Puneeth Rajkumar: ಅಪ್ಪು ನೀವು ಎಲ್ಲಿ ಹೋಗಿದ್ದೀರಿ? ವಾಪಸ್ ಬನ್ನಿ ಪ್ಲೀಸ್...
ಕನ್ನಡಿಗರಿಗೆ ಇಂದಿನ ದಿನ ಇತಿಹಾಸದಲ್ಲೇ ಕರಾಳ ದಿನ ಎನ್ನಬಹುದು. ಯಾಕಂದ್ರೆ ಕನ್ನಡಿಗರ ಪಾಲಿನ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮೃತಪಟ್ಟು ಇಂದಿಗೆ, 3 ವರ್ಷ ಕಳೆದು ಹೋಗಿದೆ. ಹೀಗೆ 3 ವರ್ಷಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಇಡೀ ಭಾರತವೇ ಬೆಚ್ಚಿ ಬಿದ್ದಿತ್ತು. ಅಭಿಮಾನಿಗಳು ಪುಟ್ಟ ಮಕ್ಕಳಂತೆ ಬಿಕ್ಕಿ, ಬಿಕ್ಕಿ ರಸ್ತೆಗಳಲ್ಲಿ ಅತ್ತು ಬಿಟ್ಟರು. ಹೀಗಿದ್ದಾಗ ಅಪ್ಪು ಅಭಿಮಾನಿಗಳು, ಅಪ್ಪು ನೀವು ಎಲ್ಲಿ ಹೋಗಿದ್ದೀರಿ? ವಾಪಸ್ ಬನ್ನಿ ಪ್ಲೀಸ್...
ಪುನೀತ್ ರಾಜ್‌ಕುಮಾರ್ ಬಾಲ ನಟನೆಯಲ್ಲೇ ತಮ್ಮ ಶಕ್ತಿ ತೋರಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಪಡೆದು ಜಾಗತಿಕ ಮಟ್ಟದಲ್ಲಿ ಮಿಂಚಿದ ನಟ. ಆದ್ರೆ 3 ವರ್ಷಗಳ ಹಿಂದೆ ಭೀಕರ ಘಟನೆ ನಡೆದು ಹೋಗಿತ್ತು. ಅದು ಅಕ್ಟೋಬರ್ 29, 2021... ಆ ದಿನ ಕನ್ನಡಿಗರ ಎದೆಯಲ್ಲಿ ಸದಾ ನೋವಿನ ದಿನವಾಗಿಯೇ ಉಳಿಯಲಿದೆ. ಯಾಕಂದ್ರೆ ಆ ದಿನ ಕನ್ನಡಿಗರ ಪಾಲಿನ ಪ್ರೀತಿಯ ನಟ ಪುನೀತ್ ರಾಜ್‌ಕುಮಾರ್ ಕೊನೆಯುಸಿರು ಎಳೆದಿದ್ದರು. ಹೀಗೆ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಪವರ್ ಸ್ಟಾರ್ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಎದೆ ಬಿರಿಯುವಂತೆ ಮಾಡಿತ್ತು. ಮತ್ತೆ ಅದೇ ದಿನ ಇಂದು ಬಂದೇ ಬಿಟ್ಟಿದೆ.

ಪುನೀತ್ ರಾಜ್‌ಕುಮಾರ್ ಎಲ್ಲಿಯೂ ಹೋಗಿಲ್ಲ...
ಇಂದಿಗೆ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ ಸರಿಯಾಗಿ 3 ವರ್ಷ ತುಂಬಿದೆ. ಇದೇ ಹಿನ್ನೆಲೆ ಇದೀಗ ಅಪ್ಪು ಅಭಿಮಾನಿಗಳು ತೀವ್ರ ನೋವಿನಲ್ಲೇ ತಮ್ಮ ನೆಚ್ಚಿನ ನಟನ ಬಗ್ಗೆ ಎಲ್ಲೆಲ್ಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರು ಎಲ್ಲಿಯೂ ಹೋಗಿಲ್ಲ & ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಅವರು ವಾಪಸ್ ಬರ್ತಾರೆ, ಪುನೀತ್ ರಾಜ್‌ಕುಮಾರ್ ಸರ್ ಬೇಗ ಬನ್ನಿ.. ಅಂತಾ ಪೋಸ್ಟ್ ಹಾಕ್ತಾ ಇದ್ದಾರೆ.












Click it and Unblock the Notifications