Pushpa 2 film: ಕರ್ನಾಟಕ ಇವೆಂಟ್ ಕ್ಯಾನ್ಸೆಲ್ ಮಾಡಿದ್ದೇಕೆ 'ಪುಷ್ಪ' ಟೀಂ: ಕನ್ನಡ ಬಾರದ ಅಲ್ಲು ಅರ್ಜುನ್‌ಗೆ ಹೆದರಿಕೆಯೇ!

ಬೆಂಗಳೂರು, ಡಿಸೆಂಬರ್ 04: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಸಿದ್ಧವಾಗಿರುವ ತೆಲುಗಿನ 'ಪುಷ್ಪಾ-2' ಸಿನಿಮಾ ನಾಳೆ ಗುರುವಾರ (ಡಿ.4) ಸುಮಾರು 4000 ಥಿಯೇಟರ್‌ ನಲ್ಲಿ ರಿಲೀಸ್ ಆಗುತ್ತಿದೆ. ದೇಶದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದ್ದ ಪುಷ್ಪಾ ಟೀಂ ಕನ್ನಡಿಗರ ಮೇಲೇಕೆ ಸಿಟ್ಟು, ಕರ್ನಾಟಕವೆಂದರೆ ಕಡಗಣನೆ ಏಕೆ? ಕರ್ನಾಟಕದ ಇವೆಂಟ್ ಕ್ಯಾನ್ಸೆಲ್ ಮಾಡಿ ತಪ್ಪು ಮಾಡಿತೇ ಪುಷ್ಪಾ ಟೀಂ?. ಈ ಹಲವು ವಿಚಾರವಾಗಿ ನಟ ಅಲ್ಲು ಅರ್ಜುನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅನ್ಯ ಭಾಷಿಗರನ್ನು, ಅನ್ಯಾ ಭಾಷೆಯ ಸಿನಿಮಾಗಳ ವಿಚಾರದಲ್ಲಿ ವಿಶಾಲ ಮನಸ್ಸು ಹೊಂದಿರುವ ಕನ್ನಡಿಗರಿಗೆ ಆಗಾಗ ಪೆಟ್ಟು ಬೀಳುತ್ತಲೇ ಇದೆ. ಇದಕ್ಕೆ 'ಪುಷ್ಪಾ-2' ಚಿತ್ರತಂಡದ ನಡೆ ಹೊಸದಾಗಿ ಸೇರ್ಪಡೆಯಾಗಿದೆ. ಕೊನೆ ಗಳಿಗೆಯಲ್ಲಿ ಕರ್ನಾಟಕದಲ್ಲಿ ಸಿನಿಮಾ ಪ್ರಮೋಷನ್ ಇವೆಂಟ್ ರದ್ದು ಮಾಡಿದೆ. ಇದು ಕನ್ನಡಿಗರು, ಇಲ್ಲಿನ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.

Pushpa 2 Team Cancels Karnataka Event Allu Arjun Faces Backlash from Kannada Fans

ಕನ್ನಡ ಮೂಲದ ನಟರು ಪ್ರಮುಖ ಪಾತ್ರ ನಿರ್ವಹಿಸಿರುವ 'ಪುಷ್ಪಾ-2' ತಂಡಕ್ಕೆ ಕರ್ನಾಟಕದಲ್ಲಿ ಇವೆಂಟ್ ಮಾಡುವುದು ಕೊನೆಗಳಿಗೆಯಲ್ಲಿ ಬೇಡವಾಯಿತೇ. ಈಗಾಗಲೇ ಸಿನಿಮಾ ರಿಲೀಸ್‌ಗೂ ಮುನ್ನ ಭರ್ಜರಿ ಕಲೆಕ್ಷನ್ ಮಾಡಿದೆ. ಹೇಗಿದ್ದರೂ ಕನ್ನಡಗರು ಸಿನಿಮಾ ನೋಡುತ್ತಾರೆ ಎಂದಕೊಂಡಂತೆ ಕಾಣುತ್ತಿದೆ.

ಕೇರಳ, ಚೆನ್ನೈ, ಪಾಟ್ನಾ, ಮುಂಬೈ, ತೆಲಂಗಾಣದಲ್ಲಿ ಭರ್ಜರಿ ಇವೆಂಟ್ ನಡೆಸಿ ಪ್ರಚಾರ ಮಾಡಿದ್ದ ಅಲ್ಲು ಅರ್ಜುನ್ ಆಂಡ್ ಟೀಂ ಕನ್ನಡಿಗರನ್ನು ಕಡೆಗಣಿಸಿದೆ. ಸದ್ಯ ಈ ವಿಚಾರ ಸಾಕಷ್ಟು ಟ್ರೋಲ್ ಸಹ ಆಗುತ್ತಿದೆ. ಕರ್ನಾಟಕದಲ್ಲಿ ಪುಷ್ಪಾ ಇವೆಂಟ್ ರದ್ದು ಆಗಿದ್ದನ್ನು ಕರ್ನಾಟಕ ಅಪ್ಡೇಟ್ಸ್ ಪೇಜಿನಲ್ಲಿ ಮಾಹಿತಿ ನೀಡಲಾಗಿದೆ.

Pushpa 2 Team Cancels Karnataka Event Allu Arjun Faces Backlash from Kannada Fans

ಇವೆಂಟ್‌ನಲ್ಲಿ ಕನ್ನಡ ಮಾತನಾಡಬೇಕಿದ್ದ 'ಪುಷ್ಪ'ನಿಗೆ ಭಯವೇ!

'ಪುಷ್ಪಾ-2' ಗಾಗಿ ಆಯಾ ರಾಜ್ಯದಲ್ಲಿನ ಭಾಷೆಯಲ್ಲಿ ಮಾತನಾಡಿದ್ದ ಅಲ್ಲು ಅರ್ಜುನ್ ಅವರು ಪಾಟ್ನಾದಲ್ಲಿ ಹಿಂದಿಯಲ್ಲಿ ಮಾತನಾಡಿದ್ದರು. ಕೊಚ್ಚಿಯಲ್ಲಿ ನಿರೂಪಕರಿಗೆ ಅಲ್ಲು ಅರ್ಜುನ್ ಹೆಸರು ಗೊತ್ತಿರದಿದ್ದರೂ ಸಹಿತ ಅಲ್ಲಿಯೇ ಪ್ರಚಾರ ಮಾಡಿ ಸೈ ಎನ್ನಿಸಿಕೊಂಡರು. ಹೈದರಾಬಾದ್ ಬಳಿಕ ಬೆಂಗಳೂರಿನಲ್ಲಿ ಇವೆಂಟ್ ನಡೆಸಲು ಟೀಮ್ ಪ್ಲಾನ್ ಮಾಡಿಕೊಂಡಿತ್ತು. ಆದರೆ ಇವೆಂಟ್ ಕ್ಯಾನ್ಸೆಲ್ ಆಗಿದೆ. ಅಂದರೆ ಅಲ್ಲು ಅರ್ಜುನ್ ಅವರಿಗೆ ಕನ್ನಡ ಮಾತನಾಡಲು ಬಾರದ್ದರಿಂದ ಕನ್ನಡಿಗರಿಗೆ ಹೆದರಿ ಇವೆಂಟ್ ಕೈ ಬಿಟ್ಟರೇ? ಅಥವಾ ಕನ್ನಡಿಗರೆಂದರೆ ತಾತ್ಸಾರವೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

'ಪುಷ್ಪಾ-2' ಸಿನಿಮಾ ನೋಡುವುದನ್ನು ಬಹಿಷ್ಕರಿಸುವುದಾಗಿ ಕನ್ನಡ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಪುಷ್ಪ 2 ಚಿತ್ರತಂಡ ವಿರುದ್ಧ ಫ್ಯಾನ್ಸ್ ಗರಂ ಆಗಿದ್ದಾರೆ.

ಯಶ್ ಭಾಷಣ ಕಾಪಿ ಮಾಡಿದ ಪುಷ್ಪ

KGF ಖ್ಯಾತಿಯ ಯಶ್ ಅವರು ತಮ್ಮ ಸಿನಿಮಾ ಪ್ರಮೋಷನ್ ವೇಳೆ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದರು. ಅವರಂತೆ ಅಲ್ಲು ಅರ್ಜುನ್ ಅವರು ಕಾಪಿ ಮಾಡಿದ್ದಾರೆ. ಪುಷ್ಪಾ ಪ್ರಚಾರ ವೇಳೆ ಆಯಾ ಭಾಷೆಯಲ್ಲಿಯೇ ಮಾತನಾಡುವುದಾಗಿ ಹೇಳಿದ್ದರು. ಕರುನಾಡಿನಲ್ಲೂ ದೊಡ್ಡ ಫ್ಯಾನ್‌ ಬೇಸ್ ಹೊಂದಿರುವ ಅಲ್ಲು ಅರ್ಜುನ್ ಆಂಡ್ ಟೀಂ ಇವೆಂಟ್ ರದ್ದು ಮಾಡಿ ಉದಾಸೀನ್ ತೋರಿದ್ದೇಕೆ ಎಂಬುದಕ್ಕೆ ಕನ್ನಡಿಗರು ಉತ್ತರ ಹುಡುಕುತ್ತಿದ್ದಾರೆ. ಒಂದಷ್ಟು ಜನರು ಸಿನಿಮಾ ನೋಡದಿರಲು ತೀರ್ಮಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+