1 ಕೋಟಿ ರೂಪಾಯಿ ದುಡಿದ ಉಪೇಂದ್ರ ‘ಎ’?
ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಎ' ಸಿನಿಮಾ ಮತ್ತೆ ಹಳೆಯ ಖದರ್ ತೋರಿಸಿದೆ. 26 ವರ್ಷಗಳ ಹಿಂದೆ ಅಬ್ಬರಿಸಿದ್ದ ಉಪ್ಪಿ ಸಿನಿಮಾ ರೀ ರಿಲೀಸ್ ಬಳಿಕ ಕೂಡ ತನ್ನ ಹವಾ ತೋರಿಸುತ್ತಿದೆ. ಮತ್ತೊಂದು ಕಡೆ ಉಪೇಂದ್ರ ಅವರ 'ಎ' ಸಿನಿಮಾ 26 ವರ್ಷಗಳ ನಂತರ ರೀ ರಿಲೀಸ್ ಆಗಿ ಮೊದಲನೇ ದಿನ ಎಷ್ಟು ಕೋಟಿ ರೂಪಾಯಿ ಗಳಿಸಿದೆ ಗೊತ್ತಾ? ಬನ್ನಿ ತಿಳಿಯೋಣ.
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮಾಡ್ತಾರೆ ಅಂದ್ರೆ ಫ್ಯಾನ್ಸ್‌ಗೆ ಮಾತ್ರವಲ್ಲ, ಆ ಸಿನಿಮಾ ಬಗ್ಗೆ ಸಿನಿಮಾ ರಂಗದ ಸ್ಟಾರ್ ನಿರ್ದೇಶಕರಿಗೂ ಕ್ರೇಜ್ ಇರುತ್ತೆ. ಹೀಗೆ ಉಪ್ಪಿ ತಮ್ಮ ಪ್ರತಿ ಸಿನಿಮಾಗೆ ವಿಭಿನ್ನತೆ ಕೊಡುತ್ತಾ ಬಂದಿದ್ದಾರೆ. ಅದರಲ್ಲೂ, ಉಪ್ಪಿ 90ರ ದಶಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದರು. ಈ ಪೈಕಿ ಉಪೇಂದ್ರ ಅವರ 'ಎ' ಸಿನಿಮಾ ದೊಡ್ಡ ಹವಾ ಎಬ್ಬಿಸಿತ್ತು, ಅಭಿಮಾನಿಗಳಿಗೆ ಮಾತ್ರವಲ್ಲದೆ ಸಿನಿಮಾ ಇಂಡಸ್ಟ್ರಿಗೆ ಕೂಡ ಹೊಸತನ ನೀಡಿತ್ತು. ಇಂತಿಪ್ಪ ಉಪೇಂದ್ರ ಅವರ 'ಎ' ಸಿನಿಮಾ ನಿನ್ನೆ ರೀ ರಿಲೀಸ್ ಆಗಿದ್ದು ಬೆಳ್ಳಿತೆರೆ ಮೇಲೆ ಅಬ್ಬರಿಸುತ್ತಿದೆ.

ಉಪೇಂದ್ರ ಹವಾ ಬಲು ಜೋರು
ನಿನ್ನೆಯಿಂದ ಕರ್ನಾಟಕದ ಮೂಲೆ ಮೂಲೆಯಲ್ಲೂ ರೀ ರಿಲೀಸ್ ಆಗಿರುವ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಸಿನಿಮಾ ಅಬ್ಬರಿಸುತ್ತಿದೆ. ಮೊದಲ ದಿನವೇ ಹೌಸ್‌ಫುಲ್ ಪ್ರದರ್ಶನವನ್ನ ಉಪೇಂದ್ರ ಅವರ 'ಎ' ಸಿನಿಮಾ ಕಂಡಿದೆ. ಮತ್ತೊಂದು ಕಡೆ ಈ ಸಿನಿಮಾ ತನ್ನ ಮೊದಲ ದಿನವೇ 1 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಅಂತಾ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕುತೂಹಲ ಡಬಲ್ ಆಗುತ್ತಿದೆ. ಇಂದು ಮತ್ತು ನಾಳೆ ವಾರಾಂತ್ಯ ಇರುವುದು ಸಿನಿಮಾಗೆ ಮತ್ತಷ್ಟು ಬಲ ನೀಡಿದೆ.
ಅಬ್ಬರಿಸುತ್ತಿದೆ ಉಪ್ಪಿ ಸಿನಿಮಾ!
ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು ಏನೇ ಮಾಡಿದ್ರೂ ತುಂಬಾ ಡಿಫರೆಂಟ್. ಹೀಗಾಗಿ ಉಪ್ಪಿ ಅವರಿಗೆ ಸಿಕ್ಕಾಪಟ್ಟೆ ದೊಡ್ಡ ಫ್ಯಾನ್ಸ್ ಇದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗ ಇದೆ. ಈಗ ಅವರೆಲ್ಲರೂ ಮತ್ತೊಮ್ಮೆ 'ಎ' ಸಿನಿಮಾ ನೋಡಿ ಫುಲ್ ಖುಷಿಯಾಗಿದ್ದಾರೆ. ಹಾಗೇ ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ 'ಎ' ಸಿನಿಮಾ ಅಬ್ಬರಿಸುವ ನಿರೀಕ್ಷೆ ಇದೆ.












Click it and Unblock the Notifications