ರಾವಣ ಯಶ್ ಎದುರು ಠುಸ್ಸ್ ಪಟಾಕಿ ಆಗಿ ಹೋದ ರಣಬೀರ್ ಕಪೂರ್! Yash Ramayana
ಕನ್ನಡಿಗ ಯಶ್ ಕರ್ನಾಟಕದ ಶಕ್ತಿಯನ್ನು ಇಡೀ ಜಗತ್ತಿನಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದು & ಆ ಮೂಲಕ ಕನ್ನಡ ಸಿನಿಮಾಗಳು ವರ್ಲ್ಡ್ ಲೆವೆಲ್ ಹಿಟ್ ಪಡೆಯುವಂತೆ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಅಂತಾ ಅಭಿಮಾನಿಗಳ ಬಾಯಿಂದ ಪ್ರೀತಿಯ ಬಿರುದು ಪಡೆದಿರುವ ನಟ ಯಶ್ ಅವರಿಗೆ ಇದೀಗ ಹೊಸ ಟಾಸ್ಕ್ ಶುರುವಾಗಿದೆ. ರಾಮಾಯಣದ ಕಾಲಕ್ಕೆ ಹೋಗಿ, ರಾವಣನ ಪಾತ್ರ ಮಾಡಲು ಮುಂದಾಗಿದ್ದ ಕನ್ನಡ ನಾಡಿನ ನಟ ಮೊದಲ ಲುಕ್‌ನಲ್ಲಿ ಇಡೀ ಜಗತ್ತಿನ ಮನಸ್ಸು ಗೆದ್ದಿದ್ದಾರೆ!
ಹೌದು, ರಾಕಿಂಗ್ ಸ್ಟಾರ್ ಯಶ್ ಅವರು ಏನೇ ಮಾಡಿದ್ರೂ ಪರ್ಫೆಕ್ಟ್ ಆಗಿ ಮಾಡ್ತಾರೆ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಕೆಜಿಎಫ್ ಮೂಲಕ ಜಗತ್ತಿನಾದ್ಯಂತ ಸೌಂಡ್ ಮಾಡುವಂತೆ ಮಾಡಿದ್ದರು ಯಶ್. ಇದೇ ಯಶ್ ಅವರು ಇದೀಗ ರಾಮಾಯಣದ ಕಾಲಕ್ಕೆ ಹೋಗಿ, ರಾಮನಿಗೇ ಸವಾಲು ಹಾಕಿದ್ದ ರಾವಣನ ಪಾತ್ರ ಮಾಡಿದ್ದಾರೆ. ಸುಮಾರು 835 ಕೋಟಿ ರೂಪಾಯಿ ಬಜೆಟ್ ಹಾಕಿ ತೆಗೆಯುತ್ತಿರುವ 'ರಾಮಾಯಣ' ಸಿನಿಮಾದಲ್ಲಿ ರಾವಣ ಪಾತ್ರವನ್ನು ಖುದ್ದು ರಾಕಿಂಗ್ ಸ್ಟಾರ್ ಯಶ್ ಅವರೇ ಮಾಡಿದ್ದಾರೆ. ಇಂದು 'ರಾಮಾಯಣ' ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದ್ದು, ಯಶ್ ಅಬ್ಬರಕ್ಕೆ ಸಿನಿಮಾ ಮಂದಿ ಕೂಡ ಕಣ್ ಕಣ್ ಬಿಟ್ಟಿದ್ದಾರೆ...

ರಾಕಿಂಗ್ ಸ್ಟಾರ್ ಹವಾ ಜೋರು!
ನಮಿತ್ ಮಲ್ಹೋತ್ರ ಬಂಡವಾಳ ಹಾಕಿ, 835 ಕೋಟಿ ರೂಪಾಯಿ ಖರ್ಚು ಮಾಡಿ 'ರಾಮಾಯಣ' ಸಿನಿಮಾ ಮಾಡುತ್ತಿದ್ದಾರೆ. ಹೀಗೆ ಸಿದ್ಧವಾಗಿರುವ ಸಿನಿಮಾ ಬಾಲಿವುಡ್ ಲೆವೆಲ್ ಮೀರಿ ಹೋಗಿದ್ದು, ಹಾಲಿವುಡ್ ಅಂದ್ರೆ ಇಂಗ್ಲಿಷ್ ಸಿನಿಮಾಗಳನ್ನೇ ಮೀರಿಸುವ ಮುನ್ಸೂಚನೆ ನೀಡುತ್ತಿದೆ. ಇಂದು ರಿಲೀಸ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಸಿನಿಮಾದ ಫಸ್ಟ್ ಲುಕ್‌ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ ಕನ್ನಡಿಗ ಯಶ್. ಅಲ್ಲದೆ ಹಾಲಿವುಡ್ ಮಂದಿ ಕೂಡ ಇದನ್ನ ನೋಡಿ ಯಶ್ ಅವರಿಗೆ ಜೈ ಅಂತಿದ್ದಾರೆ...
2000 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ?
ರಾವಣನ ಲುಕ್ ಪಡೆದು, ಭರ್ಜರಿಯಾಗಿ ಕಾಸ್ಟ್ಯೂಮ್ ಹಾಕಿಕೊಂಡು ಎಂಟ್ರಿ ಕೊಡುವ ಯಶ್ ಒಂದೇ ಒಂದು ಲುಕ್ ಮೂಲಕ ಭಾರಿ ದೊಡ್ಡ ಸದ್ದು ಮಾಡಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಕಾಣಿಸಲಿದ್ದು, ದೇವರಿಗೆಲ್ಲಾ ದೇವ ಎನಿಸಿಕೊಳ್ಳುವ ಶಿವನ ಪಾತ್ರದಲ್ಲಿ ಮೋಹಿತ್ ರೈನಾ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಅದರಲ್ಲೂ ಯಶ್ ಅವರ 'ರಾಮಾಯಣ' ಸಿನಿಮಾದ VFX ಹಾಲಿವುಡ್ ಸಿನಿಮಾಗಳನ್ನೂ ಮೀರಿಸುವಂತೆ ಇದೆ ಅಂತಾನೇ ವೀಕ್ಷಕರು ಹೇಳುತ್ತಿದ್ದಾರೆ. ಸುಮಾರು 835 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ 'ರಾಮಾಯಣ' ಸಿನಿಮಾ 2000 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ.












Click it and Unblock the Notifications