Rashmika Post: ವಿರಾಟ್ ಕೊಹ್ಲಿ ದಾಖಲೆ ಮುರಿದ ರಶ್ಮಿಕಾ ಮಂದಣ್ಣ-ವಿಜಯ್ ಮದುವೆ ಫೋಟೋ: ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್

Rashmika Mandanna wedding: ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಶನಿವಾರ ಈ ಜೋಡಿಯ ಮದುವೆಯ ಪೋಸ್ಟ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಇದು ಸದ್ಯ ಏಷ್ಯಾದಲ್ಲೇ 'ಅತಿ ಹೆಚ್ಚು ಲೈಕ್ಸ್ ಪಡೆದ ಪೋಸ್ಟ್' ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಅಭಿಮಾನಿಗಳು ಪ್ರೀತಿಯಿಂದ "ವಿರೋಶ್" (Virosh) ಎಂದು ಕರೆಯುವ ಈ ಜೋಡಿಯ ವಿವಾಹದ ಸಂಭ್ರಮವು ಇಂಟರ್ನೆಟ್‌ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ರಶ್ಮಿಕಾ ಮಂದಣ್ಣ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಮದುವೆಯ ಫೋಟೋ ಶನಿವಾರ ಮಧ್ಯಾಹ್ನದ ವೇಳೆಗೆ ಬರೋಬ್ಬರಿ 24.3 ಮಿಲಿಯನ್ ಲೈಕ್ಸ್‌ಗಳನ್ನು ಗಳಿಸಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಅವರು ಹಂಚಿಕೊಂಡಿರುವ ಪೋಸ್ಟ್ ಕೂಡ 18.4 ಮಿಲಿಯನ್ ಲೈಕ್ಸ್‌ಗಳನ್ನು ದಾಟಿದ್ದು, ಈ ದಂಪತಿಯ ಒಟ್ಟು ಎಂಗೇಜ್‌ಮೆಂಟ್ 41.6 ಮಿಲಿಯನ್‌ಗೆ ತಲುಪಿದೆ. ಈ ಮೂಲಕ ರಶ್ಮಿಕಾ ಅವರ ಪೋಸ್ಟ್ ಒಂದೇ ಏಷ್ಯಾದ ಅತಿ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

Rashmika Mandanna

ಕೊಹ್ಲಿ ದಾಖಲೆ ಉಡೀಸ್‌

ಈ ಅದ್ಭುತ ದಾಖಲೆಯು ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ 2024ರ ಟಿ20 ವಿಶ್ವಕಪ್ ಗೆಲುವಿನ ಪೋಸ್ಟ್ ಅನ್ನು ಹಿಂದಿಕ್ಕಿದೆ. ವಿರಾಟ್ ಅವರ ಐತಿಹಾಸಿಕ ಗೆಲುವಿನ ಪೋಸ್ಟ್ ಸುಮಾರು 22.8 ಮಿಲಿಯನ್ ಲೈಕ್ಸ್‌ಗಳನ್ನು ಪಡೆದಿತ್ತು. ಆದರೆ ಈಗ ರಶ್ಮಿಕಾ ಅವರ ಮದುವೆಯ ಪೋಸ್ಟ್ ಆ ದಾಖಲೆಯನ್ನು ಉಡೀಸ್‌ ಮಾಡಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ, ಈ ಹಿಂದೆ ದಾಖಲೆ ಬರೆದಿದ್ದ ಸಿದ್ಧಾರ್ಥ್-ಕಿಯಾರಾ, ವಿಕ್ಕಿ-ಕತ್ರಿನಾ ಹಾಗೂ ರಣಬೀರ್-ಆಲಿಯಾ ಅವರ ಮದುವೆಯ ಪೋಸ್ಟ್‌ಗಳನ್ನೂ ರಶ್ಮಿಕಾ ಅವರ ಪೋಸ್ಟ್ ಹಿಂದಿಕ್ಕಿದೆ.

ಪೋಸ್ಟ್‌ನಲ್ಲಿ ಪತಿ ಎಂದು ಪರಿಚಯ

ತಮ್ಮ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸುತ್ತಾ ರಶ್ಮಿಕಾ ಮಂದಣ್ಣ ಅವರು ಬರೆದಿರುವ ಭಾವನಾತ್ಮಕ ಟಿಪ್ಪಣಿ ಎಲ್ಲರ ಹೃದಯ ಗೆದ್ದಿದೆ. "ನಿಜವಾದ ಪ್ರೀತಿ ಎಂದರೆ ಏನು ಎಂದು ನನಗೆ ಕಲಿಸಿದ ವ್ಯಕ್ತಿ, ಮನಸ್ಸಿನ ಶಾಂತಿ ಎಂದರೆ ಏನು ಎಂದು ತೋರಿಸಿಕೊಟ್ಟವನು, ದೊಡ್ಡ ಕನಸುಗಳನ್ನು ಕಾಣುವುದು ತಪ್ಪಲ್ಲ ಎಂದು ನನಗೆ ಪ್ರತಿದಿನ ಹೇಳುತ್ತಾ, ನನ್ನ ಸಾಮರ್ಥ್ಯವನ್ನು ನನಗೆ ನೆನಪಿಸಿದವನು ಇವನು" ಎಂಬ ಸಾಲುಗಳೊಂದಿಗೆ ರಶ್ಮಿಕಾ ತನ್ನ ಪತಿ ವಿಜಯ್ ಬಗ್ಗೆ ಅತೀವ ಪ್ರೀತಿಯನ್ನು ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಯಾಗಿ ಆಶೀರ್ವಾದ

ನಟ ವಿಜಯ್ ದೇವರಕೊಂಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕುರಿತು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಸುಂದರ ಕ್ಷಣಗಳನ್ನು ವಿಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಪ್ರಧಾನಿಯವರೊಂದಿಗೆ ಕಳೆದ ಸಮಯದ ಬಗ್ಗೆ ಬರೆದುಕೊಂಡಿರುವ ವಿಜಯ್, "ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇವೆ. ನಮ್ಮ ದೇಶದ ಸುದೀರ್ಘ ಇತಿಹಾಸ, ಅದ್ಭುತ ವಾಸ್ತುಶಿಲ್ಪ ಮತ್ತು ಭಾರತದ ಸಾಂಸ್ಕೃತಿಕ ಕಥೆಗಳ ಬಗ್ಗೆ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು ಅತ್ಯಂತ ಸಂತೋಷ ತಂದಿದೆ" ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ವಿಜಯ್ ದೇವರಕೊಂಡ ಅವರ ಪೋಷಕರಿಗೆ ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. "ನನ್ನ ಪೋಷಕರಿಗೆ ಅವರು ಬರೆದ ಪತ್ರ ಅತ್ಯಂತ ಸಿಹಿಯಾಗಿತ್ತು" ಎಂದು ವಿಜಯ್ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಭೇಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಿನಿಮಾ ರಂಗದ ಗಣ್ಯರು ಹಾಗೂ ಅಭಿಮಾನಿಗಳು ವಿಜಯ್ ದೇವರಕೊಂಡ ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+