Bigg Boss: ಗೋಲ್ಡ್ ಸುರೇಶ್‌ಗೆ ಕೆಟ್ಟದಾಗಿ ಬೈದಿದ್ದ ರಜತ್‌ಗೆ 'ಜೈಲು ಶಿಕ್ಷೆ'!
ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ವಾದ, ವಿವಾದ, ಜಗಳ ಜೋರಾಗಿದೆ. ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಜೋರಾಗಿ ಜಗಳವಾದ ಕಾರಣ ಲಾಯರ್ ಜಗದೀಶ್ ಮತ್ತು ರಂಜಿತ್‌ರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಬಿಗ್‌ಬಾಸ್ 50 ದಿನ ಪೂರೈಸಿದ ಬಳಿಕ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲೇ ಇವರಿಬ್ಬರೂ ಅಬ್ಬರಿಸಿದ್ದರು, ಇವರ ಆಟ ನೋಡಿ ಮನೆಯಲ್ಲಿದ್ದ ಸ್ಪರ್ಧಿಗಳು ಶಾಕ್ ಆಗಿದ್ದರು.
ರಜತ್ ಕಿಶನ್ ಎಂಟ್ರಿಯಾಗುವ ಮೊದಲೇ ಸ್ಪರ್ಧಿಗಳನ್ನು ಅರ್ಧ ತಿಕ್ಲು ಅರ್ಧ ಪುಕ್ಲು ಎಂದು ಕರೆದಿದ್ದರು. ಮನೆಗೆ ಎಂಟ್ರಿಯಾದ ಬಳಿಕ ಜೋರು ಧ್ವನಿಯಲ್ಲಿ ಮಾತನಾಡಿ, ಎಲ್ಲರ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸಿದ್ದರು. ಅದಾದ ಬಳಿಕ ಟಾಸ್ಕ್ ಸಂದರ್ಭದಲ್ಲಿ ಗೋಲ್ಡ್ ಸುರೇಶ್ ಜೊತೆ ಜಗಳವಾಡಿದ್ದರು. ಕೆಟ್ಟದಾಗಿ ಬೈದಿದ್ದರಿಂದ ಸಿಟ್ಟಿಗೆದ್ದ ಗೋಲ್ಡ್ ಸುರೇಶ್ ಮನೆಯಿಂದ ಹೊರಕಳಿಸುವಂತೆ ಹಠ ಹಿಡಿದಿದ್ದರು.

ಇದೀಗ ರಜತ್ ಕಿಶನ್‌ಗೆ ಬುದ್ದಿ ಕಲಿಸಲು ಎಲ್ಲಾ ಸ್ಪರ್ಧಿಗಳು ಒಂದಾಗಿದ್ದಾರೆ. ಎಲ್ಲಾ ಸೇರಿ ರಜತ್ ಕಿಶನ್‌ಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ರಜತ್ ಕಿಶನ್ ಮಾತುಗಳು ಸರಿಯಿಲ್ಲ, ಕೆಟ್ಟದಾಗಿ ಮಾತನಾಡುತ್ತಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಎಲ್ಲರೂ ಅವರಿಗೆ ಕಳಪೆ ಪಟ್ಟ ಕೊಟ್ಟ ಕಾರಣ ಅವರು ಜೈಲು ಸೇರಿದ್ದಾರೆ. ಕಳಪೆ ಪಟ್ಟ ಪಡೆಯುವ ಸ್ಪರ್ಧಿ ಜೈಲು ಸೇರಬೇಕು ಎನ್ನುವ ನಿಯಮ ಬಿಗ್‌ಬಾಸ್ ಮನೆಯಲ್ಲಿದೆ.
ಕ್ಲಾಸ್ ತೆಗೆದುಕೊಳ್ಳಲು ಒತ್ತಾಯ
ರಜತ್ ಕೆಟ್ಟದಾಗಿ ಮಾತನಾಡಿದ್ದಕ್ಕೆ ವೀಕ್ಷಕರು ಕೂಡ ಅಸಮಾಧಾನಗೊಂಡಿದ್ದಾರೆ. ರಜತ್ ಗೋಲ್ಡ್ ಸುರೇಶ್ ಮಾತ್ರವಲ್ಲದೆ ಮಹಿಳಾ ಸ್ಪರ್ಧಿಗಳ ಎದುರಲ್ಲೂ ಕೆಟ್ಟದಾಗಿ ಮಾತನಾಡಿವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ವಾರ ಕಿಚ್ಚ ಸುದೀಪ್ ರಜತ್‌ಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಚೈತ್ರಾ ಕುಂದಾಪುರ ಕೂಡ ಈ ವಾರ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದರು, ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ಜಗಳವಾಗಿದ್ದು ಕಿಚ್ಚ ಸುದೀಪ್ ಈ ವಾರ ಯಾರಿಗೆಲ್ಲಾ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗೆ ರಜತ್ ಮತ್ತು ಉಗ್ರಂ ಮಂಜು ಆಯ್ಕೆಯಾಗಿದ್ದರು. ಕೊನೆಯಲ್ಲಿ ರಜತ್ ಸೋಲು ಕಂಡರೆ ಮಂಜು ಗೆಲುವು ಸಾಧಿಸಿದರು. ಹನುಮಂತು ಭರ್ಜರಿ ಪೈಪೋಟಿ ನೀಡಿದರೂ ಕೊನೆಯಲ್ಲಿ ಸೋಲು ಕಂಡರು, ಚೈತ್ರಾ ಕುಂದಾಪುರ ಮತ್ತು ಶೋಭಾ ಶೆಟ್ಟಿ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋಲು ಕಂಡರು.












Click it and Unblock the Notifications