Puneeth Rajkumar: ನಾವು ಆ ದುಃಖದಿಂದ ಪೂರ್ತಿ ಹೊರಗೆ ಬಂದಿಲ್ಲ, ಈಗ ಅದೆಲ್ಲ ಬೇಡ ಎಂದ ಶಿವರಾಜ್ ಕುಮಾರ್!
Puneeth Rajkumar: ಪವರ್‌ಸ್ಟಾರ್ ಪುನೀತ್‌ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ನಾಲ್ಕು ವರ್ಷಗಳಾಗಿವೆ. ಇಂದಿಗೂ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಯಾವುದೇ ವಿಷಯ ಬಂದರೂ ಜನ ಭಾವನಾತ್ಮಕವಾಗಿ ರಿಯಾಕ್ಟ್ ಮಾಡುತ್ತಾರೆ. ಇನ್ನು ದೊಡ್ಮನೆ ಅವರು ಸಹ ಪುನೀತ್ ಅವರ ಅಗಲಿಕೆಯ ನೋವಿನಿಂದ ಹೊರಗೆ ಬಂದಿಲ್ಲ. ಇದೀಗ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ಹ್ಯಾಟ್ರಿಕ್ ಹೀರೋ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸಹೋದರ ಶಿವರಾಜ್ ಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಅವರು ಹೇಳಿರುವುದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿ ಸಣ್ಣ ನಿರಾಸೆಯನ್ನೂ ಸಹ ಮೂಡಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ವಿಚಾರದಲ್ಲಿ ನಾನು ಹಾಗೂ ನಮ್ಮ ಕುಟುಂಬದವರೂ ಇನ್ನೂ ಆ ದುಃಖದಿಂದ ಹೊರಗೆ ಬಂದಿಲ್ಲ. ಹೀಗಾಗಿ ಆ ಒಂದು ಪ್ರಾಜೆಕ್ಟ್‌ನ ಬಗ್ಗೆ ಮಾತ್ರ ಈಗ ಮಾತನಾಡಬೇಡಿ ಅಂತ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರಿಗೆ ಕೋಟ್ಯಾಂತರ ಜನ ಅಭಿಮಾನಿಗಳು ಇದ್ದಾರೆ. ಈಗಲೂ ಪುನೀತ್ ರಾಜ್‌ಕುಮಾರ್ ಅವರ ಯಾವುದಾದರೂ ಹಳೆಯ ಮೂವಿಗಳು ರೀರಿಲೀಸ್ ಮಾಡಿದರೆ ಹೌಸ್‌ಫುಲ್ ಆಗುತ್ತವೆ. ಈ ರೀತಿ ಇರುವಾಗಲೇ ನಟ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಗಂಭೀರವಾದ ಚರ್ಚೆ ನಡೆದಿದ್ದು.. ಶಿವರಾಜ್‌ಕುಮಾರ್ ಅವರು ಪ್ಲೀಸ್ ಅದೆಲ್ಲಾ ಈಗ ಬೇಡ ಅಂತ ರಿಕ್ವೆಸ್ಟ್ ಮಾಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಜೀವನವನ್ನು ಆಧರಿಸಿದ ಮೂವಿ / ಬಯೋಪಿಕ್ ಮಾಡುವ ಬಗ್ಗೆ ಶಿವರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಪುನೀತ್ ಅವರು ಎಲ್ಲರಿಗೂ ಮಾದರಿಯಾಗಿದ್ದವರು. ಅವರ ಸಿನಿಮಾಗಳನ್ನು ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾಗಿತ್ತು. ಫ್ಯಾಮಿಲಿ ಕುಳಿತು ನೋಡುವ ಮೂವಿಗಳನ್ನು ಅವರು ಮಾಡುತ್ತಿದ್ದರು. ಇಂದಿಗೂ ಅಭಿಮಾನಿಗಳು ಅವರ ಮೂವಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಪುನೀತ್ ಅವರ ಬಯೋಪಿಕ್ ರಿಲೀಸ್ ಮಾಡಿದರೆ, ಈ ನೆಪದಲ್ಲಿ ಅವರನ್ನು ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು ಎನ್ನುವ ಆಸೆ ಅಭಿಮಾನಿಗಳದ್ದು. ಆದರೆ, ಅದಕ್ಕೆ ಈಗ ಒಳ್ಳೆಯ ಸಮಯವಲ್ಲ ಅಂತ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಅಲ್ಲದೇ ಯಾವ ಕಾರಣಕ್ಕೆ ಈಗ ಬೇಡ ಅಂತಲೂ ಅವರು ವಿವರಿಸಿದ್ದಾರೆ.
ಈಗ ಇರುವ ಪರಿಸ್ಥಿತಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬಯೋಪಿಕ್ ಮಾಡುವ ಯಾವುದೇ ಯೋಚನೆ ತಮ್ಮ ಕುಟುಂಬಕ್ಕೆ ಇಲ್ಲ. ಪುನೀತ್ ನಮ್ಮನ್ನು ಅಗಲಿ ಇನ್ನೂ ಹೆಚ್ಚೇನು ಸಮಯವಾಗಿಲ್ಲ. ಆ ಆಘಾತ ಮತ್ತು ನೋವು ಇನ್ನೂ ನಮ್ಮ ಕುಟುಂಬದಲ್ಲಿ ಹಸಿಯಾಗಿಯೇ ಉಳಿದಿದೆ ಅಂತ ಅವರು ಹೇಳಿದ್ದಾರೆ.
ನಾವಿನ್ನೂ ಆ ದುಃಖದಿಂದ ಸಂಪೂರ್ಣವಾಗಿ ಹೊರ ಬರುವುದಕ್ಕೆ ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಭಾವನಾತ್ಮಕವಾಗಿಯೂ ಕಷ್ಟ ಅಂತ ಅವರು ಹೇಳಿದ್ದಾರೆ. ಪುನೀತ್ ಒಬ್ಬ ನಟನಾಗಷ್ಟೇ ಇರಲಿಲ್ಲ. ಗಾಯಕ, ನಿರ್ಮಾಪಕ ಹಾಗೂ ಟಿವಿ ನಿರೂಪಕರಾಗಿದ್ದರು. ಸಮಾಜ ಸೇವಕರೂ ಹೌದು. ಅವರ ಬಹುಮುಖ ಪ್ರತಿಭೆ ಹಾಗೂ ಅವರ ಜೀವನದ ಎಲ್ಲಾ ಅಂಶಗಳನ್ನು ಕೆಲವೇ ಗಂಟೆಯ ಸಿನಿಮಾದಲ್ಲಿ ಸಂಪೂರ್ಣವಾಗಿ ಹಿಡಿದಿಡುವುದು ಕಷ್ಟದ ಕೆಲಸ ಅಂತ ಹೇಳಿದ್ದಾರೆ. ಅಲ್ಲದೇ ನ್ಯಾಯ ಒದಗಿಸುವುದಕ್ಕೆ ಆಗಲ್ಲ ಅಂತಲೂ ಹೇಳಿದ್ದಾರೆ.
ಶಿವಣ್ಣ ಈಗ ಬೇಡ ಅಂತ ಹೇಳಿದ್ದಾರೆ. ಆದರೆ ಮುಂದೆ ಬೇಡ ಅಂತ ಹೇಳಿಲ್ಲ. ಪುನೀತ್ ಬಯೋಪಿಕ್ ಮಾಡುವುದಾದರೆ ಅತ್ಯಂತ ಗೌರವದಿಂದ ಹಾಗೂ ಹೆಚ್ಚು ಜವಾಬ್ದಾರಿ ಸೂಕ್ಷ್ಮತೆಯಿಂದ ಮಾಡಬೇಕಿದೆ ಎಂದಿದ್ದಾರೆ.
-
ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: 473 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ












Click it and Unblock the Notifications