'ಅಪರ್ಣಾ ಅವರು ಇವತ್ತು..ನಾಳೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು'
ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿ ವರ್ಷ ಸಮೀಪಿಸುತ್ತಿದೆ. ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ 2024ರ ಜುಲೈ 11ರಂದು ಕೊನೆಯುಸರೆಳೆದರು. ತಮ್ಮ ವೃತ್ತಿ ಜೀವನದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು, ಗೌರಿಶಂಕರ ಧಾರಾವಾಹಿ ನಾಯಕ ನಟ ಯಶವಂತ್ ಬೆಟ್ಟಸ್ವಾಮಿ ಅವರನ್ನು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದರು.
ಇವಳು ಸುಜಾತ ಧಾರಾವಾಹಿಯಲ್ಲಿ ಅಪರ್ಣಾ ಹಾಗೂ ಯಶವಂತ್ ಬೆಟ್ಟಸ್ವಾಮಿ ಜೊತೆಯಾಗಿ ನಟಿಸಿದ್ದು, ತಾಯಿ ಮಗನ ಪಾತ್ರ ಮಾಡುತ್ತಾ ಮಾಡುತ್ತಾ ಇಬ್ಬರ ನಡುವೆ ನಿಜವಾಗಿಯೂ ತಾಯಿ-ಮಗನ ಬಾಂಧವ್ಯ ಬೆಸೆದುಕೊಂಡಿತ್ತು. ಈ ಅಪರೂಪದ ಬಾಂಧವ್ಯದ ಬಗ್ಗೆ ನಟ ಯಶವಂತ್ ಬೆಟ್ಟಸ್ವಾಮಿ ಮಾತನಾಡಿದ್ದಾರೆ.

ಇಟ್ಸ್ ಮಜಾ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ನೀನು ಮದುವೆಯಾಗಬೇಕು ಅಂದರೆ ಆ ಹುಡುಗಿಯನ್ನು ಮೊದಲು ನಾನು ನೋಡಿ ಒಕೆ ಮಾಡಬೇಕು. ಆಮೇಲೆ ನಿನ್ನ ಅಮ್ಮನ ಹತ್ತಿರ ನೀನು ಒಪ್ಪಿಗೆ ಪಡೆಯಬೇಕು ಎನ್ನುತ್ತಿದ್ದರು. ಧಾರಾವಾಹಿಯಲ್ಲಿ ಚಿಕ್ಕಪುಟ್ಟ ರೊಮ್ಯಾನ್ಸ್ ಸೀನ್ ಬಂದರೆ ಅವರು ನಟನೆ ಮಾಡಿ ತೋರಿಸುತ್ತಿದ್ದರು. ನೀನು ಹೀಗೆ ಮಾಡಬೇಕು ಅಂತಾ ಹೇಳಿ ಕೊಡುತ್ತಿದ್ದರು. ಬಹಳ ಗಂಭೀರವಾಗಿ ಏನು ಹೇಳಿಕೊಡುತ್ತಿರಲಿಲ್ಲ, ತಮಾಷೆಗೆ ಹೇಳಿಕೊಡುತ್ತಿದ್ದರು' ಎಂದರು.
'ನಾನು ಕನ್ನಡ ಮಾತನಾಡಲು, ಅದು ಇಷ್ಟು ಸ್ಪಷ್ಟವಾಗಿ ಮಾತನಾಡಲು ಅವರೇ ಕಾರಣ. ಅವರು ತುಂಬಾ ನನ್ನನ್ನು ತಿದ್ದಿದ್ದಾರೆ. ಯಾವುದಾದರೂ ಒಂದು ದೃಶ್ಯ ಇದ್ದರೆ ನನಗಂತಲ್ಲಾ ಎಲ್ಲರಿಗೂ ಹೀಗೆ ಹೀಗೆ ಮಾಡಿ ಅಂತಾ ಹೇಳಿಕೊಡುತ್ತಿದ್ದರು. ಹೊಸದಾಗಿ ನಟನೆಗೆ ಬಂದ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಸಹಾಯಕ್ಕಿಂತ ಹೆಚ್ಚಾಗಿ ಮೊದಮೊಲು ಧೈರ್ಯ ತುಂಬಿದ್ದಾರೆ'.

'ಅವರು ತುಂಬಾ ವರ್ಷದಿಂದ ನಟನೆಯಲ್ಲಿ ಇದ್ದಾರೆ. ಹೊಸಬರು ನಾವು ಬಂದಾಗ ನಮಗೆ ಅವರ ಮುಂದೆ ಒಂದು ಭಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಜೊತೆಗಿರುವವರಿಗೆ ಧೈರ್ಯ ತುಂಬುವ ಕೆಲಸವನ್ನು ಅಪರ್ಣಾ ಅವರು ಮಾಡುತ್ತಿದ್ದರು. ಬೇರೆಯವರ ಜೊತೆಗೆ ಹೇಗಿದ್ದರೋ ಏನೋ ಗೊತ್ತಿಲ್ಲ ಆದರೆ ನನಗೆ ನಟನೆಯಲ್ಲಿ ಭರವಸೆ ಮೂಡಿಸಿದ್ದು ಅವರು' ಎಂದರು.
ಅಪರ್ಣಾ ಅವರ ಸಾವಿನ ಸುದ್ದಿ ಬಂದಾಗ ಆದ ನೋವಿನ ಬಗ್ಗೆ ಮಾತನಾಡಿದ ಯಶವಂತ್, 'ಅವರಿಗೆ ಕ್ಯಾನ್ಸರ್ ಇದೆ ಅಂತಾ ಗೊತ್ತಾದಾಗ ಇವತ್ತು ನಾಳೆ ಎನ್ನುವ ವಿಚಾರ ನಮಗೆ ಗೊತ್ತಾಗಿತ್ತು. ಆ ಸಮಯದಲ್ಲೇ ನಮಗೆ ಸಿಕ್ಕಾಪಟ್ಟೆ ಆತಂಕ ಆಗಿತ್ತು. ಅವರ ನಿಧನದ ದಿನ ನಾನು ಶೂಟಿಂಗ್ ಮುಗಿಸಿಕೊಂಡು ಊರಿಗೆ ಹೋಗಿದ್ದೆ. ಫೋನ್ ಬರುತ್ತಿದ್ದಂತೆ ತಕ್ಷಣವೇ ಹೊರಟು ಬಂದೆ'.
'ನಾನು ಅವರನ್ನು ಮೊದಲು ಅಷ್ಟು ಸುಂದರವಾಗಿ ನೋಡಿದ್ದೆ. ಯಾವಾಗಲೂ ಅವರು ಹೊಳೆಯುತ್ತಿದ್ದರು. ಅವರ ಜೀವನೋತ್ಸಾಹ ಅವರ ಸುತ್ತ ಹೋದವರಿಗೆ ಗೊತ್ತಾಗುತ್ತಿತ್ತು. ಅಷ್ಟು ಚೆನ್ನಾಗಿ ಇದ್ದವರು, ಅಷ್ಟು ಲಕ್ಷಣವಾಗಿ ಇದ್ದವರು. ಹಾಗೆ ಅವರನ್ನು ನೋಡಿದ ಮೇಲೆ ಈ ರೀತಿ ಅವರನ್ನು ನೋಡಲು ಆಗಲಿಲ್ಲ. ಒಂದು ಗಂಟೆ ಅವರ ಮೃತದೇಹದಿಂದ ದೂರ ಇದ್ದೆ. ಅವರ ಮುಖ ನೋಡಲು ನನಗೆ ಅಷ್ಟು ಸಮಯಬೇಕಾಯಿತು' ಎಂದು ಬೇಸರ ವ್ಯಕ್ತಪಡಿಸಿದ್ದರು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications