Rocking Star Yash: ಅಮ್ಮನ ಜೊತೆಗೆ ಯಶ್ ಗೆ ಮನಸ್ತಾಪ: ಪುಷ್ಪಾ ಅವರ ಫಸ್ಟ್ ರಿಯಾಕ್ಷನ್
ನಟ ರಾಕಿ ಭಾಯ್'ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ 'ಕೊತ್ತಲವಾಡಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಅವರು ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವು ಆಗಸ್ಟ್ 1ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಯಶ್ ಮತ್ತು ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದಕ್ಕೆ ಕಾರಣ, ಪುಷ್ಪಾ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಪ್ರಚಾರದಲ್ಲಿ ಯಶ್ ಭಾಗವಹಿಸದಿರುವುದು ಮತ್ತು ಪುಷ್ಪಾ ಮಾಧ್ಯಮದ ಮುಂದೆ ಯಶ್ ಬಗ್ಗೆ ಖಡಕ್ ಉತ್ತರ ನೀಡಿರುವುದು.
ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮಾತನಾಡಿರುವ ಕೆಲ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಆ ವಿಡಿಯೋಗಳನ್ನ ಗಮನಿಸಿದಾಗ ಯಶ್ ಹಾಗೂ ಅವರ ತಾಯಿ ನಡುವೆ ಏನಾದರೂ ಮನಸ್ಥಾಪ ಆಗಿದೆಯಾ ಎನ್ನುವ ಪ್ರಶ್ನೆಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಉತ್ತರವನ್ನ ನೀಡಿದ್ದಾರೆ.

ಅಮ್ಮ ಮತ್ತು ಮಗನ ಮಧ್ಯೆ ಮನಸ್ತಾಪ ಆಗಿದ್ಯಾ? ಯಶ್ ಕುಟುಂಬದಲ್ಲಿ ಬಿರುಕು ಮೂಡಿದ್ಯಾ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಏನಾದರೂ ಕ್ಲಾರಿಟಿ ಸಿಗಬಹುದೇ ಎಂಬ ಪ್ರಶ್ನೆಗೆ ಯಶ್ ಅವರ ತಾಯಿ ಉತ್ತರಿಸಿದ್ದಾರೆ. ಇದಕ್ಕೆ ನಾನು ಯಾವುದಕ್ಕೂ ಕ್ಲಾರಿಟಿ ಕೋಡೋದೇ ಇಲ್ಲ. ಅದು ಜನಗಳ ಊಹೆ, ಅವರು ಏನೂ ಬೇಕಾದರೂ ಅಂದುಕೊಳ್ಳುತ್ತಾರೆ. ಅದಕ್ಕೆಲ್ಲಾ ನಾವು ಉತ್ತರ ಕೋಡೋದಕ್ಕೆ ಹೋಗಬಾರದು. ನಾವು ಹೇಗಿದ್ದೇವೆ ಎಂಬುದು ನಮಗೆ ಗೊತ್ತಿದ್ರೆ ಸಾಕು ಎಂದು ಪುಷ್ಪಾ ಅರುಣ್ ಕುಮಾರ್ ಅವರು ಖಡಕ್ ಆಗಿ ಉತ್ತರಿಸಿದ್ದಾರೆ.
ಯಶ್ ನನ್ನ ಮಗ, ನಾನು ನಿರ್ಮಾಪಕಿ. ಅವನು ತನ್ನ ಕೆಲಸದಲ್ಲಿ ಬ್ಯುಸಿ. ನಾನು ನನ್ನ ಸಿನಿಮಾ ಜನರಿಗೆ ತೋರಿಸಲು ಮಾಡಿದ್ದೇನೆ. ಮಗನ ಅಭಿಪ್ರಾಯ ನನಗೆ ಬೇಕಿಲ್ಲ, ಜನರ ಅಭಿಪ್ರಾಯ ಮುಖ್ಯ ಎಂದು ಪುಷ್ಪಾ ಹೇಳಿದ್ದಾರೆ. ಮಗನ ಬಗ್ಗೆ ಕೇಳಿದರೆ ನಾನು ಖಡಕ್ ಉತ್ತರ ಕೊಡುತ್ತೇನೆ. ನಮ್ಮ ಮನೆಯಲ್ಲೇ ನಾವು ಈ ರೀತಿ ಇದ್ದೇವೆ. ಅವನು ಬೇರೆ, ನಾನು ಬೇರೆ. ಮನಸ್ತಾಪವೋ ಅಥವಾ ದ್ವೇಷವೋ ಇಲ್ಲ ಎಂದು ಪುಷ್ಪಾ ಸ್ಪಷ್ಟಪಡಿಸಿದ್ದಾರೆ.
ಯಶ್ ಮತ್ತು ರಾಧಿಕಾ ಮುಂಬೈನಲ್ಲಿ ಇದ್ದಾರೆ. ಅವರಿಗೂ ಅವರ ಕೆಲಸಗಳಿವೆ. ನಾನು ನನ್ನ ಸಿನಿಮಾ ಬಗ್ಗೆ ಅವರ ಅಭಿಪ್ರಾಯ ನಿರೀಕ್ಷಿಸುವುದಿಲ್ಲ. ಯಶ್ ಮತ್ತು ನನ್ನ ನಡುವೆ ಯಾವುದೇ ವೈಯಕ್ತಿಕ ಮನಸ್ತಾಪ ಇಲ್ಲ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳು ಸುಳ್ಳು ಎಂದು ಪುಷ್ಪಾ ಸ್ಪಷ್ಟಪಡಿಸಿದ್ದಾರೆ.
ನನ್ನ ಮಗ ತುಂಬಾ ಬ್ಯುಸಿ ಇದ್ದಾನೆ. ಅವನಿಗೆ ಕೊತ್ತಲವಾಡಿ ಸಿನಿಮಾವನ್ನು ಪ್ರಮೋಟ್ ಮಾಡು ಬಾ ಅಂತ ಹೇಳೋಕೆ ಆಗಲ್ಲ. ನಾನು ನನ್ನ ಮಗನಿಗೆ ಎಂದಿಗೂ ಹೋಗು ಹೋಗು ಎಂದು ಕಳಿಸಿದ್ದೇನೆ. ಮನೆಯಲ್ಲಿ ಇರು ಅಂತ ಅವನಿಗೆ ಯಾವತ್ತೂ ಹೇಳಿದವಳಲ್ಲ. ಅವನಿಗೆ ಹೋಗು ಎಂದು ಹೇಳಿದ ನಾನೇ, ಈಗ ಇರು ಇರು ಅನ್ನೋಕೆ ಆಗಲ್ಲ. ಅದು ಎಷ್ಟು ಸರಿ? ನನ್ನ ಮಗನ ಗುರಿ ದೊಡ್ಡದು. ನನ್ನ ಸಿನಿಮಾಗೆ ಪ್ರಮೋಷನ್ ಮಾಡು ಬಾ ಅಂತ ಕರೆದರೆ, 'ಏನಮ್ಮಾ ನೀನು, ನನ್ನ ಗುರಿ ಅಷ್ಟು ಕೋಟಿಗೆ ಇದೆ. ನೀನು ಯಾಕ್ ಇದನ್ನು ಇಟ್ಕೊಂಡು ಕೂತಿದ್ದೀಯಾ' ಅಂತ ಬೈತಾನೆ ಅಲ್ವಾ? ಏನೋ ನಮ್ಮ ಅಮ್ಮ ಮಾಡಿದ್ದಾರೆ, ಅವರು ಮಾಡಿಕೊಂಡು ಹೋಗಲಿ ಬಿಡಿ ಅಂತ ಸುಮ್ಮನೆ ಇದ್ದಾನೆ ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.












Click it and Unblock the Notifications