ಯ & ಸಂತೋಷವನ್ನು ನೀಡಲಿ ಎಂದು ನಾನು ಕೋರಿ ಕೊಳ್ಳುತ್ತೇನೆ' ಎಂದು ನಟ ಕಿಚ್ಚ ಸುದೀಪ್ ಅವರಿಗೆ, ಸಚಿನ್ ತೆಂಡೂಲ್ಕರ್ ಶುಭ ಕೋರಿದ್ದಾರೆ. ಹಾಗೇ ಸುದೀಪ್ ಕೂಡ ಸಚಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕಿಚ್ಚ ಸುದೀಪ್ ಹೇಳಿದ್ದು ಏನು?
ಇನ್ನು ಈ ಪೋಸ್ಟ್ ಅನ್ನ ರೀ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, 'ವಾಹ್.. ನಾನು ಇದನ್ನು ಅಂದಕೊಂಡಿರಲಿಲ್ಲ.. ನೀವು ನನಗೆ ಮತ್ತೊಂದು ಅವಿಸ್ಮರಣೀಯವಾದ ಸಮಯವನ್ನು ಉಡುಗೊರೆಯಾಗಿ ನೀಡಿದ್ದೀರಿ.. ಮಚ್ ಲವ್ & ವಿಶಸ್ ಆಲ್‌ವೇಸ್ ಸಚಿನ್ ಸರ್' ಎಂದು ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್ ಅವರು. ಇದೀಗ ಈ ಟ್ವೀಟ್ ಫುಲ್ ವೈರಲ್ ಆಗಿದ್ದು, ಒಂದು ಕಡೆ ಸಚಿನ್ ಅವರ ಅಭಿಮಾನಿಗಳು ಹಾಗೇ ಇನ್ನೊಂದು ಕಡೆ ಸುದೀಪ್ ಅವರ ಫ್ಯಾನ್ಸ್ ಖುಷ್ ಆಗಿದ್ದಾರೆ.

ಒಟ್ನಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ನಮ್ಮ ಕಿಚ್ಚ ಸುದೀಪ್ ಅವರು, ಭಾರತೀಯ ಕ್ರಿಕೆಟ್ ಆಟಗಾರರ ಹೃದಯವನ್ನ ಕೂಡ ಅದೇ ರೀತಿ ಗೆದ್ದಿದ್ದಾರೆ. ಇದೀಗ ಸಚಿನ್ ಅವರು ಸುದೀಪ್ ಅವರ ಗುಣಗಾನ ಮಾಡಿರುವುದು ಕೂಡ ಇದೇ ಕಾರಣಕ್ಕೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ದೊಡ್ಡ ಕ್ರಿಕೆಟ್ ಹಬ್ಬ ಬರಲಿದೆಯಾ? ಎಂಬ ಕುತೂಹಲದ ಪ್ರಶ್ನೆಯನ್ನು ಈಗ ಫ್ಯಾನ್ಸ್ ಕೇಳುತ್ತಿದ್ದಾರೆ.












Click it and Unblock the Notifications