Rashmika Mandanna: ಜ್ಯೋತಿಷ್ಯ ಕೇಳಿ ಲವ್ ಬ್ರೇಕಪ್ ಮಾಡಿಕೊಂಡರೇ ನಟಿ ರಶ್ಮಿಕಾ?: ವಿಡಿಯೋ ವೈರಲ್

ಬೆಂಗಳೂರು, ಆಗಸ್ಟ್ 21: ಸ್ಟಾರ್ ನಟಿಯರ ಮನೆಯಲ್ಲಿ ಪೂಜೆ ಮಾಡಿಸಲು ಹಾಗೂ ಭವಿಷ್ಯದ ಕುರಿತು ಮುನ್ಸೂಚನೆ ಕೇಳಲು ಈ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೆಚ್ಚು ಜನಪ್ರಿಯ. ಈತ ಇತ್ತೀಚೆಗೆ ನಾಗಚೈತನ್ಯ ಮತ್ತು ಸೋಭಿತಾ ಧೂಳಿಪಲ ಅವರ ಕುರಿತು ಒಂದಷ್ಟು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೆ ಸ್ವತಃ ಜ್ಯೋತಿಷಿ ತಾನೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬ್ರೇಕಪ್ ಮಾಡಿಕೊಳ್ಳುವಂತೆ ತಿಳಿಸಿದ್ದೆ ಎಂದು ಹೇಳಿದ್ದಾರೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ನಿರಂತರ ಶ್ರಮ, ಪ್ರತಿಭೆ, ಸೌಂದರ್ಯದಿಂದಲೇ ನ್ಯಾಷನಲ್ ಕ್ರಷ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅವರು ಸಹ ಈ ಹಿಂದೆ ತಮ್ಮ ಮನೆಯಲ್ಲಿ ಈ ಜ್ಯೂತಿಷಿ ವೇಣು ಅವರಿಂದಲೇ ವಿಶೇಷ ಪೂಜೆ ಮಾಡಿಸಿದ್ದರು. ಅದಾದ ನಂತರ ಅವರು ಕೆಲವೇ ವರ್ಷದಲ್ಲಿ ಸಿನಿರಂಗದಲ್ಲಿ ಸಾಧನೆಯ ಶಿಖರವೇರಿದ್ದಾರೆ.

Rashmika Mandanna has Break Up With Rakshit Shetty after ask Astrologer Venu Swamy Prediction

ಜ್ಯೋತಿಷಿ ಮಾತು ಕೇಳಿ ನಟಿ ಬ್ರೇಕಪ್! ವಿಡಿಯೋ ವೈರಲ್

ಈ ಪೂಜೆ ಮಾಡಿಸುವ ಹೊತ್ತಿಗೆ ನಟಿ ರಶ್ಮಿಕಾ ಮಂದಣ್ಣ ಅವರು ನಟ ರಕ್ಷಿತ್ ಶೆಟ್ಟಿ ಜೊತೆಗೆ ಲವ್‌ನಲ್ಲಿ ಬಿದ್ದಿದ್ದರು. ಇಬ್ಬರ ಎಂಗೇಜ್‌ಮೆಂಟ್ ಸಹ ಆಗಿತ್ತು. ನಂತರ ಅವರು ಬ್ರೇಕಪ್ ಮಾಡಿಕೊಂಡಿದ್ದರು. ಈ ಬ್ರೇಕಪ್ ಮಾಡಿಕೊಳ್ಳಲು ಇದೇ ವೇಣುಸ್ವಾಮಿ ಹೇಳಿದ್ದರು. ಅವರ ಮಾತು ಕೇಳಿಯೇ ನಟಿ ಬ್ರೇಕಪ್ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಅಲ್ಲದೇ ಸ್ವತಃ ಜ್ಯೋತಿಷಿಯೆ ತಾನೇ ಬ್ರೇಕಪ್‌ಗೆ ನಟಿಗೆ ಸಲಹೆ ನೀಡಿದ್ದೆ ಎಂದು ಹೇಳಿರುವ ಹಳೇಯ ವಿಡಿಯೋ ಈಗ ವೈರಲ್ ಆಗುತ್ತಿದೆ.

ಈ ಮಧ್ಯೆ ಅವರು ತಾನೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬ್ರೇಕಪ್ ಮಾಡಿಕೊಳ್ಳಲು ಹೇಳಿದ್ದೇನೆ ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ತಿಳಿಸಿದ್ದಾರೆ. ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Rashmika Mandanna has Break Up With Rakshit Shetty after ask Astrologer Venu Swamy Prediction

ಬ್ರೇಕಪ್ ಬಳಿಕ ನಟಿಗೆ ನ್ಯಾಷನಲ್ ಕ್ರಷ್ ಪಟ್ಟ!

ರಶ್ಮಿಕಾ ಮತ್ತು ರಕ್ಷಿತ್ ಇಬ್ಬರು ಬೇರ್ಪಟ್ಟ ನಂತರ ನಟಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ನಾನು ಅವಳಿಗೆ ಪೂಜೆ ಮಾಡಿದ್ದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಏಕೆಂದರೆ ನಟಿ ರಶ್ಮಿಕಾ ಜಾತಕದಲ್ಲಿ ಭರವಸೆಯ ಭವಿಷ್ಯವಿದೆ. ಮುಂದೆ ಅವರು ರಾಜಕೀಯ ಪ್ರವೇಶಿಸಿ ಸಂಸದರಾಗಬಹುದು ಎಂದು ತಿಳಿಸಿದ್ದರು.

ನಟಿ ರಶ್ಮಿಕಾ ವಿಡಿ ಜೊತೆ ಡೇಟಿಂಗ್: ಇದು ನಿಜವೇ?

ಹೀಗೆ ರಕ್ಷಿತ್ ಜೊತೆ ಬ್ರೇಕಪ್ ಆಗಿ ತಲುಗಿನಲ್ಲಿ ರಶ್ಮಿಕಾಗೆ ಲಕ್ ಖುಲಾಯಿಸುತ್ತಿದ್ದಂತೆ ಇದೇ ನಟಿಯ ಹೆಸರು ನಟ ವಿಜಯ್ ದೇವರಕೊಂಡ ಜೊತೆಗೆ ಥಳುಕು ಹಾಕಿಕೊಂಡಿದೆ. ಈ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಎಂಗೇಜ್‌ಮೆಂಟ್ ಸಹ ಆಗಲಿದ್ದಾರೆ ಎಂದೆಲ್ಲ ವದಂತಿಗಳು ಆಗಾಗ ಜೀವ ಪಡೆಯುತ್ತವೆ. ಆದರೆ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂದಷ್ಟೇ ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಹೇಳಿಕೊಂಡಿದ್ದಾರೆ.

ನಾಗಚೈತನ್ಯ ಸೋಭಿತಾ ಸಂಬಂಧ 2027ರಲ್ಲಿ ಅಂತ್ಯ?

ತೆಲಂಗಾಣ ಮೂಲದ ಈ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಅವರ ಭವಿಷ್ಯ ನುಡಿದಿದ್ದರು. ಇವರಿಬ್ಬರು 2017ರ ಹೊತ್ತಿಗೆ ಬೇರೆಯಾಗುತ್ತಾರೆ. ಸೋಭಿತಾ ಅವರ ಜಾತಕ ಸರಿ ಇಲ್ಲ ಎಂದಿದ್ದರು.

ನಾಗಚೈತನ್ಯ ಅವರ ಜೀವನದಲ್ಲಿ 2027 ರಲ್ಲಿ ಮೂರನೇ ಮಹಿಳೆಯ ಪ್ರವೇಶವಾಗಲಿದೆ. ಆಗ ಸೋಭಿತಾಳ ಜತೆಗಿನ ಸಂಬಂಧ ಮುರಿದು ಬೀಳಲಿದೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ವಲಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಮಹಿಳಾ ಆಯೋಗ ಜ್ಯೋತಿಷಿಗೆ ನೋಟಿಸ್ ಸಹ ನೀಡಿದೆ. ಜ್ಯೋತಿಷಿ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿದೆ

ಇದರ ಬೆನ್ನಲ್ಲೆ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಬಗ್ಗೆ ಭವಿಷ್ಯವನ್ನು ಇನ್ನು ಮುಂದೆ ನುಡಿಯುವುದಿಲ್ಲ ಎಂದು ಅವರು ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+