Get Updates
Get notified of breaking news, exclusive insights, and must-see stories!

Puttakkana Makkalu: ಪುಟ್ಟಕ್ಕನ ಮಕ್ಕಳು: ಹೊಸ ಪ್ರೇಮಕಥೆಗೆ ಜನ ಫಿದಾ!

Puttakkana Makkalu: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಪುಟ್ಟಕ್ಕನ ಮಕ್ಕಳು ಮತ್ತೆ ಹಳಿಗೆ ಬಂದಿದೆ. ಸಾಕು ನಿಲ್ಲಿಸಿ ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದ ಪ್ರೇಕ್ಷಕರು ಇದೀಗ ಮತ್ತೆ ನೋಡಲು ಪ್ರಾರಂಭಿಸಿದ್ದಾರೆ. ಈ ಸೀರಿಯಲ್‌ನ ನಿರ್ದೇಶಕರು ಭಾರೀ ಟೀಕೆಗೆ ಗುರಿಯಾಗಿದ್ದರು. ಕಥೆ ಸಾಗುತ್ತಿದ್ದ ರೀತಿಗೂ ಪದೇ ಪದೇ ಪಾತ್ರಗಳ ಬದಲಾವಣೆಗೂ ಜನ ಗರಂ ಆಗಿದ್ದರು. ಈ ಧಾರವಾಹಿ ಪ್ರಾರಂಭವಾದಾಗ ಇದ್ದ ಪ್ರಮುಖ ಪಾತ್ರಧಾರಿಗಳೇ ಬದಲಾಗಿದ್ದಾರೆ. ಆದರೆ ಪ್ರಮುಖ ಪಾತ್ರಧಾರಿ ಹಾಗೂ ನಟಿ ಪಾತ್ರ ಬದಲಾವಣೆಯಾದ ಮೇಲೆ ಈ ಸೀರಿಯಲ್‌ ಡಲ್‌ ಆಗಿತ್ತು. ಇದೀಗ ನಲ್ಮೆಯ ಹಾಡು ಮತ್ತೆ ಶುರುವಾಗಿದೆ. ಈ ಸೀರಿಯಲ್‌ನಲ್ಲಿ ಮತ್ತೆ ಪಾತ್ರ ಬದಲಾವಣೆಯಾದ ಮೇಲೆ ಜನ ಮೆಚ್ಚಿಕೊಳ್ಳುತ್ತಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಟಿಆರ್‌ಪಿ ರೇಸ್‌ನಲ್ಲಿ ಯಾವಾಗಲು ಮುಂಚೂಣಿಯಲ್ಲಿ ಇರುತ್ತಿತ್ತು. ಯಾವಾಗ ಮುಖ್ಯಪಾತ್ರಧಾರಿಯ ಬದಲಾವಣೆ ಆಯಿತೋ ಆಗಿನಿಂದಲೇ ಈ ಸೀರಿಯಲ್‌ನ ಬಗ್ಗೆ ಜನರಿಂದ ಅಪಸ್ವರಗಳು ಬರಲು ಪ್ರಾರಂಭವಾಯಿತು. ಒಂದು ಹಂತಕ್ಕೆ ಇನ್ನೇನು ಈ ಧಾರವಾಹಿ ಮುಗಿದೇ ಹೋಗಲಿದೆ ಎನ್ನುವಾಗಲೇ ಪುಟಿದೆದ್ದಿದೆ. ಹೊಸ ಪ್ರೇಮ ಕಥೆಗೆ ಜನ ಮೆಚ್ಚಿಕೊಂಡಿದ್ದಾರೆ.

Puttakkana Makkalu People Excited for New love Story

ಈ ಸೀರಿಯಲ್‌ನಲ್ಲಿ ಮುಖ್ಯಪಾತ್ರಧಾರಿ ಸ್ನೇಹ ಅವರ ಸಾವು ಕಥೆಯ ತಿರುವಿಗೆ ಕಾರಣವಾಗಿತ್ತು. ಸ್ನೇಹಾ ಪಾತ್ರ ಮಾಡುತ್ತಿದ್ದ ಸಂಜನಾ ಬುರ್ಲಿ ಅವರು ವಿದ್ಯಾಭ್ಯಾಸಕ್ಕೆಂದು ಸೀರಿಯಲ್‌ ತೊರೆದಿದ್ದರು. ಇದಾದ ಮೇಲೆ ಹೊಸದಾಗಿ ಈ ಪಾತ್ರಕ್ಕೆ ಬಂದ ಅಪೂರ್ವ ನಾಗರಾಜ್ ಅವರಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಅಷ್ಟು ಮಾತ್ರವಲ್ಲ ಧನುಷ್ - ಕಂಠಿ (ಸೀರಿಯಲ್‌ ನಟ) ಪಾತ್ರಕ್ಕೆ ಅಪೂರ್ವ ಅವರು ಬೇಡ ಎನ್ನುವ ಒತ್ತಾಯವು ಪ್ರೇಕ್ಷಕರಿಂದ ಕೇಳಿ ಬಂತು. ಇನ್ನು ಈ ಸಮಯದಲ್ಲಿ ಕಥೆ ಸಹ ಸರಾಗವಾಗಿ ಸಗಾದೆ, ಗೊಜಲು ಸೃಷ್ಟಿಯಾಗಿತ್ತು ಎನ್ನುವ ಮಾತೂ ಕೇಳಿ ಬಂದಿತ್ತು.

ಹೊಸ ಬದಲಾವಣೆಯಿಂದ ಪ್ರೇಕ್ಷಕರಿಗೆ ಖುಷಿ!

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನಟಿ ಉಮಾಶ್ರೀ ಅವರ ಪಾತ್ರ ಹಾಗೂ ನಟನೆಗೆ ಅಗ್ರಸ್ಥಾನವಿದೆ. ಎರಡನೇ ಹಂತದಲ್ಲಿ ಕಂಠಿ-ಸ್ನೇಹಾ ಪ್ರೇಮ ಕಥೆಯನ್ನು ಜನ ತುಂಬಾ ಮೆಚ್ಚಿಕೊಂಡಿದ್ದರು. ಕಂಠಿ-ಸ್ನೇಹಾ ಅವರ ಪ್ರೇಮ ಕಥೆ ಮುದ್ದಾಗಿ ಸಾಗುವಾಗಲೇ ಈ ಸೀರಿಯಲ್‌ನಲ್ಲಿ ಮಹತ್ವದ ಬದಲಾವಣೆಗಳಾಗಿತ್ತು. ಇದೀಗ ಈ ಪಾತ್ರವನ್ನು ನಟಿ ವಿದ್ಯಾರಾಜ್ ಅವರು ಮಾಡುತ್ತಿದ್ದು. ಹೊಸ ಸಂಚಿಕೆಗಳಿಗೆ ಜನ ಫಿದಾ ಆಗಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ "ನನ್ನಯ ಕಣ್ಣಿಗೆ ನಿನ್ನ ನೋಡೋ ತವಕ... ಎದುರಲಿ ನಿಂತಿರಿ.... ಈ ಪ್ರೀತಿಯ ಸವಿ ಎದೆಗೆ ತಾಕಲು ಆಯಾಗಿದೆ..." ಹಾಡು ಮತ್ತೆ ಬರುತ್ತಿದೆ. ಸ್ನೇಹ - ಕಂಠಿಯ ಮಧುರ ಪ್ರೇಮಕಥೆಯ ಪುನರಾರಂಭವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ.

ಹೊಸ ತಿರುವು ಹಾಗೂ ಮುದ್ದಾದ ನಟನೆಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ. ಇದಕ್ಕೆ ಪ್ರೇಕ್ಷಕರು ಮಾಡುತ್ತಿರುವ ಕಮೆಂಟ್‌ಗಳೇ ಸಾಕ್ಷಿ. ಒಂದು ತಿಂಗಳ ಹಿಂದಷ್ಟೇ ಈ ಸೀರಿಯಲ್‌ನ ಪ್ರೋಮೊದಲ್ಲಿ ಪ್ರೇಕ್ಷಕರ ಬೈಗುಳದ ಸುರಿಮಳೆಯೇ ಇರುತ್ತಿತ್ತು. ಆದರೆ ಈಗ ಜನ ಚೆನ್ನಾಗಿದೆ ಅಂತ ಕಮೆಂಟ್ ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+