Rachita Ram: ರಚಿತಾ ರಾಮ್‌ಗೆ ದೊಡ್ಡ ಸರ್‌ಪ್ರೈಸ್‌ ಕೊಟ್ಟ ನಟ ದರ್ಶನ್‌, ಏನದು?

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರು ಟಾಪ್‌ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಕನ್ನಡದ ಪ್ರಮುಖ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ರಚಿತಾ ರಾಮ್ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ 12 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ ಜಡ್ಜ್‌ ಆಗಿರುವ ನಟಿಗೆ ವೇದಿಕೆಯಲ್ಲೇ ಅಭಿನಂದನೆಗಳ ಸುರಿಮಳೆ ಹರಿದಿದೆ. ವಿಶೇಷ ಅಂದ್ರೆ ಈ ಸಂದರ್ಭದಲ್ಲೇ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ರಚಿರಾ ರಾಮ್‌ಗೆ ದೊಡ್ಡ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ.

ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ರಚಿತಾ ರಾಮ್‌ ಅವರಿಗೆ ಎಲ್ಲರೂ ವಿಶ್‌ ಮಾಡುತ್ತಿದ್ದರು. ರಚಿತಾ ಅವರು ಚಿತ್ರರಂಗದಲ್ಲಿ 12 ವರ್ಷ ಕಳೆದ ಸಂಭ್ರಮವನ್ನು ಈ ವೇದಿಕೆಯಲ್ಲಿ ಸೆಲೆಬ್ರೇಟ್‌ ಮಾಡಲಾಗಿದೆ. ಕ್ರೇಜಿಸ್ಟಾರ್‌ ರವಿಚಂದ್ರನ್‌ ಕೂಡ ರಚಿತಾ ಅವರನ್ನು ಹಾಡಿಹೊಗಳಿದರು. ರಚಿತಾ ಅವರ ಡಿಂಪಲ್‌ ಬಗ್ಗೆ ಉಲ್ಲೇಖಿಸಿ, ಇದು ಸಾಮಾನ್ಯವಾದ ಸುಳಿ ಅಲ್ಲ ಎಂದು ರವಿಚಂದ್ರನ್‌ ಕೊಂಡಾಡಿದ್ದಾರೆ. ಇದೇ ವೇಳೆ ನಟ ದರ್ಶನ್‌ ಕೂಡ ದೊಡ್ಡ ಸರ್‌ಪ್ರೈಸ್‌ ನೀಡಿದ್ದಾರೆ.

Rachita Ram Completes 12 Years In Sandalwood Actor Darshan Thoogudeepa Congratulates Her

ದರ್ಶನ್‌ ಅವರು ರಚಿತಾ ರಾಮ್‌ ಅವರಿಗಾಗಿ ವಿಶೇಷ ಸಂದೇಶ ಕಳಿಸುವ ಮೂಲಕ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ರಚಿತಾಗಾಗಿ ದರ್ಶನ್‌ ಅವರು ಸ್ಪೆಷಲ್‌ ವಿಶ್‌ ಮಾಡಿದ್ದಾರೆ. ʼನಮ್ಮ ಬುಲ್ ಬುಲ್ ಎಲ್ಲರನ್ನು ಹೀಗೆಯೇ ರಂಜಿಸುತ್ತಿರಲಿʼ ಎಂದು ದರ್ಶನ್‌ ಶುಭ ಹಾರೈಸಿದ್ದಾರೆ. ಇದನ್ನು ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ಪ್ರಸಾರ ಮಾಡಿದ್ದು, ಇದನ್ನು ಕೇಳಿ ರಚಿತಾ ರಾಮ್‌ ಫುಲ್‌ ಶಾಕ್‌ ಆಗಿ ಖುಷಿಪಟ್ಟಿದ್ದಾರೆ.

Take a Poll

ರಚಿತಾ ರಾಮ್‌ ಅವರು ದರ್ಶನ್‌ ನಟನೆಯ ಬುಲ್‌ ಬುಲ್‌ ಸಿನಿಮಾದಿಂದಲೇ ಸ್ಯಾಂಡಲ್‌ವುಡ್‌ಗೆ ನಟಿಯಾಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ಪ್ರಮುಖ ನಟಿಯಾಗಿ ಬೆಳೆದಿದ್ದಾರೆ. ಹಾಗಾಗಿ ನನಗೆ ದರ್ಶನ್‌ ಅವರೇ ಗಾಡ್‌ಫಾದರ್‌ ಎಂದು ರಚಿತಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್‌ ಸರ್‌ ಅವರಿಂದಲೇ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ರಚಿತಾ ಹೇಳಿದ್ದರು.

Rachita Ram Completes 12 Years In Sandalwood Actor Darshan Thoogudeepa Congratulates Her

ನಾನು ದರ್ಶನ್‌ ಸರ್‌ ಅವರ ಬ್ಯಾನರ್‌ನಿಂದಲೇ ಚಿತ್ರರಂಗ ಪ್ರವೇಶಿಸಿದೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ದರ್ಶನ್ ಸರ್. ಇಂದು ಇಂಡಸ್ಟ್ರಿಯಲ್ಲಿ ನಾನೇನೇ ಹೆಸರು ಮಾಡಿದ್ದರೂ ಅದಕ್ಕೆ ದರ್ಶನ್ ಸರ್ ಅವರೇ ಕಾರಣ. ಅಂದು ಅವರು ನನಗೆ ಅವಕಾಶ ಕೊಡದೇ ಇದ್ದಿದ್ದರೆ ಇಂದಿನ ರಚಿತಾ ರಾಮ್ ಆಗುತ್ತಿರಲು ಸಾಧ್ಯವಾಗುತ್ತಿರಲಿಲ್ಲ. ಅವರ ಆ ಒಂದು ಋಣ ನನ್ನ ಇಡೀ ಕುಟುಂಬದ ಮೇಲಿದೆ ಎಂದಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾಗಲೂ ಅವರ ಬೆಂಬಲಕ್ಕೆ ರಚಿತಾ ನಿಂತಿದ್ದರು. ಜೈಲಿಗೆ ತೆರಳಿ ದರ್ಶನ್‌ ಅವರನ್ನು ಭೇಟಿಯಾಗಿ ಬಂದಿದ್ದರು. ಜೈಲಿನಲ್ಲಿ ಅವರೇ ನನಗೆ ಧೈರ್ಯ ತುಂಬಿದ್ದು, ಆದಷ್ಟು ಬೇಗ ನಮಗೆ ಒಳ್ಳೆಯ ಸುದ್ದಿ ಸಿಗಲಿ ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದರು. ಇನ್ನು ದರ್ಶನ್‌ ಅವರು ಜಾಮೀನಿನ ಮೇಲೆ ಹೊರಬಂದ ನಂತರವೂ ವಿಡಿಯೋ ಮೂಲಕ ಮಾತನಾಡಿದ್ದರು. ಈ ವೇಳೆ ದರ್ಶನ್‌ ಅವರು ಮೂವರಿಗೆ ಮಾತ್ರವೇ ಥ್ಯಾಂಕ್ಸ್‌ ಹೇಳಿದ್ದರು. ಇದರಲ್ಲಿ ರಚಿತಾ ರಾಮ್‌ ಅವರ ಹೆಸರು ಕೂಡ ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+