ಕ್ಯಾರವಾನ್ ಒಳಗೆ ಮಲಗುತ್ತಿರುವ ನಟ ಯಶ್ ಅವರು
ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಇಂಟರ್ನ್ಯಾಷನಲ್ ಲೆವೆಲ್‌ಗೆ ಮುಟ್ಟಿಸಿದ ಕೀರ್ತಿ ಯಶ್ ಅವರಿಗೆ ಸಲ್ಲಬೇಕು ಅಂತಾರೆ ಅವರ ಅಭಿಮಾನಿಗಳು. ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಹಿಂದಿ ಸಿನಿಮಾ ರಂಗದ ದೊಡ್ಡ ದೊಡ್ಡ ನಟರೆಲ್ಲರೂ ರಾಕಿಭಾಯ್ ಕನ್ನಡಿಗ ಯಶ್ ಅವರಿಗೆ ಅಭಿಮಾನಿಗಳೇ ಆಗಿದ್ದಾರೆ. ಹೀಗಿದ್ದಾಗಲೇ, ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ? ಬೆಂಗಳೂರಿನಲ್ಲೇ ಇದ್ದರೂ ಮನೆಗೆ ಹೋಗಿಲ್ಲ...
ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಪ್ರೀತಿಸಿ ಮದುವೆ ಆಗಿದ್ದರು. ಹತ್ತಾರು ವರ್ಷ ಪ್ರೀತಿ ಮಾಡಿ ಮದುವೆ ಆಗಿದ್ದ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ. ಯಾಕಂದ್ರೆ ಬರೀ ಮದುವೆ ಆಗು, ಡಿವೋರ್ಸ್ ಕೊಡು ಅನ್ನೋ ಈಗಿನ ಕಾಲದಲ್ಲಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿ ಸಮಾಜಕ್ಕೆ ಮಾದರಿ ಆಗಿದೆ. ಹೀಗಿದ್ದಾಗಲೇ, ಹಲವು ದಿನಗಳಿಂದ ಬೆಂಗಳೂರಲ್ಲಿ ಇದ್ದರೂ ನಟ ಯಶ್ ಅವರು ತಮ್ಮ ಮನೆಗೇ ಹೋಗಿಲ್ಲವಂತೆ! ಹೀಗಾಗಿ, ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ?

ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ?
ಕನ್ನಡ ಸಿನಿಮಾ ಇಂಡಸ್ಟ್ರಿಗೇ ಹಾಲಿವುಡ್ ಲೆವೆಲ್ ಹೈಪ್ ಕೊಡಿಸಿದ ಕೀರ್ತಿಯು ಮಾನ್ಯ ಯಶ್ ಅಥವಾ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತೆ. ಯಾಕಂದ್ರೆ ಕನ್ನಡ ಸಿನಿಮಾಗಳ ನೋಡಲು ಹಿಂದೆ & ಮುಂದೆ ಯೋಚನೆ ಮಾಡುತ್ತಿದ್ದ ಪರಭಾಷಿಕರಿಗೆ ಮುಟ್ಟಿ, ಮುಟ್ಟಿ ನೋಡಿಕೊಳ್ಳುವ ರೀತಿ ಮಾಂಜಾ ಕೊಟ್ಟಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರು. ಹೀಗಿದ್ದಾಗಲೇ, ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ? ಬೆಂಗಳೂರಿನಲ್ಲೇ ಇದ್ದರೂ ಮನೆಗೆ ಹೋಗಿಲ್ಲ...
ಮನೆಗೆ ಯಾಕೆ ಹೋಗುತ್ತಿಲ್ಲ ಯಶ್?
ಹೌದು, ರಾಕಿಂಗ್ ಸ್ಟಾರ್ ಯಶ್ ಅವರು ಇಷ್ಟು ದಿನಗಳ ಕಾಲ ತಮ್ಮ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಸಲು ಮುಂಬೈ ಸೇರಿದಂತೆ ಇತರ ನಗರಗಳಿಗೆ ಹೋಗಿದ್ದರು. ಆದರೆ ಇದೀಗ ಬೆಂಗಳೂರಿನಲ್ಲೇ ಸೆಟ್ ಹಾಕಿದ್ದು, ಹಲವು ದಿನಗಳಿಂದ ಬೆಂಗಳೂರಿನಲ್ಲೇ ಶೂಟಿಂಗ್ ಆಗ್ತಾ ಇದೆ. ಹೀಗಿದ್ದರೂ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲವಂತೆ.
ಅದು ಬರೋಬ್ಬರಿ 10 ದಿನಗಳಿಂದ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲ, ಬೆಂಗಳೂರಿನಲ್ಲೇ ಇದ್ದರೂ ಯಶ್ ಅವರು ತಮ್ಮ ಮನೆಗೆ ಹೋಗಿಲ್ಲ ಅನ್ನೋ ಸುದ್ದಿ ದೊಡ್ಡದಾಗಿ ಹಬ್ಬಿದೆ. ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ? ಎಂಬ ಚರ್ಚೆ ಹುಟ್ಟುಹಾಕಿದೆ. ಇದೇ ಸಮಯದಲ್ಲಿ ಪಕ್ಕಾ ಉತ್ತರ ಕೂಡ ಸಿಕ್ಕಿದ್ದು, ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್ ಬೇಗ ಮುಗಿಸಲು ಹೀಗೆ ಮಾಡಿದ್ದಾರಂತೆ!
ಸೋಷಿಯಲ್ ಮೀಡಿಯಾದಲ್ಲಿ ವದಂತಿ ಜೋರು!
ಮನೆಗೆ ಹೋಗಿ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ, ಶೂಟಿಂಗ್ ಜಾಗದಲ್ಲೇ ಯಶ್ ಅವರು ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾರಾವಾನ್ ಒಳಗೆ ಯಶ್ ಮಲಗುತ್ತಿದ್ದು, ಅಲ್ಲೇ ಎದ್ದು ಶೂಟಿಂಗ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಯಶ್ ಅವರು ಬೆಂಗಳೂರಿನಲ್ಲಿ ಇದ್ದರೂ ಮನೆಗೆ ಹೋಗಿಲ್ಲ ಎನ್ನಲಾಗಿದೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಾಳಲ್ಲಿ ಬಿರುಗಾಳಿ? ಎಂಬ ರೀತಿ ಸುದ್ದಿ ಹಬ್ಬಿಸುತ್ತಿದ್ದು, ಇದು ವದಂತಿ ಎನ್ನಲಾಗಿದೆ.












Click it and Unblock the Notifications