ಹುಟ್ಟುಹಬ್ಬದ ದಿನವೇ ಕನಸು ನನಸು ಮಾಡಿಕೊಂಡ 'ರಾಮಾಚಾರಿ' ಚಾರು
ರಾಮಾಚಾರಿ ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಹೆಜ್ಜೆ ಇಟ್ಟು ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಮೌನ ಗುಡ್ಡೆಮನೆ ಕನಸು ನನಸಾಗಿಸಿ ಕೊಂಡ ಖುಷಿಯಲ್ಲಿದ್ದಾರೆ. ತಮ್ಮ ಬಹಳ ವರ್ಷಗಳ ಆಸೆಯನ್ನು ಮೌನ ಗುಡ್ಡೆಮನೆ ತಮ್ಮ ಹುಟ್ಟುಹಬ್ಬದ ದಿನದಂದೇ ಈಡೇರಿಸಿಕೊಂಡಿದ್ದಾರೆ.
ತಮ್ಮ 21ನೇ ಹುಟ್ಟುಹಬ್ಬವನ್ನು ನಟಿ ಮೌನ ಗುಡ್ಡೆಮನೆ ವಿಶೇಷವಾಗಿ ಆಚರಿಸಿಕೊಂಡಿದ್ದು, ರಾಮಾಚಾರಿಯ ಚಾರು ಹೊಸ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನದಂದೇ ನಟಿ ಮೌನ ಗುಡ್ಡೆಮನೆ ಹೊಸ ಕಾರಿನ ಒಡತಿಯಾಗಿದ್ದಾರೆ. ಕಿಯಾ ಕಾರು ಖರೀದಿ ಮಾಡಿರುವ ಮೌನ ಗುಡ್ಡೆಮನೆ ಹೊಸ ಕಾರಿಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದಾರೆ. ತಮ್ಮ ಕನಸು ನನಸಾದ ಖುಷಿಯನ್ನು ಮೌನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾಯಿ, ಸಹೋದರಿಯೊಂದಿಗೆ ಹೊಸ ಕಾರಿನ ಫೋಟೋವನ್ನು ಮೌನ ಗುಡ್ಡೆಮನೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
'ನನ್ನ ಕನಸಿನ ದಾರಿಯಲ್ಲಿ ಇದು ಪುಟ್ಟ ಹೆಜ್ಜೆ' ಎಂದು ಮೌನ ಗುಡ್ಡೆಮನೆ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ನಟಿ ಮೌನ ಗುಡ್ಡೆಮನೆ ಹೊಸ ಕಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿಕ್ಕ ವಯಸ್ಸಿಗೆ ಐಷಾರಾಮಿ ಕಾರು ಖರೀದಿಸಿದ ನಟಿ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮೌನ ಅವರ ಹೊಸ ಕಾರಿನ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಚಾರು, ನಿಮ್ಮ ಕನಸು ನಿಜವಾಗಲಿ, ನಿಮ್ಮ ಮುಖದಲ್ಲಿ ನಗು ಯಾವಾಗಲೂ ಹೀಗೆ ಇರಲಿ, ಯಾವಾಗಲೂ ಖುಷಿಯಾಗಿರಿ, ಚಾರು ನಿಮ್ಮ ಕನಸೆಲ್ಲ ನನಸಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ನಟಿ ಮೌನ ಗುಡ್ಡೆಮನೆ ಖರೀದಿ ಮಾಡಿರುವ ಕಿಯಾ ಪ್ರೈಝ್ ರೇಂಜ್ ಕಾರಿನ ಬೆಲೆ 13 ಲಕ್ಷದಿಂದ 24 ಲಕ್ಷ ರೂಪಾಯಿವರೆಗೂ ಇದೆ ಎನ್ನಲಾಗಿದೆ.












Click it and Unblock the Notifications