Rashmika Mandanna: ನೀವೆಲ್ಲ ಇದಕ್ಕಾಗಿ ಕಾಯುತ್ತಿದ್ದೀರಿ ಅಂತ ಗೊತ್ತು: ಸಿಹಿಸುದ್ದಿ ಕೊಟ್ಟ ರಶ್ಮಿಕಾ
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ನಿವಾಸದಲ್ಲಿ ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಉಂಗುರು ತೊಡಿಸಿಕೊಂಡು ಗುಟ್ಟಾಗಿ ಎಂಗೇಜ್ ಆಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರಶ್ಮಿಕಾ ಹಾಗೂ ವಿಜಯ್ ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡಿರಲಿಲ್ಲ. ಆದರೆ ನಿಶ್ವಿತಾರ್ಥ ಸುದ್ದಿ ಬೆನ್ನಲ್ಲೇ ರಶ್ಮಿಕಾ ಮಹತ್ವದ ದಿನಾಂಕವೊಂದನ್ನು ಘೋಷಿಸಿ ಸರ್‌ಪ್ರೈಸ್ ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಮಂದಣ್ಣ, ಬಳಿಕ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಟಾಪ್ ನಟಿಯಾಗಿ ಇಂದಿಗೂ ಮಿಂಚುತ್ತಿದ್ದಾರೆ. ಆರಂಭದಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗೆ ಇಬ್ಬರೂ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಗೀತ ಗೋವಿಂದಂ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆಗಿನಿಂದಲೂ ಇಬ್ಬರೂ ಲವ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇತ್ತೀಚೆಗಂತೂ ವಿದೇಶಗಳಿಗೆ ತೆರಳಿ ಟ್ರಿಪ್ ಮಾಡುವುದು, ಒಟ್ಟಿಗೆ ಕಾಣಿಸಿಕೊಳ್ಳುವುದು ಹೆಚ್ಚಾಗಿತ್ತು. ಆದರೆ ಈಗ ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ಶುಕ್ರವಾರ ವಿಜಯ್ ಅವರ ಹೈದರಾಬಾದ್ ನಿವಾಸದಲ್ಲಿ ರಹಸ್ಯ ಸಮಾರಂಭದಲ್ಲಿ ನಿಶ್ಚಿತಾರ್ಥ ನೆರವೇರಿದೆ. ವಿಜಯ್ ಅವರ ಆಪ್ತರೊಬ್ಬರು ಈ ಬಗ್ಗೆ ಖಚಿತಪಡಿಸಿದ್ದು, ವಿಜಯ್ ಮತ್ತು ರಶ್ಮಿಕಾ ಅವರ ಕುಟುಂಬಗಳ ಸಮ್ಮುಖದಲ್ಲಿ ಈ ಸಮಾರಂಭ ನೆರವೇರಿದೆ. ಮುಂದಿನ ವರ್ಷ ಈ ಜೋಡಿ ವಿವಾಹವಾಗಲು ಯೋಜಿಸಿದೆ ಎಂದು ರಿವೀಲ್ ಮಾಡಿದ್ದಾರೆ.
"ಕಾಕ್ಟೇಲ್ 2 ಶೂಟಿಂಗ್ ಮುಗಿಸಿ, ರಶ್ಮಿಕಾ ಇಟಲಿಯಿಂದ ಹಿಂದಿರುಗಿದ ತಕ್ಷಣ ಎಂಗೇಜ್‌ಮೆಂಟ್ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಅದರಂತೆ ಶೂಟಿಂಗ್ ಮುಗಿಸಿ ಹಿಂದಿರುಗಿದ ಕೂಡಲೇ ಕಾರ್ಯಕ್ರಮ ನೆರವೇರಿದೆ. ಮದುವೆ 2026ರಲ್ಲಿ ನಡೆಯಲಿದೆ. ಎರಡೂ ಕುಟುಂಬಗಳು ನಿನ್ನೆ ಭೇಟಿಯಾಗಿ ಮದುವೆ ಮಾತುಕತೆ ನಡೆಸಿರುವುದಾಗಿ ರಶ್ಮಿಕಾ ಅವರ ಆಪ್ತ ಮೂಲಗಳು ದೃಢಪಡಿಸಿವೆ. ಆದರೆ ರಶ್ಮಿಕಾ ಇಂದು ಮಹತ್ವದ ದಿನಾಂಕವೊಂದನ್ನು ಘೋಷಿಸಿದ್ದಾರೆ.
ಏನದು ಸಿಹಿಸುದ್ದಿ?
ನೀವೆಲ್ಲರೂ ಇದಕ್ಕಾಗಿ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ದಿ ಗರ್ಲ್‌ಫ್ರೆಂಡ್ ಸಿನಿಮಾ ಇದೇ ನವೆಂಬರ್ 7ರಂದು ಚಿತ್ರಮಂದಿರಗಳಲ್ಲಿ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ಆವತ್ತು ಥಿಯೇಟರ್‌ಗೆ ಬನ್ನಿ, ಮಾತನಾಡೋಣ ಎಂದು ರಶ್ಮಿಕಾ ತಮ್ಮ ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

ದಸರಾಗೆ ಶುಭ ಕೋರಿದ್ದ ರಶ್ಮಿಕಾ, ಕೆಂಪು ಸೀರೆಯಲ್ಲಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ಸದಾ ಮಾಡ್ರನ್ ಆಗಿ ಕಾಣುತ್ತಿದ್ದ ರಶ್ಮಿಕಾ ಸೀರೆಯ ಫೋಟೋಗಳನ್ನು ಹಂಚಿಕೊಂಡಿದ್ದರಿಂದ ನಿಶ್ಚಿತಾರ್ಥದ ಸುದ್ದಿಗೆ ಪುಷ್ಟಿ ಕೊಡುವಂತಿದೆ. ಈ ವರ್ಷ, ತಮ್ಮ ಟ್ರೇಲರ್ ಮತ್ತು ನಮ್ಮ ಹಾಡಿನ ಮೇಲೆ ನೀವು ತೋರಿಸುತ್ತಿರುವ ಎಲ್ಲ ಪ್ರೀತಿಯಿಂದಾಗಿ ನಾನು ಹೆಚ್ಚುವರಿ ಕೃತಜ್ಞನಾಗಿದ್ದೇನೆ. ಪ್ರಚಾರದ ಸಮಯದಲ್ಲಿ ನಿಮ್ಮೆಲ್ಲರನ್ನೂ ನೋಡಲು ನಾನು ಕಾಯಲು ಸಾಧ್ಯವಿಲ್ಲ ಎಂದು ರಶ್ಮಿಕಾ ಕೆಂಪು ಸೀರೆಯಲ್ಲಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ತಮ್ಮ ಕೈಗಳನ್ನು ರಶ್ಮಿಕಾ ಮುಚ್ಚಿಟ್ಟುಕೊಂಡಿದ್ದು, ಉಂಗುರ ಕಾಣದಂತೆ ರಶ್ಮಿಕಾ ಎಚ್ಚರ ವಹಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications