Chandan Shetty: ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ಬೆಂಗಳೂರು ಜುಲೈ 17: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ. ಶೀಘ್ರದಲ್ಲೇ ಚಾರ್ಚ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 33 ಸಿಸಿಟಿವಿ ಕ್ಯಾಮರಾ ದೃಶ್ಯಗಳೇ ದರ್ಶನ್ ವಿರುದ್ಧ ಪ್ರಮುಖ ಸಾಕ್ಷಿಗಳಾಗಿವೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅನೇಕ ನಟ ನಟಿಯರು ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಇದೀಗ ದರ್ಶನ್ ಬಗ್ಗೆ ಚಂದನ್ ಶೆಟ್ಟಿ ಕೂಡ ಮೌನ ಮುರಿದಿದ್ದಾರೆ.
ಚಂದನವನದಲ್ಲಿ ದರ್ಶನ್ ತೂಗುದೀಪ್ ಅವರದ್ದೇ ಸುದ್ದಿ. ಯಾರನ್ನೇ ಮಾತನಾಡಿಸಿದರೂ ದರ್ಶನ್ ಕೇಸ್ ಏನಾಯ್ತು ಅಂತ ಮಾತು ಶುರು ಮಾಡುವವರೆ ಜಾಸ್ತಿ ಆಗಿಬಿಟ್ಟಿದ್ದಾರೆ. ಈ ಬಗ್ಗೆ ಸದ್ಯ ಗಾಯಕ ಚಂದನ್ ಶೆಟ್ಟಿ ಕೂಡ ಮೌನ ಮುರಿದು ಮಾತನಾಡಿದ್ದಾರೆ.

ಇಂತಹ ಕೆಟ್ಟ ಕಾಮೆಂಟ್‌ನಿಂದ ಸಾಕಷ್ಟು ಜನ ಹೆಣ್ಣು ಮಕ್ಕಳು ನೊಂದಿದ್ದಾರೆ. ಹೈ ಪ್ರೊಫೈಲ್ ವ್ಯಕ್ತಿ ಅಂತಲ್ಲ. ಸಾಮಾನ್ಯ ಜನ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಫೇಕ್ ಅಕೌಂಟ್ ಮಾಡಿ ಕೆಟ್ಟ ಮೆಸೇಜ್ ಮಾಡುತ್ತಿರುತ್ತಾರೆ. ಟಿಕ್ ಟಾಕ್ ಬ್ಯಾನ್ ಮಾಡಿದಂತೆ ಹೀಗೆ ಮೆಸೇಜ್ ಮಾಡೋರ ಮೇಲೆ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಕೆಟ್ಟ ಚಟುವಟಿಕೆ ನಿಲ್ಲಬೇಕು ಎಂದು ಖಡಕ್ ಆಗಿ ಚಂದನ್ ಮಾತನಾಡಿದ್ದಾರೆ. ಸದ್ಯ ಈ ಕೇಸ್ ಕೋರ್ಟ್‌ನಲ್ಲಿದೆ. ಏನಾಗುತ್ತೆ ನಾವು ಕಾಯ್ತಿದ್ದೀವಿ. ಯಾವುದೇ ಕಳಂಕ ಇಲ್ಲದೆ ದರ್ಶನ್ ನಿರಪರಾಧಿಯಾಗಿ ಆಚೆ ಬರಲಿ ಅನ್ನೋದು ನನ್ನ ಆಶಯ. ಈ ಘಟನೆ ನೋಡಿ ಇವತ್ತು ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಗೆಳತಿ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿದ್ದಾರೆ.

ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಿರುವಾಗಲೇ, ಈ ಪ್ರಕರಣ ಮತ್ತೊಂದು ದೊಡ್ಡ ತಿರುವು ಪಡೆದುಕೊಂಡಿದೆ. ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷ ಆವರದಿ ತಿರುಚಲಾಗಿದ್ಯಾ ಎಂಬ ಅನುಮಾನ ಮೂಡಿದೆ.
ಪವಿತ್ರಾ ಗೌಡ ಸ್ನೇಹಿತೆ ಸಮತ ಪತಿ ಡಾ ಸುರೇಶ್ ಅವರು ರೇಣುಕಾಸ್ವಾಮಿ ಮರಣೋತ್ತರ ಸಮೀಕ್ಷೆ ನಡೆಸಿದ್ದಾರೆನ್ನುವ ಮಾಹಿತಿ ಪೊಲೀಸರಿಗೆ ಲಭ್ಯಾವಾಗಿದೆ. ಅಲ್ಲದೆ ಪವಿತ್ರಾ ಹಾಗೂ ದರ್ಶನ್ ಅವರನ್ನು ಸಮತ ಜೈಲಿನಲ್ಲಿ ಭೇಟಿ ಮಾಡಿದ್ದರು. ಅನುಮಾನ ಬಂದ ಪೊಲೀಸರು ಸಮತ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸಮತ ಪತಿ ಮರಣೋತ್ತರ ಪರೀಕ್ಷೆ ಮಾಡಿದ್ದು ಎಂದು ಬಾಯಿಬಿಟ್ಟಿದ್ದಾರೆ ಸಮತ.
ಹೀಗಾಗಿ ಮರಣೋತ್ತರ ವರದಿ ಕೂಡ ಬದಲಾಯಿಸಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಆರೋಪಿ ಧನರಾಜ್‌ಗೆ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಡಲು ಹಣ ಕೊಟ್ಟಿದ್ದು ಸಮತ ಎಂದು ತಿಳಿದು ಬಂದಿದೆ.











Click it and Unblock the Notifications