ನನ್ನ ಪ್ರೀತಿಯ ರಶ್..! ಆಲ್ ದಿ ಬೆಸ್ಟ್: ರಶ್ಮಿಕಾ ಗಿಫ್ಟ್ ಪಡೆದು ಅಲ್ಲು ಅರ್ಜುನ್ ಹೇಳಿದ್ದೇನು?
Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಹಿಟ್ ಜೋಡಿ ಎನ್ನಿಸಿಕೊಂಡಿದೆ. ಇದೀಗ ಅವರು ಮತ್ತೊಂದು ಸಿನಿಮಾದಲ್ಲಿ ಜೊತೆಯಾಗಲಿದ್ದಾರೆ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. ಇದೀಗ ರಶ್ಮಿಕಾ ಕೋಸ್ಟಾರ್ ಅಲ್ಲು ಅರ್ಜುನ್ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದಕ್ಕೆ ಅಲ್ಲು ಅವರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾ ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಸಿನಿ ಜರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ತೆಲುಗು, ತಮಿಳು, ಹೆಚ್ಚಾಗಿ ಬಾಲಿವುಡ್‌ನಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಹೊಸ ರೀತಿಯ ಕಥೆಗಳಿಗೆ ಪಾತ್ರಕ್ಕೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸಿನಿ ಪಯಣದೊಂದಿಗೆ ಅವರು ಇತ್ತೀಚೆಗೆ ಹೊಸ ಸುಗಂಧ ದ್ರವ್ಯ ಸರಣಿ 'ಡಿಯರ್ ಡೈರಿ'ಯನ್ನು ಬಿಡುಗಡೆ ಮಾಡಿದ್ದರು. ಈ ಮೂಲಕ ಬಣ್ಣದ ಜಗತ್ತಿನ ಜೊತೆಗೆ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

ರಶ್ಮಿಕಾ ಮತ್ತು ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸರಣಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ತನ್ನಕೋಸ್ಟಾರ್ ಅಲ್ಲು ಅರ್ಜುನ್ ಅವರಿಗೆ ರಶ್ಮಿಕಾ ಸುಗಂಧ ದ್ರವ್ಯದ ಕಿಟ್ ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಸೇಂಟ್ ಉದ್ಯಮಕ್ಕೆ ಕಾಲಿಟ್ಟದ್ದಕ್ಕೆ ಅಲ್ಲು ಮೆಚ್ಚುಗೆ ವ್ಯಕ್ತಪಡಿಸಿ ಟಿಪ್ಪಣಿ ಬರೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಪುಷ್ಪಾ ತಾರೆ 'ಡಿಯರ್ ಡೈರಿಯ' ಸುಗಂಧ ದ್ರವ್ಯಗಳಿಂದ ತುಂಬಿದ ಪೆಟ್ಟಿಗೆ ಫೋಟೋ ಹಂಚಿಕೊಂಡಿದ್ದಾರೆ. 'ನಮ್ಮ ಕಥೆಗಳನ್ನು ಒಟ್ಟಿಗೆ ಬರೆಯೋಣ' ಎಂದು ಬರೆದಿಟ್ಟ ಕಾರ್ಡ್ ಸಹ ಫೋಟೋದಲ್ಲಿ ಕಾಣುತ್ತದೆ.
ತುಂಬಾ ಧನ್ಯವಾದಗಳು, ನನ್ನ ಪ್ರೀತಿಯ ರಶ್! ನಿಮ್ಮ ಹೊಸ ಪ್ರಯಾಣಕ್ಕೆ ಶುಭವಾಗಲಿ. ನೀವು ಹಾಗೆ ಇದ್ದೀರಿ ಎಂದು ನಾನು ಯಾವಾಗಲೂ ನಿಮಗೆ ಶುಭ ಹಾರೈಸುತ್ತೇನೆ. ನೀವು ಸುಗಂಧ ದ್ರವ್ಯಗಳಿಗೆ ಇಟ್ಟ ಹೆಸರು ಇಷ್ಟವಾಯಿತು, ಹೆಸರು ಪ್ರೀತಿಸುತ್ತೇನೆ ಎಂದು ಅವರು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ರಶ್ಮಿಕಾಗೆ ಟ್ಯಾಗ್ ಮಾಡಿದ್ದಾರೆ. ಸೇಂಟ್ ಉದ್ಯಮದ ಹೊಸ ಸಾಹಸ, ವೈಯಕ್ತಿಕ ನಿರೂಪಣೆ ಉದ್ದೇಶದ ಬಗ್ಗೆ ಅಲ್ಲು ಪ್ರಶಂಸಿದ್ದಾರೆ..
ರಶ್-ಅಲ್ಲು ಜೋಡಿಯ ಹೊಸ ಸಿನಿಮಾ..
ನಿರ್ದೇಶಕ ಅಟ್ಲೀ ಅವರ ಬಹುನಿರೀಕ್ಷಿತ ಚಿತ್ರ 'AA22XA6' ಬಗ್ಗೆ ಕುತೂಹಲ ಹೆಚ್ಚಾಗಿದೆ. 'ಪುಷ್ಪ: ದಿ ರೂಲ್' ಯಶಸ್ಸಿನ ನಂತರ ಅಲ್ಲು ಅರ್ಜುನ್ ಮತ್ತು ಈ ಜೋಡಿ ಮತ್ತೆ ಒಂದಾಗಲಿದ್ದಾರೆ. ಅಟ್ಲೀ ಮತ್ತೆ ಆಕ್ಷನ್-ಡ್ರಾಮಾ ಸಿನಿಮಾ ನಿರ್ದೇಶಿಸಲಿದ್ದಾರೆ. ಸದ್ಯ ಈ ಸಿನಿಮಾ ಆರಂಭವಾಗಬೇಕಿದೆ. ಅಲ್ಲು ಅರ್ಜುನ್ ತಮ್ಮ ಮುಂದಿನ (AA22XA6) ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಚಿತ್ರದಲ್ಲಿ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 4 ಪಾತ್ರಗಳು ಒಂದೇ ಕುಟುಂಬದ ವಂಶಾವಳಿಯ ಭಾಗವಾಗಿವೆ. ಸದ್ಯ ಪುಷ್ಪಾ ಜೋಡಿ ಮತ್ತೆ ಒಂದಾಗುತ್ತಿರುವುದಕ್ಕೆ ಇವರಿಬ್ಬ ಅಭಿಮಾನಿಗಳು ಸಂತಸ ಮನೆ ಮಾಡಿದೆ. ಶೂಟಿಂಗ್ ಆರಂಭದ ಘೋಷಣೆ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ.












Click it and Unblock the Notifications