ರಮ್ಯಾ vs ಸಂಜನಾ ಗಲ್ರಾನಿ: ದರ್ಶನ್ ಪರ ಸಂಜನಾ ಬ್ಯಾಟಿಂಗ್, ದೊಡ್ಡ ನಟಿಯಾದ್ರೆ ಇವರೇನ್ ಜಡ್ಜಾ?
ರೇಣುಕಾಸ್ವಾಮಿ ಹತ್ಯೆ ಆರೋಪ ಹೊತ್ತಿರುವ ನಟ ದರ್ಶನ್ ತೂಗೂದೀಪ ಅವರ ಫ್ಯಾನ್ಸ್ ನಟಿ ರಮ್ಯಾಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ ಎಂಬ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ. ಕೆಟ್ಟ ಪದ ಬಳಸಿ ನಿಂದಿಸಿದ್ದಕ್ಕೆ ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಗರಂ ಆಗಿದ್ದಾರೆ. ದರ್ಶನ್ ಹೆಸರು ಎಳೆದು ತಂದಿದ್ದಕ್ಕೆ ನಟಿ ಸಂಜನಾ ಗಲ್ರಾನಿ ಅವರು ರಮ್ಯಾಗೆ ಪರೋಕ್ಷವಾಗಿ ಟಕ್ಕರ್ ನೀಡಿದ್ದಾರೆ ಎನ್ನಲಾಗುತ್ತಿದೆ. ತಪ್ಪು ಮಾಡಿದ್ದು ಯಾರೋ ಶಿಕ್ಷೆ ಅನುಭವಿಸುತ್ತಿರುವುದು ನಟ ದರ್ಶನ್ ಎಂದು ಡಿ.ಬಾಸ್ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟಕ್ಕೂ ಸಂಜನಾ ಹೇಳಿದ್ದೇನು?
ಅಶ್ಲೀಲ ಸಂದೇಶ ಕಳುಹಿಸಿದ ದರ್ಶನ್ ಫ್ಯಾನ್ಸ್ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ, ನಗರ ಪೊಲೀಸ್ ಆಯುಕ್ತರಿಗೆ ನಟಿ ರಮ್ಯಾ ದೂರು ನೀಡಿದ್ದಲ್ಲದೇ ಈ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಇಂಥಹ ಫ್ಯಾನ್ಸ್ ಅತಿರೇಕ ಹೆಚ್ಚಾಗಿದೆ. ನನಗೆ ಹೀಗೆ ಮಾಡುತ್ತಾರೆ. ಇನ್ನೂ ಸಾಮಾನ್ಯ ಹೆಣ್ಣುಮಕ್ಕಳ ಪರಿಸ್ಥಿತಿ ಏನು?. ಎಲ್ಲ ಮಹಿಳೆಯರ ಪರ ನಾನು ದೂರು ನೀಡಿದ್ದೇವೆ. ಸೆಲೆಬ್ರೆಟಿಗಳ ಕುಟುಂಬದವರ ಹೆಸರನ್ನು ಡಿ.ಬಾಸ್ ಫ್ಯಾನ್ಸ್ ಎಳೆದು ತರುತ್ತಾರೆ ಎಂದೆಲ್ಲ ಮಾತನಾಡಿದ್ದಾರೆ. ಜೊತೆಗೆ ಇದಕ್ಕೆ ಕಡಿವಾಣ ಹಾಕದೇ ಕುಮ್ಮಕ್ಕು ನೀಡಲಾಗುತ್ತಿದೆ. ಪವಿತ್ರಾ ಗೌಡ ಪರ ಮಾತ್ರವೇ ನೀವು ಸ್ಟ್ಯಾಂಡ್ ತಗೋತಿರಾ? ಎಂದು ದರ್ಶನ್ ವಿರುದ್ಧವು ರಮ್ಯಾ ಕೆಂಡಾಮಂಡಲವಾಗಿದ್ದಾರೆ..

ಇದೆಲ್ಲ ಬೆಳವಣಿಗೆ ಬಳಿಕ ನಟ ಪ್ರಥಮ್, ರಕ್ಷಿತಾ ಪ್ರೇಮ್, ನಟ ಚೇತನ್ ಅಹಿಂಸಾ, ವಿನಯ್ ರಾಜ್ ಕುಮಾರ್ ಅವರು ಹೆಣ್ಣಿನ ವಿರುದ್ಧದ ಈ ನಡೆಯನ್ನು ಖಂಡಿಸಿದ್ದಾರೆ. ಆದರೆ ಇದೀಗ ನಟಿ ಸಂಜನಾ ಗಲ್ರಾನಿ ಅವರು ದರ್ಶನ್ ಪರ ಮಾತನಾಡಿದ್ದದಾರೆ. ಅವರ ಹೇಳಿಕೆ ದರ್ಶನ್ ಫ್ಯಾನ್ಸ್ ಗೆ ಬಲ ತಂದಂತಾಗಿದೆ. ಮತ್ತೊಂದೆಡೆ ''ದೊಡ್ಡ ನಟಿಯಾದರೂ ಅಷ್ಟೆ ಪ್ರಶ್ನೆ ಮಾಡೋಕೆ ಅವರೇನು ಜಡ್ಜಾ?'' ಎನ್ನುವ ಮೂಲಕ ದರ್ಶನ್ ಪರ, ಡಿ.ಬಾಸ್ ಅಫಿಸಿಯಲ್ ಫ್ಯಾನ್ಸ್ ಪರ ಮಾತನಾಡಿದ್ದಾರೆ.
ದರ್ಶನ್ ಅಫಿಸಿಯಲ್ ಫ್ಯಾನ್ಸ್ ನಡೆಗೆ ಸಂಜನಾ ಮೆಚ್ಚುಗೆ
ಸಂಜನಾ ಗಲ್ರಾನಿ ಅವರು, 'ನಾನು ರೇಣುಕಾಸ್ವಾಮಿ ಪ್ರಕರಣದ ಆರಂಭದಿಂದಲೂ ನೋಡುತ್ತಿದ್ದೇನೆ. ಅಂದಿನಿಂದ ಇದೆಲ್ಲ ಶುರುವಾಗಿದೆ. ಕೊಲೆ ಮಾಡಿದ್ದು ಯಾರೋ. ಸಫರ್ ಆಗುತ್ತಿರುವುದು ಬೇರೆಯವರು. ದರ್ಶನ್ ಸರ್ ಹೆಸರು ಹಾಳು ಮಾಡಲಾಗುತ್ತಿದೆ. ದರ್ಶನ್ ಸರ್ ವಾರಿಯರ್ ಹೆಸರಿನ ಅಧಿಕೃತ ಫ್ಯಾನ್ ಪೇಜ್ ತುಂಬಾ ಮೆಚುರ್ ಆಗಿ ನಡೆದುಕೊಂಡಿದ್ದಾರೆ. ಅದನ್ನು ನೋಡಬೇಕು. ಇಲ್ಲ ಸಲ್ಲಸದವರು ಅನ್‌ಅಫಿಸಿಯಲ್ ಜನ ಮಧ್ಯ ಬಂದು ನಟ ದರ್ಶನ್ ಅವರ ಹೆಸರು ಎಳೆದು ತರಲಾಗುತ್ತಿದೆ. ಸೆಲೆಬ್ರೆಟಿ ಆಗಿದ್ದರಿಂದ ದರ್ಶನ್ ಅವರನ್ನು ಎಳೆದು ತಂದು ಹೆಸರು ಹಾಳು ಮಾಡ್ತಾರೆ. ನಿಜಕ್ಕೂ ಇದು ನೋಡಿ ಬೇಜಾರ್ ಆಗ್ತಿದೆ'' ಎಂದಿದ್ದಾರೆ.
ಮುಂದುವರೆದು ''ಒಂದೇ ಇಂಡಸ್ಟ್ರಿಯಲ್ಲಿ ಇದ್ದೇವೆ. ಈಗಾಗಲೇ ಅವರು ಒಂದು ಕೇಸಿನಲ್ಲಿ ಕುಗ್ಗಿದ್ದಾರೆ. ಈ ಮಧ್ಯ ಸೆಲೆಬ್ರೆಟಿ ಆಗಿದ್ದರಿಂದ ಅವರನ್ನೇ ಎಳೆದು ತರುತ್ತಾರೆ. ಅವರಿಗೆ ಟಾರ್ಚರ್ ಮಾಡುತ್ತಾರೆ. ಇನ್ನೂವರೆಗೆ ಇದು ಮುಂದುವರಿದಿದೆ. ಇದೆಲ್ಲ ನೋಡಿ ತುಂಭಾ ಬೇಜಾರ್ ಆಗಿದೆ. ಒಂದೇ ಚಿತ್ರರಂಗದಲ್ಲಿ ಇದ್ದುಕೊಂಡು ಒಂದು ಸಮಯದಲ್ಲಿ ಜೊತೆಗೆ ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ಸೂಪರ್ ಹಿಟ್ ಹಾಡು ಕೊಟ್ಟವರು. ಇದೊಂದು ದ್ವೇಷ, ಕಹಿತನ, ಇಂತಹ ವರ್ತನೆ ಬೇಕಾಗಿದೆಯಾ?

ದೊಟ್ಟ ನಟಿಯಾದ್ರು ಪ್ರಶ್ನಿಸೋಕೆ ಇವರ್ಯಾರು?
'ಯಾರು ಎಷ್ಟೇ ದೊಡ್ಡ ನಟಿಯಾದರೂ ಪ್ರಶ್ನೆ ಮಾಡೋಕೆ ಏನು ಅಧಿಕಾರ ಇದೆ. ಅವರು ಯಾರು ಪ್ರಶ್ನೆ ಮಾಡೋಕೆ?. ಅವರು ನ್ಯಾಯಾಂಗ ವ್ಯವಸ್ಥೆಯೇ? ಜಡ್ಜ ಅಂತೂ ಅಲ್ಲವೇ?. ಯಾರಾದ್ರು ಮೆಸೆಜ್ ಮಾಡ್ತಾರೆ. ಬೀದಿ ಹೋಗೋರು ಬರೋರು ಮೆಸೆಜ್ ಮಾಡ್ತಾರೆ. ಅವರಿಗೆ ದರ್ಶನ್ ಸರ್ ಇಷ್ಟವಿರುತ್ತಾರೆ. ಅಂದ ಮಾತ್ರ ದರ್ಶನ್ ಫ್ಯಾನ್ಸ್ ಕೆಟ್ಟವರು ಅಂದ್ರೆ ಹೇಗೆ? ಎಂದು ನಟಿ ರಮ್ಯಾಗೆ ಟಕ್ಕರ್ ಕೊಟ್ಟಿದ್ದಾರೆ'' ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಮಾತನಾಡಿದ ಹೇಳಿಕೆ ವೈರಲ್ ಆಗುತ್ತಿದೆ. ಇದು ರಮ್ಯಾ vs ಸಂಜನಾ ಗಲ್ರಾನಿ ವಾರ್ ರೀತಿ ಮುಂದುವರಿಯುತ್ತಾ? ಇದಕ್ಕೆ ನಟಿ ರಮ್ಯಾ ಅವರು ಪ್ರತಿಕ್ರಿಯಿಸುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications