Rakshit Shetty: ಎಲ್ರೂ ಥಿಯೇಟರ್‌ಗೆ ಬರುವಂತಹ ಸಿನಿಮಾ ಮಾಡ್ತಿನಿ: ಹೊಸ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಅಪ್ಡೇಟ್
ಕನ್ನಡ ಸ್ಟಾರ್ ಹಿರೋಗಳಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರ ಗ್ಯಾಂಗ್ ಪೈಕಿ ಇಬ್ಬರು ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಕಾಂತಾರ ದಂತಹ ದೊಡ್ಡ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ರಾಜ್ ಬಿ ಶೆಟ್ಟಿಯವರ ಸಿನಿಮಾಗಳ ಒಂದೊಂದಾಗೆ ತೆರೆ ಕಾಣುತ್ತಿವೆ. ಆದರೆ ರಕ್ಷಿತ್ ಶೆಟ್ಟಿಯವರ ಸಿನಿಮಾ ಬಗ್ಗೆ ಸಣ್ಣ ಅಪ್ಡೇಟ್ ಸಹ ಇಲ್ಲ. ಅಭಿಮಾನಿಗಳು ಸಾಕಷ್ಟು ಬಾರಿ ಪ್ರಶ್ನಿಸಿ ಸುಮ್ಮನಾಗಿ ಬಿಟ್ಟಿದ್ದಾರೆ. ಅಷ್ಟಕ್ಕೂ ರಕ್ಷಿತ್ ಶೆಟ್ಟಿ ಏನ್ ಮಾಡ್ತಿದ್ದಾರೆ? ಎಂಬ ಪ್ರಶ್ನೆ ಸೃಷ್ಟಿಯಾದ ಬೆನ್ನಲ್ಲೆ, ತಮ್ಮ ಮುಂದಿನ ಸಿನಿಮಾ ಬಗ್ಗೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ರಕ್ಷಿತ್ ಶೆಟ್ಟಿ ಹೊಂಬಾಳೆ ನಿರ್ಮಾಣ ಸಂಸ್ಥೆಯಡಿ 'ರಿಚರ್ಡ್ ಆಂಟೋನಿ' ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದರು. ಅದಾಗಿ 04 ವರ್ಷಗಳ ಕಳೆದರೂ ಸಿನಿಮಾ ಶೂಟಿಂಗ್ ಆರಂಭವೇ ಆಗಿಲ್ಲ. ಹಾಗಾದ್ರೆ ಬೇರೆ ಸಿನಿಮಾಗಳಲ್ಲಿ ರಕ್ಷಿತ್ ಬ್ಯೂಸಿಯಾಗಿದ್ದಾರೆ ಎಂದರೆ ಅದೂ ಇಲ್ಲ. ಯಾಕಿಷ್ಟು ಮಂಕಾಗಿದ್ದಾರೆ. ಸಿನಿಮಾದಿಂದ ಹೊರಗುಳಿದರೆ ಎಂಬ ಅನುಮಾನ ಮೂಡಿದೆ. ರಕ್ಷಿತ್ ಶೆಟ್ಟಿ ಏನೇ ಪೋಸ್ಟ್ ಮಾಡಿದರೂ ಅವರ ಅಭಿಮಾನಿಗಳು ನಿಮ್ಮ ಮುಂದಿನ ಸಿನಿಮಾ 'ರಿಚರ್ಡ್ ಆಂಟೋನಿ' ಸಿನಿಮಾ ಅಪ್ಡೇಟ್ ಬಗ್ಗೆ ಕೇಳುತ್ತಿದ್ದಾರೆ.

ಎರಡು ಭಾಗದಲ್ಲಿ 'ಸಪ್ತ ಸಾಗರದಚೆ ಎಲ್ಲೋ' ಸಿನಿಮಾ ರಿಲೀಸ್ ಆಗಿ 02 ವರ್ಷಗಳ ಉರುಳಿವೆ. ಇತ್ತ ರಕ್ಷಿತ್ ಶೆಟ್ಟಿ ಪತ್ತೆನೇ ಇಲ್ಲ. ಹೀಗಿದ್ದಾಗ ಅವರು ಕಾರ್ಯಕ್ರಮವೊಂದರಲ್ಲಿ ಪ್ರತ್ಯಕ್ಷವಾಗಿ ತಮ್ಮ ಮುಂದಿನ ಸಿನಿಮಾ ಬಗ್ಗೆ, ಅಭಿಮಾನಿಗಳ ಕಾಯುವಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಸಿನಿಮಾ ಶೂಟಿಂಗ್ ತಡವಾಗುತ್ತಿರುವ ಬಗ್ಗೆ ತಮಗೆ ಅರಿವಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಇತ್ತೀಚೆಗೆ ಅಮರಿಕದಲ್ಲಿ ನಡೆದ 'ನಾವಿಕ ವಿಶ್ವ ಕನ್ನಡ ಸಮ್ಮೇಳನ'ದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ 'ರಿಚರ್ಟ್ ಆಂಟೋನಿ' ಬಗ್ಗೆ ಮೌನ ಮುರಿದಿದ್ದಾರೆ. 'ಕನ್ನಡ ಭಾಷೆಗೆ 3000 ವರ್ಷಗಳ ಇತಿಹಾಸ ಇದೆ. ಅದನ್ನು ನಾವು ಉಳಿಸಬೇಕಿಲ್ಲ. ಅದೇ ನಮ್ಮನ್ನು ಉಳಿಸುತ್ತದೆ. ನಾವು ಎಲ್ಲೆ ಹೋದರೆ ಅದನ್ನು ಪ್ರೀತಿಸಬೇಕು. ಕನ್ನಡ ಬಳಸಬೇಕು' ಎಂದಿದ್ದಾರೆ.
" Good Work take Time sometimes " #Rakshitshetty attends Navika Event in US . pic.twitter.com/Uiomv00fb5
— Filmy Corner ꭗ (@filmycorner9) September 3, 2025
ಇದರೊಂದಿಗೆ ''ನಾನು ಸಿನಿಮಾದವನು. ಕನ್ನಡ ಭಾಷೆಗಾಗಿ ನಾನು, ನನ್ನ ತಂಡ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. ಕೆಲವೊಮ್ಮೆ ಸಿನಿಮಾ ಮಾಡುವಾಗ ತಡವಾಗಬಹುದು. ದೊಡ್ಡ ಕೆಲಸ ಮಾಡುವಾಗ, ಒಳ್ಳೆಯ ಸಿನಿಮಾ ಮಾಡಲು ಸಮಯ ಬೇಕಾಗುತ್ತದೆ. ಹೀಗಾಗಿ ನಾನು ಸ್ವಲ್ಪ ಟೈಂ ತಗೊಂಡಿದ್ದೇನೆ. ಮುಂದೆ ನನ್ ಸಿನಿಮಾ ಬಂದಾಗ ನೀವೆಲ್ಲರೂ ಥಿಯೇಟರ್‌ಗೆ ಬರ್ತಿರಾ. ಎಲ್ಲರು ಥಿಯೇಟರ್ ಗೆ ಬರುವಂತಹ ಸಿನಿಮಾ ಮಾಡುತ್ತೇನೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಅವರು ನಾಲ್ಕು ವರ್ಷಗಳಿಂದ 'ರಿಚರ್ಡ್ ಆಂಟೋನಿ' ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.












Click it and Unblock the Notifications