Ramachari: ಮೊದಲ ಬಾರಿಗೆ ಚಾರುಗೆ ಮುತ್ತು ಕೇಳಿದ ರಾಮಾಚಾರಿ: ವೈಶಾಖ ಪ್ಲ್ಯಾನ್ ಉಲ್ಟಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಕಥೆ ಅದ್ಭುತವಾಗಿ ಮೂಡಿಬರುತ್ತಿದ್ದು ಕುಡಿದು, ಪಾರ್ಟಿ, ಪಬ್, ಕ್ಲಬ್ ಸುತ್ತಾಡಿಕೊಂಡು ಇದ್ದ ಶ್ರೀಮಂತ ಹುಡುಗಿ ಚಾರುಲತಾ ಪೌರೋಹಿತ್ಯ ಮಾಡುವ ಕುಟುಂಬದಲ್ಲಿ ಹೊಂದಿಕೊಂಡಿರುವುದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಈ ಧಾರಾವಾಹಿಯ ಬಿಗ್ ಟ್ವಿಸ್ಟ್ ಏನಪ್ಪ ಅಂದರೆ, ಪ್ರತೀ ಬಾರಿ ಚಾರು ತನ್ನ ಗಂಡ ರಾಮಾಚಾರಿಗೆ ಮುತ್ತು ಕೇಳಿ ತರ್ಲೇ ಮಾಡುತ್ತಿದ್ದರು. ಆದರೀಗ ಚಾರುಲತಾಳಂತೆ ರಾಮಾಚಾರಿ ತರ್ಲೇ ಮಾಡಲು ಶುರುಮಾಡಿದ್ದಾರೆ.
ಹೌದು... ಚಾರುಲತಾ ಹತ್ತಿರ ಬಂದರೆ ಸಾಕು ದೂರ ಓಡಿ ಹೋಗಿ ನಿಲ್ಲುತ್ತಿದ್ದ ರಾಮಾಚಾರಿ ಈಗ ತನ್ನ ಹೆಂಡತಿಯ ಸದ್ಘುಣಗಳನ್ನು ಮೆಚ್ಚಿಕೊಂಡಿದ್ದಾರೆ. ಹೆಂಡತಿಯನ್ನು ಒಂದು ಕ್ಷಣ ಬಿಟ್ಟು ಇರದಷ್ಟು ಹತ್ತಿರವಾಗುತ್ತಿದ್ದಾರೆ. ಚಾರುಲತಾ ತನ್ನ ಕುಟುಂಬಕ್ಕಾಗಿ ತೆಗೆದುಕೊಳ್ಳುತ್ತಿರುವ ರಿಸ್ಕ್ ರಾಮಾಚಾರಿಗೆ ತುಂಬಾ ಇಷ್ಟವಾಗುತ್ತಿದೆ. ಹೀಗಾಗಿ ರಾಮಾಚಾರಿ ಚಾರುಲತಾಳನ್ನು ಹೆಂಡತಿಯಾಗಿ ಸ್ವೀಕರಿಸಲು ಮನಸ್ಸು ಮಾಡಿದ್ದಾರೆ.

ಪೌರೋಹಿತ್ಯ ಕುಟುಂಬಕ್ಕೆ ಹೊಂದಿಕೊಂಡ ಶ್ರೀಮಂತ ಹುಡುಗಿ ಚಾರು
ಚಾರುಲತಾ ಹಾಗೂ ರಾಮಾಚಾರಿ ಮದುವೆ ಪರಸ್ಪರ ಒಪ್ಪಿಗೆ ಮೇರೆಗೆ ನಡೆದಿದ್ದರೂ ಕೂಡ, ರಾಮಾಚಾರಿ ಕುಟುಂಬಸ್ಥರಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಯಾಕೆಂದರೆ ರಾಮಾಚಾರಿ ತಂದೆ ಪೌರೋಹಿತ್ಯ ಮಾಡುವ ನಾರಾಯಾಣಾಚಾರ್ಯರಿಗೆ ಚಾರುಲತಾ ಶ್ರೀಮಂತಿಕೆಯ ಅಹಂಕಾರದ ನುಡಿ, ನಡೆ, ಜೀವನ ಶೈಲಿ ಯಾವುದೂ ಕೂಡ ಇಷ್ಟವಾಗಿರಲಿಲ್ಲ.
ಆದರೆ ರಾಮಾಚಾರಿಯನ್ನು ಮದುವೆಯಾಗುವಾಗ ಚಾರುಲತಾ ಸಂಪೂರ್ಣವಾಗಿ ಬದಲಾಗಿದ್ದರು. ಅದನ್ನು ಸಾಬೀತು ಮಾಡಿ ನಾರಾಯಾಣಾಚಾರ್ಯ ಕುಟುಂಬಕ್ಕೆ ತಕ್ಕ ಸೊಸೆ ಎನಿಸಿಕೊಂಡಿದ್ದಾರೆ. ರಾಮಾಚಾರಿಗೆ ತಕ್ಕ ಹೆಂಡತಿ ಕೂಡ ಆಗಿದ್ದಾರೆ. ಮನೆ ಜನ ಮೆಚ್ಚುವವರೆಗೂ ರಾಮಾಚಾರಿ ಚಾರುಲತಾ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದರು.
ಸೀದಾ ಸಾದ ಹುಡುಗ ರಾಮಾಚಾರಿಯ ಮನಗೆದ್ದ ಚಾರುಲತಾ
ಆದರೆ ಕಳೆದ ದಿನ ಸಂಚಿಕೆಯಲ್ಲಿ ರಾಮಾಚಾರಿ ತನ್ನ ಹೆಂಡತಿಗೆ ಮುತ್ತು ಕೇಳಿದ್ದಾರೆ. ಸೀದಾ ಸಾದ ಹುಡುಗ ರಾಮಾಚಾರಿ ಇಷ್ಟೊಂದು ಬದಲಾಗಿದ್ದು ಚಾರು ಒಳ್ಳೆಯತನದಿಂದ. ಆದರೆ ಚಾರು ಮಾತ್ರ ಮುತ್ತು ಕೊಡಲು ರಾಮಾಚಾರಿಗೆ ಸತಾಯಿಸಿದ್ದು ಕಂಡು ಬಂತು. ಚಾರುಲತಾಗೆ ರಾಮಾಚಾರಿ ಮುತ್ತು ಕೊಡಲು ಮುಂದಾದಾಗ ವೈಶಾಖಾ ಅಡ್ಡಿ ಬಂದು, ಸಗಣಿಯಲ್ಲಿ ಬೀಳುವಂತಾಯಿತು.
ಇದರಿಂದ ಸಗಣಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ವೈಶಾಖಾಗೆ ಭಾರೀ ಮುಖಭಂಗವಾಗಿದೆ. ಅಲ್ಲದೆ ರಾಮಾಚಾರಿ ಜೊತೆಗೆ ಚೆನ್ನಾಗಿ ಇದ್ದ ಕ್ಷಣಗಳನ್ನು ಕಂಡು ವೈಶಾಖ ಸಿಕ್ಕಾಪಟ್ಟೆ ಉರಿದುಕೊಂಡಿದ್ದಾರೆ. ಇದರಿಂದಾಗಿ ಚಾರುಲತಾಳನ್ನು ಸಾಯಿಸಲು ಕೂಡ ವೈಶಾಖ ಮುಂದಾಗಿದ್ದು ಕಂಡುಬಂದಿದೆ.
ಚಾರುಲತಾಳನ್ನ ಬಾವಿಗೆ ತಳ್ಳುವ ವೈಶಾಖ ಪ್ಲ್ಯಾನ್ ಉಲ್ಟಾ
ಬಾವಿ ಬಳಿ ಬಟ್ಟೆ ಒಣಗಿ ಹಾಕುವ ವೇಳೆ ಚಾರುಲತಾಳನ್ನು ಬಾವಿಗೆ ತಳ್ಳಲು ಪ್ಲ್ಯಾನ್ ಮಾಡಿದ ವೈಶಾಖ ತಾನೇ ಬಾವಿಗೆ ಬಿದ್ದಿದ್ದಾರೆ. ಈ ಸಂಚಿಕೆ ಇಂದು ಪ್ರಸಾರವಾಗಲಿದ್ದು ಭಾರೀ ಕುತೂಹಲವನ್ನು ಕೆರಳಿಸಿದೆ.
ಚಾರುಲತಾ ವೈಶಾಖ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇದ್ದಾರೆ. ಮತ್ತೊಂದು ವಿಚಾರ ಅಂದರೆ ಸತ್ಯದ ಪರ ದೇವರು ಇರುವಂತೆ ವೈಶಾಖ ಸೃಷ್ಟಿಸುವ ಎಲ್ಲಾ ಸಮಸ್ಯೆಗಳಿಗೆ ಚಾರುಲತಾ ಏನೂ ಮಾಡದೇ ಇದ್ದರೂ ಕೂಡ ವೈಶಾಖ ಪ್ಲ್ಯಾನ್‌ಗಳು ಉಲ್ಟಾ ಹೊಡೆಯುತ್ತಿವೆ.
ವೈಶಾಖ ತಾನೇ ತೋಡಿದ ಬಾವಿಯಲ್ಲಿ ಬಿದ್ದಿದ್ದಾರೆ. ಮುಂದೆ ಏನಾಯ್ತು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ರಾಮಾಚಾರಿ ಚಾರುಗೆ ಹತ್ತಿರವಾಗುತ್ತಿದ್ದರೆ, ವೈಶಾಖ ಮನೆ ಒಡೆಯುವ ಪ್ಲ್ಯಾನ್‌ಗಳೆಲ್ಲವೂ ಪ್ಲಾಪ್ ಆಗುತ್ತಿವೆ. ಹೀಗೆ ಈ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ಮೂಲಕ ವೀಕ್ಷಕರನ್ನು ರಂಜಿಸುತ್ತಲೇ ಇದೆ.












Click it and Unblock the Notifications