Bigg Boss: ಹನುಮಂತನನ್ನು ಕದ್ದುಮುಚ್ಚಿ ಹೀಯಾಳಿಸಿ ನಗಾಡಿದ ರಜತ್, ತ್ರಿವಿಕ್ರಮ್, ಭವ್ಯಾಗೆ ಜಾಡಿಸಿದ ಮಂದಿ

ಓಡುವ ಕುದುರೆಗೆ ಅಡ್ಡ ಹಾಕಿ ಬೀಳಿಸೋರು ತುಂಬಾ ಜನ. ಹಾಗೇ ಹನುಮಂತ ಬಿಗ್‌ಬಾಸ್‌ ಮನೆಯಲ್ಲಿ ಓಡುವ ಕುದುರೆ. ಈ ಕುದುರೆಗೆ ಅಡ್ಡ ಹಾಕಿ ಬೀಳಿಸೋಕೆ ತುಂಬಾ ಜನ ಪ್ರಯತ್ನಪಟ್ಟು ವೀಕ್ಷಕರಿಂದ ಹಿಗ್ಗಾಮುಗ್ಗಾ ಉಗಿಸಿಕೊಳ್ಳುತ್ತಿದ್ದಾರೆ. ಹನುಮಂತನನ್ನು ಹೀಯಾಳಿಸುವ ಮೂಲಕ ಬಿಗ್‌ಬಾಸ್‌ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಜತ್, ತ್ರಿವಿಕ್ರಮ್, ಭವ್ಯಾ. ಈ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹನುಮಂತನ ಫ್ಯಾನ್ಸ್ ರಜತ್, ತ್ರಿವಿಕ್ರಮ್, ಭವ್ಯಾಗೆ ಕಾಮೆಂಟ್ ಮಾಡುವ ಮೂಲಕ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಹೌದು... ಬಿಗ್‌ಬಾಸ್‌ ಮನೆಯಲ್ಲಿ ಟ್ರೋಫಿ ನೋಡಿದ ಸ್ಪರ್ಧಿಗಳು ಸಖತ್ ಖುಷಿ ಆಗಿದ್ದಾರೆ. ಇದನ್ನು ಪಡೆಯಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಟ್ರೋಫಿ ತಮಗೆ ಎಷ್ಟು ಅವಶ್ಯಕತೆ ಇದೆ ಎಂದು ಹೇಳಿಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳಲ್ಲಿ ಹನುಮಂತ ಕೂಡ ಒಬ್ಬರು. ಮನೆಯಲ್ಲಿ ಇರುವ ಆರು ಜನ ಸ್ಪರ್ಧಿಗಳಲ್ಲಿ ಹನುಮಂತ ಪ್ರಸ್ತುತ ಟಾಪ್ ಸ್ಪರ್ಧಿಯಾಗಿದ್ದಾರೆ.

Rajath trivikram bhavya mocking and laughing at hanumantha video goes viral people scolded

ಹೀಗಾಗಿ ಇದು ರಜತ್‌ಗೆ ಸಹಿಸಲು ಆಗುತ್ತಿಲ್ಲ. ಅಲ್ಲದೆ ಕಳೆದ ಬಾರಿ ರಜತ್‌ಗೆ ಹನುಮಂತ ಸರಿಯಾದ ಕಾರಣ ನೀಡಲು ಬಾರದ ಸ್ಪರ್ಧಿ ಎಂದು ಹೇಳಿದ್ದರು. ಇದಕ್ಕೆ ಕೋಪಗೊಂಡ ರಜತ್ ಹನುಮಂತನನ್ನು ಹೀಯಾಳಿಸುವ ಮೂಲಕ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಹನುಮಂತ ಟಾಪ್ ಸ್ಪರ್ಧಿಯಾಗಿರುವುದರಿಂದ ಆತನನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಇರುವ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಕೂಡ ರಜತ್‌ ಅಪಹಾಸ್ಯ ಮಾಡಲು ಸಾತ್ ನೀಡಿದ್ದಾರೆ. ಇದು ಬಿಗ್‌ಬಾಸ್‌ ವೀಕ್ಷಕರ ಕೋಪದ ಕಟ್ಟೆಯನ್ನು ಒಡೆದಿದೆ. ಹಾಗಾದರೆ ವೀಡಿಯೋದಲ್ಲಿ ಏನಿದೆ?

ಹನುಮಂತನನ್ನು ಹೀಯಾಳಿಸಿದ ರಜತ್

ಹನುಮಂತ ಟ್ರೋಫಿ ನೋಡಿ ಹೇಗಾಡುತ್ತಾನೆ ಎಂದು ವೀಡಿಯೋದಲ್ಲಿ ರಜತ್ ಹೀಯಾಳಿಸಿದ್ದಾರೆ. 'ಅವ್ವಾ... ನಂದೇ ಅವ್ವಾ ಟ್ರೋಫಿ. ನಾನೇ ಗೆದ್ಕೊಂಡು ಬರ್ತೀನಿ ಅವ್ವಾ..' ಎಂದು ಹನುಮಂತ ಹೇಳುತ್ತಾನೆ ಎಂದು ರಜತ್ ಗೇಲಿ ಮಾಡುತ್ತಾರೆ. ರಜತ್, ತ್ರಿವಿಕ್ರಮ್, ಭವ್ಯಾ ಮೂರು ಸ್ಪರ್ಧಿಗಳು ಹನುಮಂತನನ್ನು ಗೇಲಿ ಮಾಡಿ ಕೇಕೆ ಹಾಕಿ ನಗಾಡುತ್ತಾರೆ.

ರಜತ್, ತ್ರಿವಿಕ್ರಮ್, ಭವ್ಯಾಗೆ ದೆವ್ವಾ ಬಿಡಿಸಿದ ಜನ

ಇದಕ್ಕೆ ಜನ ಯಾವ ರೀತಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ ಅಂದರೆ ಅದನ್ನು ನಾವು ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯ ಇಲ್ಲ. ಬಾಯಿಗೆ ಬಂದಂತೆ ರಜತ್, ತ್ರಿವಿಕ್ರಮ್ ಹಾಗೂ ಭವ್ಯಾ ಅವರನ್ನು ಬೈದಾಡುತ್ತಿದ್ದಾರೆ. ''ಈ ನನ್ನ ಮಕ್ಕಳಿಗೆ ಗೊತ್ತಿಲ್ಲ ಕಪ್ ನಮ್ಮ ಹನುಮಂತನಂದು ಅಂತ, ತಾಯಿ ಬಗ್ಗೆ ಪ್ರೀತಿ ಇದ್ದವರಿಗೆ ಮಾತ್ರ ಗೊತ್ತು..comedey madodu alla'' ಎಂದು ಮಂಜುನಾಥ್ ರೆಡ್ಡಿ ಎಂಬುವವರು ಕಾಮೆಂಟ್ ಮಾಡಿದ್ದಾರೆ.

''ರಜತ್ ಸಿಕ್ಕಾಪಟ್ಟೆ ಉರ್ಕೊಂಡಿದ್ದಾನೆ ಅನ್ನೋದು ಈ ವೀಡಿಯೋದಿಂದ ಗೊತ್ತಾಗುತ್ತೆ. ಆದರೆ ಹನುಮಂತನ ಒಂದು ತಲೆ ಕೂದಲಿಗೂ ಇವರು ಮೂರು ಜನ ಸಮ ಇಲ್ಲ. ರಜತ್ ನೆಸ್ಟ್ ಮನೆಗೆ ಹೋಗೋದು ನೀನೆ ಅನ್ನೋ ಭಯ ಇದಿಯಾ? ಭಯದಲ್ಲಿ ಏನೇನೋ ಮಾತಾಡಿ. ನಾಳೆ ಹೋಗೋನು ಇವತ್ತೇ ಮನೆಗೆ ಹೋಗೋತರ ಮಾಡ್ಕೋಬೇಡ'' ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಹನುಮಂತನನ್ನು ಗೇಲಿ ಮಾಡಿದ್ದು ಹನುಮಂತನ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕೋಪ ತರಿಸಿದೆ. ಇದರಿಂದಾಗಿ ಇದರ ಜಿದ್ದಿಗಾಗಿ ಹನುಮಂತನನ್ನು ಗೆಲ್ಲಿಸಲೇಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಜನ. ಹೀಗಾಗಿ ಈ ಬಾರಿ ಹನುಮಂತನೇ ಗೆಲ್ಲೋದು ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+