ರಾಮಾಚಾರಿ: ಚಾರಿ ಕೋಪ ಕಡಿಮೆ ಮಾಡಲು ಬಾತ್‌ರೂಮ್ಗೆ ಎಂಟ್ರಿ ಕೊಟ್ಟ ಚಾರು: ಮುಂದೇನಾಯ್ತು?

ರಾಮಚಾರಿ ಸ್ನಾನ ಮಾಡುವಾಗ ಬಾತ್‌ರೂಮ್‌ಗೆ ಎಂಟ್ರಿ ಕೊಟ್ಟ ಚಾರುಲತಾ. ಚಾರುಲತಾಳನ್ನು ಬಾತ್‌ರೂಪ್‌ನಲ್ಲಿ ಕಂಡು ರಾಮಾಚಾರಿ ಶಾಕ್. ಅಷ್ಟಕ್ಕೂ ರಾಮಚಾರಿ ಸ್ನಾನ ಮಾಡುವಾಗ ಚಾರುಲತಾ ಬಾತ್‌ರೂಮ್‌ಗೆ ಹೋಗಿದ್ದು ಯಾಕೆ? ಚಾರು ಗೊತ್ತಿಲ್ಲದೆ ಬಾತ್‌ರೂಮ್‌ಗೆ ಹೋದಳಾ? ಅಥವಾ ಗೊತ್ತಿಲ್ಲದೇ ಸ್ನಾನದ ಗೃಹಕ್ಕೆ ಚಾರು ಹೋದ್ಲಾ? ಈ ಇಂಟ್ರಸ್ಟ್ರಿಂಗ್ ಎಪಿಸೋಡ್ ಬಗ್ಗೆ ನಾವು ಹೇಳ್ತೀವಿ ಕೇಳಿ.

ಕಲರ್ಸ್‌ ಕನ್ನಡದಲ್ಲಿ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವ ರಾಮಾಚಾರಿ ಧಾರವಾಹಿ ಜನಮನ ಗೆಲ್ಲಲು ನಿತ್ಯ ಹೊಸ ಥ್ರಿಲ್‌ನೊಂದಿಗೆ ಮೂಡಿ ಬರುತ್ತಿದೆ. ಮಾವನ ಮನೆ ಜನರ ಮನ ಗೆಲ್ಲಲು ಚಾರುಲತಾ ಮಾಡುತ್ತಿರುವ ಫನ್ನಿ ಪ್ರಯತ್ನಗಳು ನೋಡುಗರ ಗಮನ ಸೆಳೆದಿವೆ. ಚಾರುಲತಾ ಗಂಡ ರಾಮಾಚಾರಿ ಕೋಪವನ್ನು ಕಡಿಮೆ ಮಾಡಲು ಮಾಡುತ್ತಿರುವ ಪ್ರಯತ್ನ ಒಂದೆರೆಡಲ್ಲ. ಹಾಗಾದರೆ ಕಳೆದ ದಿನ ಚಾರು ಚಾರಿ ಮನಗೆಲ್ಲಲು ಮಾಡಿದ್ದೇನು ಗೊತ್ತಾ?

Ramachari: Charu entered the bathroom to reduce his husbend charis angry: What happened next?

ತಂದೆ ನಾರಾಯಾಣಾಚಾರ್ಯರು ಹಾಗೂ ರಾಮಚಾರಿ ನಡುವೆ ಮನಸ್ತಾಪ ಹೆಚ್ಚಾಗಲು ಚಾರುಲತಾ ಕಾರಣ ಎನ್ನುವುದಕ್ಕೆ ರಾಮಾಚಾರಿ ಪತ್ನಿ ಚಾರುಲತಾ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಹೀಗಾಗಿ ಬೇಸರಗೊಂಡು ಚಾರುಲತಾ ನಿತ್ಯ ಹೊಸ ಹೊಸ ಪ್ರಯತ್ನಗಳಿಂದ ರಾಮಾಚಾರಿ ಕೋಪ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾಳೆ.

ಈ ಪ್ರಯತ್ನದಲ್ಲಿದ್ದ ಚಾರುಗೆ ರಾಮಾಚಾರಿ ಕೋಪ ಕಡಿಮೆ ಮಾಡಲು ಸುವರ್ಣ ಅವಕಾಶ ಸಿಕ್ಕಿತ್ತು. ಅದೇನೆಂದರೆ ಪ್ರತಿನಿತ್ಯದಂತೆ ಸ್ನಾನದ ವೇಳೆ ರಾಮಚಾರಿ ತಾಯಿ ಜಾನಕಿಗೆ ಬೆನ್ನುಜ್ಜಲು ಕರೆಯುತ್ತಾನೆ. ಇದೇ ಸಮಯವನ್ನು ಬಳಸಿಕೊಂಡ ಚಾರು, ಅತ್ತೆಗೆ ಬಳಿ ತಾನೇ ರಾಮಾಚಾರಿ ಬೆನ್ನುಜ್ಜಲು ಅನುಮತಿ ಕೋರುತ್ತಾಳೆ. ಇದಕ್ಕೆ ಓಕೆ ಅಂದಿದ್ದೇ ತಡ ಚಾರು ರಾಮಾಚಾರಿ ಸ್ನಾನ ಮಾಡುತ್ತಿದ್ದ ಬಾತ್‌ರೂಮ್‌ಗೆ ತೆರಳುತ್ತಾಳೆ.

Ramachari: Charu entered the bathroom to reduce his husbend charis angry: What happened next?

ಇಲ್ಲೇ ಶುರುವಾಗಿದ್ದು ಮಜಾ. ಚಾರು ಮುಖ ನೋಡದ ರಾಮಚಾರಿಗೆ ಚಾರು ಬಾತ್‌ರೂಮ್‌ಗೆ ಬಂದಿದ್ದಾಳೆ ಎನ್ನುವುದೇ ಗೊತ್ತಾಗುವುದಿಲ್ಲ. ಚಾರುವನ್ನೇ ತಾಯಿ ಅಂದುಕೊಂಡು ಬೆನ್ನುಜ್ಜಲು ತಿಳಿಸುತ್ತಾನೆ. ಈ ವೇಳೆ ಚಾರು ಸೈಲೆಂಟ್ ಆಗಿ ಚಾರಿಯ ಬೆನ್ನುಜ್ಜುತ್ತಾಳೆ. ಅನುಮಾನ ಬಂದ ರಾಮಚಾರಿ 'ಅಮ್ಮ ಜೋರಾಗಿ ಉಜ್ಜಮ್ಮ ಕೊಳೆ ಹೋಗಬೇಕಲ್ಲ' ಎನ್ನುತ್ತಾನೆ. ಅದಕ್ಕೆ ಚಾರು ಬೆನ್ನು ನೋವಾಗುವಂತೆ ಜೋರಾಗಿ ಬೆನ್ನುಜ್ಜುತ್ತಾಳೆ. ಇದರಿಂದ ಕೋಪಗೊಂಡ ರಾಮಚಾರಿ 'ಏನಮ್ಮ ಬೆನ್ನು ಚರ್ಮ ಕಿತ್ತೋಗೋತರ ಉಜ್ಜುತಾಯಿದಿಯಾ? ಸ್ವಲ್ಪ ನಿಧಾನಕ್ಕೆ ಉಜ್ಜಮ್ಮ' ಎನ್ನುತ್ತಾನೆ. ಇದರಿಂದ ಚಾರು ತುಂಬಾ ನಿಧಾನವಾಗಿ ಬೆನ್ನುಜ್ಜುತ್ತಾಳೆ. ಇದಕ್ಕೆ ಮುಖಕ್ಕೆ ಸೋಪು ಅಚ್ಚಿಕೊಂಡಿದ್ದ ರಾಮಾಚಾರಿ 'ಬೇಡ ಬಿಡಮ್ಮ ನಾನೇ ಉಜ್ಜಿಕೊಳ್ತಿನಿ' ಅಂತ ಮುಖತೊಳೆದುಕೊಳ್ಳುತ್ತಾನೆ.

ಈ ವೇಳೆ ಬಾತ್‌ರೂಮ್‌ನಲ್ಲಿ ತನ್ನ ತಾಯಿ ಅಲ್ಲ ಚಾರು ಇರೋದು ಅಂತ ತಿಳಿದು ರಾಮಾಚಾರಿ ಶಾಕ್ ಆಗುತ್ತಾನೆ. ಮುಜುಗರಗೊಳ್ಳುತ್ತಾ, ಮೈಮುಚ್ಚಿಕೊಳ್ಳುತ್ತಾ ಮತ್ತೆ ಚಾರು ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾನೆ. ಚಾರುಗೆ ಆಚೆ ಹೋಗಲು ತಿಳಿಸುತ್ತಾನೆ. ಆದರೆ ಚಾರು ಬಿಡಬೇಕಲ್ಲ. ಅಲ್ಲೂ ಕೂಡ ಚಾರು ಮತ್ತೊಂದು ಪ್ಲ್ಯಾನ್ ಮಾಡುತ್ತಾಳೆ. ಹೊರನಡೆಯಲು ಹೇಳುತ್ತಿದ್ದ ರಾಮಾಚಾರಿಗೆ ಹೊರಹೋಗುವುದಾಗಿ ಹೇಳಿ, ಕೆಳಗೆ ಬಿದ್ದ ಸೋಪಿನ ಮೇಲೆ ಕಾಲಿಟ್ಟು ರಾಮಾಚಾರಿ ಮೇಲೆ ಜಾರಿ ಬೀಳುತ್ತಾಳೆ. ಇದೇ ವೇಳೆ ವೈಶಾಕ ಕೂಡ ಅಲ್ಲಿಗೆ ಬರುತ್ತಾಳೆ. ಇವರಿಬ್ಬರು ಒಟ್ಟಿಗೆ ಇರುವುದನ್ನು ಕಂಡು ವೈಶಾಕಾಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ.

Ramachari: Charu entered the bathroom to reduce his husbend charis angry: What happened next?

ಚಾರುಲತಳನ್ನು ಮನೆಯಿಂದ ಹೊರ ಹಾಕುಲು ಚಾರು ತಾಯಿ ಮಾನ್ಯತಾ ಅವರೊಂದಿಗೆ ರಾಮಾಚಾರಿ ಅಣ್ಣನ ಹೆಂಡತಿ ವೈಶಾಕ ಒಪ್ಪಂದವನ್ನು ಮಾಡಿಕೊಂಡಿರುತ್ತಾಳೆ. ಅದಕ್ಕಾಗಿ ಮಾನ್ಯತಾ ಬಳಿ ಹಣ ಕೂಡ ಪಡೆದಿರುತ್ತಾಳೆ. ಹೀಗಾಗಿ ವೈಶಾಕಾಗೆ ಈ ದೃಶ್ಯ ನುಂಗಲಾಗದ ತುತ್ತಾಗಿದ್ದು ನಿಜ. ಹೀಗಾಗಿ ಚಾರು ಗಂಡನ ಮನೆಯವರಿಗೆ ಹತ್ತಿರವಾಗದಂತೆ ನಿತ್ಯವೊಂದು ಪ್ಲ್ಯಾನ್ ಮಾಡುತ್ತಿದ್ದ ವೈಶಾಕಾ ಇನ್ಮೇಲೆ ಇನ್ಯಾವ ಪ್ಲ್ಯಾನ್ ಮಾಡ್ತಾಳೆ? ಚಾರು ಚಾರಿಯ ಕೋಪ ಮಾಡಲು ಇನ್ಯಾವ ಪ್ರಯತ್ನ ಮಾಡ್ತಾಳೆ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+