Rashmika-Vijay Engaged: ಗುಟ್ಟಾಗಿ ರಶ್ಮಿಕಾ, ವಿಜಯ್ ನಿಶ್ಚಿತಾರ್ಥವಾಯಿತೇ?, ಉಂಗುರದಿಂದ ವದಂತಿಗೆ ರೆಕ್ಕೆಪುಕ್ಕ..
Rashmika Mandanna Egaged: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಬಹಳ ದಿನಗಳಿಂದಲೂ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಮದುವೆ ಆಗುತ್ತಾರೆ ಎಂಬ ಮಾತುಗಳು, ವದಂತಿಗಳು ಕೇಳಿ ಬರುತ್ತಲೆ ಇವೆ. ಇದೀಗ ಅದಕ್ಕೆ ಪೂರಕವಾಗಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕೆ ವೈರಲ್ ಆಗುತ್ತಿರುವ ಈ ವಿಡಿಯೋಗಳನ್ನು ನೋಡಿ ಫ್ಯಾನ್ಸ್ ಹಾಗೆಂದು ಭಾವಿಸಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ (SIIMA) ಅವಾರ್ಡ್ 2025 ಕಾರ್ಯಕ್ರಮಕ್ಕೆ ನಟಿ ರಶ್ಮಿಕಾ ಮಂದಣ್ಣ ಮುಂಬೈನಿಂದ ತೆರಳಿದ್ದರು. ಅಲ್ಲಿ ನಟಿ ರಶ್ಮಿಕಾ ಪಾಪರಾಜಿಗಳಿಗೆ ಹೈ ಹೇಳುವುದು, ಉಂಗುರು ಪ್ರದರ್ಶಿಸಿದ್ದು ಕಂಡು ಬಂದಿದೆ. ಒಂದೆಡೆರು ಕಡೆಗಿನ ವಿಡಿಯೋ ಹರಿದಾಡುತ್ತಿದ್ದು, ಇದು ವಿಜಯ್-ರಶ್ಮಿಕಾ ಮಧ್ಯದ ಪ್ರಣಯ ಕಥೆಗೆ ಸಾಕ್ಷಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಬೀಚ್, ವಿದೇಶ ಅಂತಲೂ ಸುತ್ತಾಡುತ್ತಾರೆ. ಆದರೆ ತಾವು ಸ್ನೇಹಿತರ ಎಂದು ಹೇಳುವ ವಿಜಯ್, ರಶ್ಮಿಕಾ ಈವರೆಗೆ ಯಾವ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಮಧ್ಯ ದುಬೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಂಗುರ ಧರಿಸಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ದುಬೈ ಏರ್‌ಪೋರ್ಟ್‌ನಲ್ಲಿ ಬ್ಲೂ ಜೀನ್ಸ್ ಮತ್ತು ಕಪ್ಪು ಛಾಯೆಗಳೊಂದಿಗೆ ಬಿಳಿ ಶರ್ಟ್ ಧರಿಸಿ ಕ್ಯಾಮೆರಾಗೆ ಎದುರಾದ ರಶ್ಮಿಕಾ ಕೈ ಬೀಸಿದಾಗ ಕೈ ಬೆರಳಿನಲ್ಲಿ ಉಂಗುರು ಪ್ರದರ್ಶನವಾಗಿದೆ. ಇದು ವದಂತಿಗಳಿಗೆ ಪುಷ್ಠಿ ನೀಡಿದೆ. ಇವರಿಬ್ಬರು ಸಿಕ್ರೇಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? ಎಂದು ಆನ್‌ಲೈನ್‌ನಲ್ಲಿ ಪ್ರಶ್ನಿಸಲಾಗುತ್ತಿದೆ.
ರಶ್ಮಿಕಾ, ವಿಜಯ್ ಆಗಾಗ ಭೇಟಿ
ಇತ್ತೀಚೆಗೆ ನ್ಯೂಯಾರ್ಕ್‌ಗೆ ತೆರಳಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಲ್ಲಿ 43 ನೇ ಇಂಡಿಯಾ ಡೇ ಪೆರೇಡ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅತಿದೊಡ್ಡ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯಲ್ಲಿ ಇಬ್ಬರನ್ನು ಗ್ರ್ಯಾಂಡ್ ಮಾರ್ಷಲ್‌ಗಳಾಗಿ ಗೌರವಿಸಲಾಯಿತು. ಆಗಾಗ ಇವರಿಬ್ಬರು ತಮ್ಮ ಡೇಟಿಂಗ್ ವದಂತಿಗಳ ಸುತ್ತ ಸಾಕಷ್ಟು ಸಂಚಲನ ಮೂಡಿಸುತ್ತಲೇ ಇದ್ದಾರೆ. ಹೋಟೆಲ್, ಬೀಚ್, ಒಂದೇ ಕಾರಿನಲ್ಲಿ ಹೀಗೆ ಅನೇಕ ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಬಿಡುವಿನ ಸಮಯದಲ್ಲಿ ಇಬ್ಬರು ಒಟ್ಟಿಗೆ ಸೇರುತ್ತಾರೆ.
ಮಾತ್ರವಲ್ಲದೇ ನಿರ್ದೇಶಕ ರಾಹುಲ್ ಸಂಕೃತ್ಯ ಅವರ ಮುಂದಿನ VD14 ಚಿತ್ರಕ್ಕೆ ವಿಜಯ್ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಮೂರನೇ ಭಾರಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. 1800 ದಶಕದ ಬ್ರಿಟೀಷರ ಕಾಲದ ಕಥೆಯ ಆಧಾರಿತ ಸಿನಿಮಾ ಎನ್ನಲಾಗುತ್ತಿದೆ. ಇದೆಲ್ಲದರ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.












Click it and Unblock the Notifications