ಪತಿ ವಿಜಯ್ ಡೈಲಾಗ್ ಹೊಡೆದು ನಾಚಿನೀರಾದ ರಶ್ಮಿಕಾ: ಹೆಂಡ್ತಿಯನ್ನಾ 'ಕ್ಯೂಟ್ ಸ್ಯಾವೇಜ್' ಎಂದ ರಣಬಲಿ ನಟ

ಕ್ಯೂಟ್ ಕಪಲ್‌ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಸದ್ಯ ತಮ್ಮ ಮುಂಬರುವ ಬಹುಭಾಷಾ 'ರಣಬಲಿ ಸಿನಿಮಾ'ದ ಬಿಡುಗಡೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಅಂದರೆ 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ತಜೋಡಿಯು, ಮದುವೆಯ ನಂತರ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿರುವ ಮೊದಲನೇ ಚಿತ್ರ ಇದಾಗಿದೆ.

ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಚಿತ್ರೀಕರಣದ ಸೆಟ್‌ನಲ್ಲಿ ನಡೆದ ಕ್ಯೂಟ್ ಘಟನೆಯೊಂದರ ವಿಡಿಯೋವನ್ನ ನಟ ವಿಜಯ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

Rashmika Mandanna Mimics Vijay Deverakonda s Ranabaali Dialogue Hubby Calls Her Cute Savage

ರಣಬಲಿ ಟೀಸರ್ ಡೈಲಾಗ್ ಮಿಮಿಕ್ರಿ ಮಾಡಿದ ರಶ್ಮಿಕಾ ಮಂದಣ್ಣ

ಪತಿ ವಿಜಯ್ ದೇವರಕೊಂಡ ಅವರ ಮ್ಯಾನರಿಸಂ ಅನ್ನ ಕಾಪಿ ಮಾಡುವ ಮೂಲಕ ರಶ್ಮಿಕಾ ಮಂದಣ್ಣ ಬಹಳ ಮುದ್ದಾಗಿ ಮಿಮಿಕ್ರಿ ಮಾಡಿದ್ದಾರೆ. ವಿಜಯ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಉಯ್ಯಾಲೆಯ ಮೇಲೆ ಕುಳಿತಿರುವ ತಮ್ಮ ಪತಿಯ ಬಳಿ ನಡೆದುಕೊಂಡು ಬರುವ ರಶ್ಮಿಕಾ, ರಣಬಲಿ ಟೀಸರ್‌ನಲ್ಲಿರುವ ವಿಜಯ್ ಅವರ ಖದರ್ ಅನ್ನಾ ಅನುಕರಿಸಿದ್ದಾರೆ.

"ದಿಸ್ ಈಸ್ ಸಿಂಗನಮಲ ಬೊಬ್ಬಿಲಿ ರಣಬಲಿ" ಎಂಬ ಡೈಲಾಗ್ ಅನ್ನ ಪತಿಯ ಮುಂದೆಯೇ ಬಹಳ ಮುದ್ದಾಗಿ ಹೇಳಿದ್ದಾರೆ. ಡೈಲಾಗ್ ಹೇಳಿದ ತಕ್ಷಣವೇ ನಾಚಿಕೆಯಿಂದ ತಮ್ಮ ಎರಡು ಕೈಗಳಿಂದ ಮುಖ ಮುಚ್ಚಿಕೊಂಡಿರುವ ರಶ್ಮಿಕಾ ಅವರ ಕ್ಯೂಟ್ ವಿಡಿಯೋವನ್ನಾ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪತ್ನಿಯನ್ನ 'ಕ್ಯೂಟ್ ಸ್ಯಾವೇಜ್' ಎಂದ ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ ಅವರು ಈ ಮುದ್ದಾದ ವಿಡಿಯೋವನ್ನ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಪತ್ನಿಯ ಕಾಲೆಳೆದಿದ್ದಾರೆ. ವಿಡಿಯೋಗೆ ಆಕರ್ಷಕ ಕ್ಯಾಪ್ಷನ್‌ ನೀಡಿರುವ ಅವರು, "ಅವಳೊಬ್ಬಳು ಕ್ಯೂಟ್ ಸ್ಯಾವೇಜ್. ನನ್ನ ಪ್ರತಿದಿನದ ಮನರಂಜನೆ ಇವಳೇ. ನನ್ನ ಸೀರಿಯಸ್ನೆಸ್‌ನಿಂದ ನನ್ನನ್ನು ಡಿಸ್ಟ್ರಾಕ್ಟ್ ಮಾಡುವವಳು" ಎಂದು ಬರೆದುಕೊಂಡಿದ್ದಾರೆ.

ಮದುವೆಯ ನಂತರ ಈ ಜೋಡಿಯ ರೊಮ್ಯಾಂಟಿಕ್ ಹಾಗೂ ಫನ್ನಿ ಕ್ಷಣಗಳನ್ನ ನೋಡಲು ಕಾಯುತ್ತಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ವಿಡಿಯೋ ಭರ್ಜರಿ ರಸದೌತಣ ನೀಡಿದೆ.

ವಿರೋಶ್ ದಂಪತಿಯನ್ನ ಕೊಂಡಾಡಿದ ನೆಟ್ಟಿಗರು

ಜನರ ಈ ಮೆಚ್ಚಿನ ಜೋಡಿಯ ಈ ತಮಾಷೆಯ ಕ್ಷಣಗಳಿಗೆ ನೆಟ್ಟಿಗರು ಹಾಗೂ ಸಿನಿ ಪ್ರೇಮಿಗಳು ಕಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಸುರಿಮಳೆಗೈದಿದ್ದಾರೆ. "ಕ್ಯೂಟ್ ಸ್ಯಾವೇಜ್, ರಣಬಲಿಯ ಜಯಮ್ಮ ಬಹಳ ಮುದ್ದಾಗಿದ್ದಾಳೆ" ಎಂದು ಒಬ್ಬರು ಕಮೆಂಟ್ ಮಾಡಿದರೆ, "ಇಂಟರ್ನೆಟ್‌ನಲ್ಲಿ ಇದಕ್ಕಿಂತ ಕ್ಯೂಟ್ ವಿಡಿಯೋ ಮತ್ತೊಂದಿಲ್ಲ, ವಿರೋಶ್ ಜೋಡಿ ಸೂಪರ್" ಎಂದು ಮತ್ತೊಬ್ಬರು ಬರೆದಿದ್ದಾರೆ.

ತೆರೆಯ ಮೇಲೆ ಇವರಿಬ್ಬರ ಕೆಮಿಸ್ಟ್ರಿ ಎಷ್ಟು ಅದ್ಭುತವಾಗಿದೆಯೋ, ನಿಜ ಜೀವನದಲ್ಲೂ ಇವರ ಆಫ್‌ಸ್ಕ್ರೀನ್ ಬಾಂಡಿಂಗ್ ಅಷ್ಟೇ ಗಟ್ಟಿಯಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಅಕ್ಟೋಬರ್ 16ಕ್ಕೆ ವಿಶ್ವದಾದ್ಯಂತ 'ರಣಬಲಿ' ರಿಲೀಸ್

ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಣಬಲಿ ಒಂದು ದೊಡ್ಡ ಕ್ಯಾನ್ವಾಸ್‌ನ ಪಿರಿಯಾಡಿಕ್ ಡ್ರಾಮಾ ಆಗಿದೆ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು ಹೋರಾಡುವ ರಾಯಲಸೀಮೆಯ ತೆಲುಗು ಯುವಕ ರಣಬಲಿಯಾಗಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿ ಹಾಗೂ ಹೋರಾಟದ ಸಂಗಾತಿ 'ಜಯಮ್ಮ' ಎಂಬ ಪ್ರಬಲ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.

ವಿಶೇಷವೆಂದರೆ ಹಾಲಿವುಡ್‌ನ ಖ್ಯಾತ 'ದಿ ಮಮ್ಮಿ' ಚಿತ್ರದ ನಟ ಅರ್ನಾಲ್ಡ್ ವೋಸ್ಲೂ ಈ ಚಿತ್ರದಲ್ಲಿ ಸರ್ ಥಿಯೋಡರ್ ಹೆಕ್ಟರ್ ಎಂಬ ಬ್ರಿಟಿಷ್ ಅಧಿಕಾರಿ ಅಂದರೆ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಈ ಚಿತ್ರ, ದಸರಾ ಹಬ್ಬದ ಪ್ರಯುಕ್ತ ಬಹುಭಾಷೆಗಳಲ್ಲಿ ಅಂದರೆ ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಅಕ್ಟೋಬರ್ 16, 2026ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು ಅಕ್ಟೋಬರ್ 7ರಂದು ಚಿತ್ರತಂಡ ಅಧಿಕೃತ ಟ್ರೈಲರ್ ಅನ್ನ ಬಿಡುಗಡೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+