Get Updates
Get notified of breaking news, exclusive insights, and must-see stories!

Shihan Hussaini: ಖ್ಯಾತ ನಟ, ಕರಾಟೆ ಲೆಜೆಂಡ್‌ ರಕ್ತ ಕ್ಯಾನ್ಸರ್‌ನಿಂದ ನಿಧನ

ದಕ್ಷಿಣ ಚಿತ್ರರಂಗದ ಖ್ಯಾತ ನಟ ಹಾಗೂ ಕರಾಟೆ ತರಬೇತುದಾರರಾದ ನಟ ಶಿಹಾನ್ ಹುಸೇನಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ರಕ್ತ ಕ್ಯಾನ್ಸರ್‌ನ ಒಂದು ರೂಪವಾದ ಲ್ಯುಕೇಮಿಯಾದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನ ವಿಚಾರವನ್ನು ಕುಟುಂಬಸ್ಥರು ದೃಢಪಡಿಸಿದ್ದಾರೆ. ಮಧುರೈನಲ್ಲಿ ಶಿಹಾನ್ ಹುಸೇನಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಇದಕ್ಕೂ ಮುನ್ನ ಬೆಸೆಂಟ್ ನಗರದಲ್ಲಿರುವ ನಟನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹುಸೇನಿ ಅವರು ಸಮರ ಕಲೆಗಳಲ್ಲಿ ಪರಿಣಿತರು. ಕರಾಟೆಯಲ್ಲೂ ಹುಸೇನಿ ತಮ್ಮದೇ ಹವಾ ಇಟ್ಟಿದ್ದರು. ಇದರೊಂದಿಗೆ ಅವರು 1986ರಲ್ಲಿ ಕೆ.ಬಾಲಚಂದರ್ ಅವರ "ಪುನ್ನಗೈ ಮನ್ನನ್" ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಸೂಪರ್‌ ಸ್ಟಾರ್‌ ರಜನಿಕಾಂತ್ ಅವರ "ವೇಲೈಕಾರನ್", ವಿಜಯ್ ಅವರ "ಬದ್ರಿ"ಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲೂ ಇವರು ಕರಾಟೆ ತರಬೇತುದಾರರಾಗಿ ನಟಿಸಿದ್ದರು. ಅವರ ಇತ್ತೀಚಿನ ಸಿನಿಮಾಗಳೆಂದರೆ "ಕಾತುವಾಕುಲ ರೇಂಡು ಕಾದಲ್" ಮತ್ತು "ಚೆನ್ನೈ ಸಿಟಿ ಗ್ಯಾಂಗ್‌ಸ್ಟರ್ಸ್". ನಟನೆ ಜೊತೆಗೆ ಅವರು ರಿಯಾಲಿಟಿ ಶೋಗಳಲ್ಲಿ ನಿರೂಪಕರು ಹಾಗೂ ತೀರ್ಪುಗಾರರೂ ಆಗಿದ್ದರು.

Renowned South Actor Karate Trainer Shihan Hussaini Passes Away In Chennai

ಕರಾಟೆ ಮತ್ತು ಬಿಲ್ಲುಗಾರಿಕೆ ತಜ್ಞರಾಗಿ ಹುಸೇನಿ ಅವರು ಸುಮಾರು 400ಕ್ಕೂ ಹೆಚ್ಚು ಬಿಲ್ಲುಗಾರರಿಗೆ ತರಬೇತಿ ನೀಡಿದ್ದಾರೆ. ತಮಿಳುನಾಡಿನಲ್ಲಿ ಆಧುನಿಕ ಬಿಲ್ಲುಗಾರಿಕೆಗೆ ನಾಂದಿ ಹಾಡಿದ್ದು ಕೂಡ ಇವರೇ ಎನ್ನಲಾಗಿದೆ. 1979ರಲ್ಲಿ ರಿಕರ್ವ್ ಬಿಲ್ಲು ಮತ್ತು 1980ರಲ್ಲಿ ಸಂಯುಕ್ತ ಬಿಲ್ಲನ್ನು ಪರಿಚಯಿಸಿದ್ದರು ಹುಸೇನಿ. ಇದು ಈ ಪ್ರದೇಶದಲ್ಲಿ ಕ್ರೀಡಾಭಿವೃದ್ಧಿ ಮೇಲೂ ಗಮನಾರ್ಹವಾಗಿ ಪರಿಣಾಮ ಬೀರಿತ್ತು.

ಹುಸೇನಿ ಅವರು ಇತ್ತೀಚೆಗೆ ತಮಗೆ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ್ದರು ಸೋಶಿಯಲ್‌ ಮೀಡಿಯಾದಲ್ಲಿ ಅವರು ಕ್ಯಾನ್ಸರ್‌ ವಿಚಾರ ಹಂಚಿಕೊಂಡಿದ್ದರು. ತಮಿಳುನಾಡು ಸರ್ಕಾರ ಅವರ ಹುಸೇನಿ ಅವರ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿಯ ಆರ್ಥಿಕ ಸಹಾಯ ಕೂಡ ನೀಡಿತು. ವೈದ್ಯಕೀಯ ಸಂಶೋಧನೆಗಾಗಿ ತಮ್ಮ ದೇಹ ದಾನ ಮಾಡುವುದಾಗಿ ಅವರು ಘೋಷಿಸಿದ್ದರು. ತಮ್ಮ ಹೃದಯವನ್ನು ಕರಾಟೆ ಮತ್ತು ಬಿಲ್ಲುಗಾರಿಕೆ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಅವರ ಬಯಕೆ ಎನ್ನಲಾಗಿದೆ.

Renowned South Actor Karate Trainer Shihan Hussaini Passes Away In Chennai

ಪವನ್‌ ಕಲ್ಯಾಣ್‌ಗೂ ಕರಾಟೆ ಗುರು

ತೆಲುಗು ನಟ ಹಾಗೂ ಈಗಿನ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರಿಗೂ ಹುಸೇನಿ ಕರಾಟೆ ಗುರು ಎಂದೇ ಪ್ರಸಿದ್ಧಿಯಾಗಿದ್ದರು. ಪವನ್ ಕಲ್ಯಾಣ್ ಅವರಿಗೆ ಕರಾಟೆ ತರಬೇತಿ ನೀಡುವಲ್ಲಿ ಹುಸೇನಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಕ್ಯಾನ್ಸರ್ ವಿರುದ್ಧದ ಹೋರಾಟದ ಸಮಯದಲ್ಲಿ ಪವನ್ ಕಲ್ಯಾಣ್ ಅವರಿಗೆ ಭಾವನಾತ್ಮಕ ಮನವಿ ಮಾಡಿದ್ದರು. ತಮ್ಮ ಮಾರ್ಷಲ್‌ ಆರ್ಟ್ಸ್‌ ಸೆಂಟರ್‌ ಅನ್ನು ಖರೀದಿಸುವ ಮೂಲಕ ಅದರ ಪರಂಪರೆಯನ್ನು ಕಾಪಾಡಿಕೊಳ್ಳಬೇಕು. ಸಮರ ಕಲೆಗಳು ಮತ್ತು ಬಿಲ್ಲುಗಾರಿಕೆ ಕಲೆಗಳನ್ನು ಮುಂದುವರಿಸುವಂತೆ ಪವನ್‌ ಕಲ್ಯಾಣ್‌ ಅವರಿಗೆ ವಿನಂತಿಸಿದ್ದರು.

Renowned South Actor Karate Trainer Shihan Hussaini Passes Away In Chennai

ಹುಸೇನಿ ಅವರ ನಿಧನಕ್ಕೆ ಪವನ್‌ ಕಲ್ಯಾಣ್‌ ಕೂಡ ಕಂಬನಿ ಮಿಡಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸುಧೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹುಸೇನಿ ಅವರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ನಾನು ಅವರಿಂದ ಕರಾಟೆ ಕಲಿತಿದ್ದೇನೆ. ನಾಲ್ಕು ದಿನಗಳ ಹಿಂದೆಯಷ್ಟೇ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಯಿತು. ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲು ಅವರ ಕುಟುಂಬಕ್ಕೆ ಭರವಸೆ ನೀಡಿದ್ದೆ. ಅಲ್ಲದೆ ಮಾರ್ಚ್ 29ರಂದು ಚೆನ್ನೈನಲ್ಲಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದೆ. ಆದರೆ ಅವರ ನಿಧನದ ಸುದ್ದಿ ಕೇಳಿ ನಾನು ತುಂಬಾ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

Renowned South Actor Karate Trainer Shihan Hussaini Passes Away In Chennai

ನನ್ನ ಸಮರ ಕಲೆಗಳ ಗುರು ಶಿಹಾನ್ ಹುಸೇನಿ ಒಬ್ಬ ಸಮರ ಕಲಾವಿದ ಹಾಗೂ ಅಸಾಧಾರಣ ಬಿಲ್ಲುಗಾರ, ವರ್ಣಚಿತ್ರಕಾರ, ಶಿಲ್ಪಿ, ಸಂಗೀತಗಾರ ಎಂದು ಪವನ್‌ ಕಲ್ಯಾಣ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹುಸೇನಿ ಅವರು ತಮ್ಮ ಜೀವನವನ್ನು ಭಾರತದಲ್ಲಿ ಸಮರ ಕಲೆಗಳು ಮತ್ತು ಬಿಲ್ಲುಗಾರಿಕೆಯನ್ನು ಉತ್ತೇಜಿಸಲು ಹಾಗೂ ಈ ಕ್ಷೇತ್ರದಲ್ಲಿ ಕ್ರಾಂತಿಗೊಳಿಸಲು ಮುಡಿಪಾಗಿಟ್ಟರು. ಅವರು ತಮ್ಮ ಕೊನೆಯ ಕ್ಷಣಗಳನ್ನು ನನ್ನ ಸಂದರ್ಶನವನ್ನು ವೀಕ್ಷಿಸುತ್ತಾ ಕಳೆದರು. ಇದು ನನ್ನ ಹೃದಯವನ್ನು ಆಳವಾಗಿ ಮುಟ್ಟಿತು. ನಾನು ಇದೇ 29ರಂದು ಅವರನ್ನು ಭೇಟಿ ಮಾಡಲಿದ್ದೆ, ಆದರೆ ನಿನ್ನೆ ರಾತ್ರಿ ಅವರು ನಿಧನರಾದರು ಎಂಬ ವಿಚಾರ ತಿಳಿದು ಭಾರಿ ನೋವಾಯಿತು ಎಂದಿದ್ದಾರೆ.

ನಾನು ಬೆಳಿಗ್ಗೆ ಬೇಗನೆ ಹೋಗಿ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್‌ಗಾಗಿ ತರಬೇತಿ ಪಡೆಯಲು ಸಂಜೆಯವರೆಗೆ ಅವರೊಂದಿಗೆ ಇರುತ್ತಿದ್ದೆ. ನಾನು ಅವರಿಂದ ಕಲಿತದ್ದನ್ನು ನನ್ನ ತೆಲುಗು ಚಿತ್ರ ತಮ್ಮುಡು ಸಿನಿಮಾದಲ್ಲಿ ಬಳಸಿಕೊಂಡೆ. ಅದರಲ್ಲಿ ನಾನು ಕಿಕ್ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದೆ. ಹುಸೇನಿ ಅವರ ಮಾರ್ಗದರ್ಶನದಲ್ಲಿ ಸುಮಾರು 3,000 ಮಂದಿ ಬ್ಲ್ಯಾಕ್ ಬೆಲ್ಟ್ ಪಡೆದರು. ತಮ್ಮ ಕಠಿಣ ಪರಿಶ್ರಮದಿಂದ ಅವರು ತಮಿಳುನಾಡಿನಲ್ಲಿ ಬಿಲ್ಲುಗಾರಿಕೆಯನ್ನು ಜನಪ್ರಿಯಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ. ಅವರು ತಮಿಳುನಾಡಿನ ಬಿಲ್ಲುಗಾರಿಕೆ ಸಂಘದಲ್ಲಿ ಉನ್ನತ ಹುದ್ದೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ ಎಂದು ಪವನ್‌ ಕಲ್ಯಾಣ್‌ ಸ್ಮರಿಸಿದ್ದಾರೆ.

Renowned South Actor Karate Trainer Shihan Hussaini Passes Away In Chennai

ಹುಸೇನಿ ಅವರು ಕೇವಲ ಸಮರ ಕಲೆಗಳು ಮತ್ತು ಬಿಲ್ಲುಗಾರಿಕೆಯೊಂದಿಗೆ ಮಾತ್ರ ನಿಲ್ಲಲಿಲ್ಲ. ಅವರು ಸಂಗೀತದಲ್ಲೂ ಪರಿಣಿತರಾಗಿದ್ದರು. ಒಬ್ಬ ಮಹಾನ್ ಕಲಾವಿದ ಮತ್ತು ಶಿಲ್ಪಿ ಕೂಡ. ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಬಹಳಷ್ಟು ಪ್ರಭಾವಶಾಲಿ ಭಾಷಣಗಳನ್ನು ಸಹ ಮಾಡಿದ್ದಾರೆ. ಅವರು ಚೆನ್ನೈನ ರೋಟರಿ ಕ್ಲಬ್ ಮತ್ತು ಇತರ ಸಮ್ಮೇಳನಗಳಲ್ಲಿ ಭಾಷಣ ಮಾಡುವಾಗ ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ಅವರೊಂದಿಗಿನ ಒಡನಾಟ ನೆನೆದಿದ್ದಾರೆ.

ಹುಸೇನಿ ಅವರ ಮಾರ್ಗದರ್ಶನದಲ್ಲಿ ನಾನು ಕಲಿತ ಶಿಸ್ತು ಮತ್ತು ಕೌಶಲ್ಯಗಳು ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ರೂಪಿಸಿವೆ. ಅವರ ತೀವ್ರ ತರಬೇತಿಯು ನನ್ನಲ್ಲಿ ಧೈರ್ಯ ಮತ್ತು ದೃಢಸಂಕಲ್ಪವನ್ನು ತುಂಬಿದೆ. ಅವು ನನಗೆ ಇಂದಿಗೂ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ. ಸಮರ ಕಲೆಗಳ ಬಿಲ್ಲುಗಾರಿಕೆ ಮತ್ತು ಲಲಿತಕಲೆಗಳಲ್ಲಿ ಅವರ ಪರಂಪರೆ ಯಾವಾಗಲೂ ಅವಿಸ್ಮರಣೀಯ. ಸಮರ ಕಲೆಗಳು ಮತ್ತು ಬಿಲ್ಲುಗಾರಿಕೆಗೆ ಅವರ ಕೊಡುಗೆಗಳು ಶಾಶ್ವತವಾಗಿ ಸ್ಮರಣೀಯವಾಗಿರುತ್ತವೆ. ಅವರ ಬೋಧನೆಗಳು ನಿಜಕ್ಕೂ ಭವಿಷ್ಯಕ್ಕೆ ಸ್ಫೂರ್ತಿ ನೀಡುತ್ತವೆ. ಅವರ ಕುಟುಂಬ ಮತ್ತು ನನ್ನ ಸಹ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಪವನ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+