Get Updates
Get notified of breaking news, exclusive insights, and must-see stories!

Yash Birthday: ನಮ್ಮ ಮೆಟ್ರೋ ಮೇಲೆ ರಾರಾಜಿಸಿದ ನಟ ಯಶ್‌, ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸರ್‌ಪ್ರೈಸ್‌

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 8ರಂದು ಯಶ್‌ ಹುಟ್ಟುಹಬ್ಬ ಇರುವ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಈಗಾಗಲೇ ದೊಡ್ಡ ದೊಡ್ಡ ಫೆಕ್ಸ್‌ ಹಾಕಿಸಿ ಅಭಿಮಾನ ಮೆರೆಯುತ್ತಿದ್ದಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಮೆಟ್ರೋ ಮೂಲಕ ಯಶ್‌ ಅವರ ಬರ್ತ್‌ಡೇ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಯಶ್‌ ಅವರ ಹುಟ್ಟುಹಬ್ಬಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಮೈಸೂರು ರಸ್ತೆ ಹಾಗೂ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ವಿವಿಧೆಡೆ ಯಶ್‌ ಅವರ ಬೃಹತ್‌ ಪೋಸ್ಟರ್‌ಗಳನ್ನು ಹಾಕಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಅಭಿಮಾನಕ್ಕೆ ಮಿತಿಯಿಲ್ಲ ಎನ್ನುವಂತೆ ಕೆಲವರು ನಮ್ಮ ಮೆಟ್ರೋ ರೈಲಿನ ಮೇಲೆ ಯಶ್‌ ಅವರನ್ನು ರಾರಾಜಿಸುವಂತೆ ಮಾಡಿದ್ದಾರೆ. ಮೆಟ್ರೋ ರೈಲಿನುದ್ದಕ್ಕೂ ಯಶ್‌ ಅವರ ಫೋಟೋಗಳನ್ನು ಜಾಹೀರಾತಿನಂತೆ ಅಂಟಿಸಿ, ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

Rocking Star Yash Shines on Namma Metro Fans Grand Birthday Surprise Goes Viral

ನೇರಳೆ ಮಾರ್ಗದ ಮೆಟ್ರೊ ಮೇಲೆ ಯಶ್

ಈ ಹಿಂದೆ ನಮ್ಮ ಮೆಟ್ರೋದಲ್ಲಿ ಈ ರೀತಿ ವಾಣಿಜ್ಯ ಜಾಹೀರಾತುಗಳನ್ನು ನೀಡಲಾಗುತ್ತಿತ್ತು. ಈಗ‌ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿನ ಮೇಲೆ ಯಶ್‌ ಅವರ ಹುಟ್ಟುಬಹಬ್ಬಕ್ಕೆ ಶುಭಕೋರುವ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಈ ವಿಡಿಯೋ ಹಂಚಿಕೊಂಡಿರುವ ಯಶ್‌ ಅಭಿಮಾನಿಗಳು "ಬಾಸ್‌ ಅಂದ್ರೆ ಆ ರೇಂಜ್‌ ಇರ್ಬೇಕು" ಎಂದು ಭುಜ ತಟ್ಟಿಕೊಂಡಿದ್ದಾರೆ.

ಕೆಜಿಎಫ್‌ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್‌ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಈ ಬಾರಿ ವಿಭಿನ್ನವಾಗಿ ಆಚರಿಸಿದ್ದಾರೆ. ಸಾಮಾನ್ಯವಾಗಿ ಕೇಕ್‌, ಫ್ಲೆಕ್ಸ್‌, ಬ್ಯಾನರ್‌ಗಳಲ್ಲೇ ಸೀಮಿತವಾಗುವ ಸಂಭ್ರಮಕ್ಕೆ ಈ ಬಾರಿ ಹೊಸ ಆಯಾಮ ಸಿಕ್ಕಿದೆ. ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮೇಲೆ ರಾರಾಜಿಸಿದ ಯಶ್‌ ಅವರ ಭರ್ಜರಿ ಚಿತ್ರ ಅಭಿಮಾನಿಗಳ ಸರ್‌ಪ್ರೈಸ್‌ ಆಗಿ ಎಲ್ಲರ ಗಮನ ಸೆಳೆದಿದೆ.

ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ನಮ್ಮ ಮೆಟ್ರೋ ರೈಲಿನ ಹೊರಭಾಗದಲ್ಲಿ ಅವರ ವಿಶೇಷ ಚಿತ್ರವನ್ನು ಅಳವಡಿಸಿದ್ದಾರೆ. ಮೆಟ್ರೋ ನಿಲ್ದಾಣಗಳಿಗೆ ಪ್ರವೇಶಿಸುತ್ತಿದ್ದ ಪ್ರಯಾಣಿಕರಿಗೆ, ಮೆಟ್ರೋ ಮೂಲಕ ಸಂಚರಿಸುತ್ತಿದ್ದ ಜನರಿಗೆ ಇದು ಅಚ್ಚರಿಯ ಸಂತೋಷ ತಂದಿದೆ. ರಾಕಿಂಗ್ ಸ್ಟಾರ್‌ನ ಸ್ಟೈಲಿಶ್ ಲುಕ್‌, ಪವರ್‌ಫುಲ್‌ ಪರ್ಸನಾಲಿಟಿಯನ್ನು ತೋರಿಸುವ ಈ ಚಿತ್ರ, ಕ್ಷಣಾರ್ಧದಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಧಾರಣ ಹಿನ್ನೆಲೆಯಿಂದ ಬಂದು, ಕಠಿಣ ಪರಿಶ್ರಮದ ಮೂಲಕ ಸೂಪರ್‌ಸ್ಟಾರ್‌ ಸ್ಥಾನಕ್ಕೇರಿದ ಯಶ್‌ ಇಂದು ಯುವಕರಿಗೆ ಪ್ರೇರಣೆಯಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಈ ರೀತಿ ವಿಶಿಷ್ಟವಾಗಿ ಆಚರಿಸುವುದರ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರೀತಿಯ ಗೌರವ ಸಲ್ಲಿಸಿದ್ದಾರೆ. ನಮ್ಮ ಮೆಟ್ರೋ ಮೇಲೆ ರಾರಾಜಿಸಿದ ಯಶ್‌ ಚಿತ್ರ, ಈ ವರ್ಷದ ಹುಟ್ಟುಹಬ್ಬ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದೆ.

ಫ್ಯಾನ್ಸ್‌ ಜೊತೆ ಹುಟ್ಟುಹಬ್ಬ ಆಚರಣೆಗೆ ಬೇಡಿಕೆ

ನಟ ಯಶ್‌ ಅವರು ಕಳೆದ ಮೂರು ವರ್ಷಗಳಿಂದಲೂ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿಲ್ಲ. ಪ್ರತಿ ಬಾರಿಯೂ ನಾನು ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ, ಆಚರಣೆ ನಡೆಯಲ್ಲ ಎಂದು ಅಭಿಮಾನಿಗಳಿಗೆ ಬೇಸರದ ಸಂದೇಶ ನೀಡುತ್ತಿದ್ದರು. ಆದರೆ ಈ ವರ್ಷ ಯಶ್‌ ಅವರ ಟಾಕ್ಸಿಕ್‌ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿ ದೊಡ್ಡಮಟ್ಟದಲ್ಲಿ ಹುಟ್ಟುಹಬ್ಬದ ಆಚರಣೆಗೆ ಫ್ಯಾನ್ಸ್‌ ಸಜ್ಜಾಗಿದ್ದಾರೆ.

ಈ ವರ್ಷ ಯಶ್‌ ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮೂಲಗಳ ಪ್ರಕಾರ ಯಶ್‌ ಟಾಕ್ಸಿಕ್‌ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗುವುದು ಅನುಮಾನ. ಆದರೆ ಈ ವರ್ಷದ ಯಶ್‌ ಅವರು ನಮಗೆ ದರ್ಶನ ನೀಡಲೇಬೇಕು ಎನ್ನುವುದು ಅಭಿಮಾನಿಗಳ ಆಸೆ. ಇನ್ನು ಎರಡೇ ದಿನ ಬಾಕಿ ಇರುವ ಕಾರಣ, ಖುದ್ದು ಯಶ್‌ ಅವರೇ ಏನಾದ್ರೂ ಅಪ್‌ಡೇಟ್‌ ಕೊಡ್ತಾರೆ ಎಂದು ಕಾದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+