ಕೃಷಿ‌ ಮೇಳದಲ್ಲಿ ರಂಗಾಯಣ ರಘು 'ಶಾಖಾಹಾರಿ' ಸಾಂಗ್ ರಿಲೀಸ್!

ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ವಿಭಿನ್ನವಾದ ಅಭಿಯನದ ಮೂಲಕ ಛಾಪು ಮೂಡಿಸಿದ ರಂಗಾಯಣ ರಘು ಅವರು, ನೂರಾರು ಸಿನಿಮಾದಲ್ಲಿ ಮಿಂಚಿದ್ದಾರೆ. ಕನ್ನಡಿಗರ ರತ್ನ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾದಲ್ಲಿ ರಂಗಾಯಣ ರಘು ಅವರ ಪೋಷಕ ಪಾತ್ರ ನೋಡುವುದೇ ಹಬ್ಬ. ಹೀಗೆ ಪೋಷಕ ಪಾತ್ರಕ್ಕೆ ಜೀವ ತುಂಬುತ್ತಾ, ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವ ರಂಗಾಯಣ ರಘು ಅವರು ಇದೀಗ ಫುಲ್ ಟೈಂ ಹೀರೋ ಆಗ್ತಿದ್ದಾರೆ.

ಹೌದು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಶಾಖಾಹಾರಿ' ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಮಲೆನಾಡ ಸೊಗಡಿನ ಥ್ರಿಲ್ಲರ್ ಕಥೆ ಹೂರಣ ತುಂಬಿರುವ ಈ ಸಿನಿಮಾದ ಹಾಡು ಶಿವಮೊಗ್ಗ ಜಿಲ್ಲೆಯ ಹೊಸ ನಗರದಲ್ಲಿ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ರಿಲೀಸ್ ಆಗಿದೆ. ಇಡೀ ಚಿತ್ರ ತಂಡ ಈ ವೇಳೆ ಭಾಗಿಯಾಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿದ್ದು, ಗಮನ ಸೆಳೆಯಿತು. ಹಾಗಾದರೆ ಇದೀಗ ರಿಲೀಸ್ ಆಗಿರುವ ಹಾಡಿನಲ್ಲಿ, ರಂಗಾಯಣ ರಘು ಅವರು ಇದ್ದಾರಾ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

Rangayana Raghu Starrer Shakahari Movie Team Released A Song

'ಸೌಗಂಧಿಕ' ಹಾಡಿನ ಘಮಲು!

ಅಷ್ಟಕ್ಕೂ ಈಗ ರಿಲೀಸ್ ಆಗಿರುವ ಶಾಖಾಹಾರಿ ಸಿನಿಮಾದ, ಸೌಗಂಧಿಕ ಎಂಬ ಮೆಲೋಡಿಗೆ ನಿರ್ದೇಶಕ‌ ಸಂದೀಪ್ ಸುಕಂದ್ ಸಾಹಿತ್ಯ ಬರೆದಿದ್ದಾರೆ. ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಮಯೂರ್‌ ಅಂಬೆಕಲ್ಲು ಸಂಗೀತದ ಇಂಪು, ಹಾಡಿನ ತೂಕ ಹೆಚ್ಚಿಸಿದೆ. ಯುವ ಪ್ರೇಮಿಗಳ ನಡುವಿನ ಈ ಮೆಲೋಡಿ ಹಾಡಿನಲ್ಲಿ ವಿನಯ್ ಯುಜೆ ಹಾಗೂ ನಿಧಿ ಹೆಗಡೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ 'ಶಾಖಾಹಾರಿ' ಸಿನಿಮಾ ತಂಡ ರಿಲೀಸ್‌ಗೆ ಭರ್ಜರಿ ಸಿದ್ಧತೆ ಶುರು ಮಾಡಿದೆ.

ರಂಗಾಯಣ ರಘು ಪಾತ್ರ ಏನು?

ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವವಿರುವ ಸಂದೀಪ್ ಸುಂಕದ್ ಶಾಖಾಹಾರಿ ಸಿನಿಮಾ ಮೂಲಕ ಫುಲ್ ಟೈಂ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಹಾಗೇ, ಬಾಣಸಿಗನ ಪಾತ್ರದಲ್ಲಿ ರಂಗಾಯಣ ರಘು, ಪೊಲೀಸ್‌ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದು ಈ ಸಿನಿಮಾ ವಿಶೇಷ. ಸುಜಯ್ ಶಾಸ್ತ್ರಿ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ಯು.ಜೆ. ವಿನಯ್, ಶ್ರೀಹರ್ಷ ಗೋಭಟ್ಟ ಸೇರಿ, ನಿಧಿ ಹೆಗಡೆ ತಾರಾಬಳಗದಲ್ಲಿ ಇದ್ದಾರೆ.

Rangayana Raghu Starrer Shakahari Movie Team Released A Song

ರಾಜೇಶ್ ಕೀಳಂಬಿ & ರಂಜಿನಿ ಪ್ರಸನ್ನ 'ಶಾಖಾಹಾರಿ' ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಂದೀಪ್‌ಗೆ ಜೊತೆಯಾಗಿ ವಿಶ್ವಜಿತ್ ರಾವ್ ಕ್ಯಾಮರಾ ವರ್ಕ್ ಮಾಡಿದ್ದರೆ, ಇನ್ನು ಶಶಾಂಕ್ ನಾರಾಯಣ ಎಡಿಟಿಂಗ್, ಮಯೂರ್ ಅಂಬೆಕಲ್ಲು ಮ್ಯೂಸಿಕ್ ಈ ಸಿನಿಮಾಗೆ ಇದೆ.

ಚಿತ್ರವನ್ನ ಮಲೆನಾಡು ವಾತಾವರಣದಲ್ಲಿ ಚಿತ್ರೀಕರಣ ಮಾಡಿದ್ದು, ಇಲ್ಲಿನವರೆ ಈ ಸಿನಿಮಾಗೆ ಕೆಲಸ ಮಾಡಿರೋದು ವಿಶೇಷ. ಚಿತ್ರೀಕರಣ ಪೂರ್ಣವಾಗಿ ಮುಗಿದಿದೆ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಫೆಬ್ರವರಿ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಯೋಜನೆ ಹಾಕಿದೆ ಅಂತಾ ಹೇಳಲಾಗಿದೆ. ಸಿನಿಮಾವನ್ನು ಕೆ ಆರ್ ಜಿ ಸ್ಟುಡಿಯೊಸ್ ವಿತರಣೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+