Pushpa-2: ಕಾಡುಗಳ್ಳನಿಗೆ ಹೀರೋ ಪಟ್ಟ, ‘ಪುಷ್ಪ-2’ಗೆ ಸರಿಯಾಗಿ ಗುಮ್ಮಿದ ಪ್ರೇಕ್ಷಕ ಪ್ರಭು!
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾ ಮೂಲಕ ಬಾಹುಬಲಿ & ಕೆಜಿಎಫ್ ಸಿನಿಮಾಗಳ ದಾಖಲೆ ಹಿಂದೆ ಹಾಕಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಅದರಲ್ಲೂ 'ಪುಷ್ಪ-2' ಸಿನಿಮಾ ಮೂಲಕ 1,500 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸುವ ಲೆಕ್ಕಾಚಾರ ಹಾಕಲಾಗಿದೆ. ಆದರೆ ಮೊದಲ ದಿನವೇ 'ಪುಷ್ಪ-2' ಸಿನಿಮಾ ನೋಡಿದ ಪ್ರೇಕ್ಷಕರು ರೊಚ್ಚಿಗೆದ್ದು, ಅಟ್ಟರ್ ಫ್ಲಾಪ್ ಸಿನಿಮಾ ಇದು ಅಂತಾ ಬೈಯುತ್ತಿದ್ದಾರೆ. ಮತ್ತೊಂದು ಕಡೆ, ಕಾಡುಗಳ್ಳನಿಗೆ ಹೀರೋ ಪಟ್ಟ, 'ಪುಷ್ಪ-2'ಗೆ ಸರಿಯಾಗಿ ಗುಮ್ಮಿದ ಪ್ರೇಕ್ಷಕ ಪ್ರಭು ಅಂತಾ...
ಹೌದು, 'ಪುಷ್ಪ-2' ಸಿನಿಮಾ ಕಥೆ ಇದೀಗ ಕರ್ನಾಟಕದಲ್ಲಿ ಮಾತ್ರ ಅಲ್ಲ ನೆರೆಯ ಆಂಧ್ರ & ತೆಲಂಗಾಣ ರಾಜ್ಯಗಳಲ್ಲಿ ಕೂಡ ಈ ಸಿನಿಮಾ ಕಥೆ ಬಗ್ಗೆ ವಿವಾದ ಎದ್ದಿದೆ. ಒಬ್ಬ ರಕ್ತ ಚಂದನ ಅಂದ್ರೆ ಕೆಂಪು ಗಂಧದ ಕಳ್ಳ ಸಾಗಣೆ ಮಾಡುವ ವ್ಯಕ್ತಿಯ ಕೆಲಸವನ್ನು ಸಾಧನೆ ರೀತಿ ಬಿಂಬಿಸಿ ತೋರಿಸುತ್ತಿರುವ ಆರೋಪ ಕೇಳಿ ಬಂದಿದೆ. ಹಾಗೇ ಮತ್ತೊಂದು ಕಡೆ 'ಪುಷ್ಪ-2'ಗೆ ಸರಿಯಾಗಿ ಗುಮ್ಮಿದ ಪ್ರೇಕ್ಷಕ ಪ್ರಭು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನ ಮಾತನಾಡುತ್ತಿದ್ದಾರೆ.

100 ಕೋಟಿ ರೂಪಾಯಿ ಕಲೆಕ್ಷನ್?
ಕರ್ನಾಟಕ & ರಾಜಧಾನಿ ಬೆಂಗಳೂರಲ್ಲಿ ಮಾತ್ರವಲ್ಲ ಖುದ್ದು ಆಂಧ್ರ & ತೆಲಂಗಾಣ ರಾಜ್ಯದಲ್ಲಿ ಕೂಡ 'ಪುಷ್ಪ-2' ಸಿನಿಮಾ ನೋಡಿ ಅಭಿಮಾನಿಗಳು ರೊಚ್ಚಿಗೆದ್ದು ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗೇ ಇನ್ನೂ ಕೆಲವರು ಈ ಸಿನ್ಮಾ ನೋಡುವ ಬದಲು ಮನೆಗೆ ಹೋಗಿ ನಿದ್ದೆ ಮಾಡಬಹುದಿತ್ತು ಹಾಗೆ... ಹೀಗೆ... ಅಂತೆಲ್ಲ ಮಾತನಾಡುತ್ತಿದ್ದಾರೆ.
ಈ ಸಮಯದಲ್ಲೇ, 'ಪುಷ್ಪ-2' ಸಿನಿಮಾ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಮೊದಲ ದಿನ ಕಲೆಕ್ಷನ್ ಮಾಡಿದೆಯಾ? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಇದರ ಜೊತೆಗೆ ಕಾಡುಗಳ್ಳನಿಗೆ ಹೀರೋ ಪಟ್ಟ ಕೊಟ್ಟಿದ್ದಕ್ಕೆ ಇದೀಗ 'ಪುಷ್ಪ-2'ಗೆ ಸರಿಯಾಗಿ ಗುಮ್ಮಿದ ಪ್ರೇಕ್ಷಕ ಪ್ರಭು ಅಂತಾ ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ.
ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್!
'ಪುಷ್ಪ-2' ಸಿನಿಮಾ ಮಕಾಡೆ ಮಲಗಿದೆ & ನೋಡೋದಕ್ಕೆ ಧಾರಾವಾಹಿ ಅಂದ್ರೆ ಸೀರಿಯಲ್ ಥರನೇ ಇದೆ ಅಂತಾ ಪ್ರೇಕ್ಷಕರು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗೆ 'ಪುಷ್ಪ-2' ಸಿನಿಮಾ ಬಗ್ಗೆ ಸರಿ ಇಲ್ಲ ಅನ್ನೋ ವಿಮರ್ಶೆ ವಿಡಿಯೋಗಳ ನಡುವೆ, ಈ ಸಿನಿಮಾ ನೋಡಿದ ಫ್ಯಾನ್ಸ್ ಹೇಳಿಕೆಗಳನ್ನ ಎಡಿಟ್ ಮಾಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?
'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.












Click it and Unblock the Notifications