ಕರಾವಳಿ ಹುಡುಗ ಪೃಥ್ವಿ ಅಂಬಾರ್ ಮುಂದಿನ ಸಿನಿಮಾದ ಲುಕ್ ನೋಡಿ!
ಪೃಥ್ವಿ ಅಂಬಾರ್ ಕನ್ನಡ ಸಿನಿಮಾ ರಂಗದಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿ, ಸ್ಯಾಂಡಲ್‌ವುಡ್ ಮಂದಿಯ ಗಮನ ಸೆಳೆಯುತ್ತಿದ್ದಾರೆ. ಹೀಗೆ ಪೃಥ್ವಿ ಅಂಬಾರ್ ಅವರ ಹವಾ ಬಲು ಜೋರಾಗಿದೆ. ಹೀಗಿದ್ದಾಗಲೇ ಪೃಥ್ವಿ ಅವರ, ಹೊಸ ಸಿನಿಮಾದ ಹೊಸ ಫೋಟೋ ಹಲ್‌ಚಲ್ ಎಬ್ಬಿಸಿದೆ. ಹಾಗಾದರೆ ಏನಿದು ಹೊಸ ಸುದ್ದಿ.? ಬನ್ನಿ ತಿಳಿಯೋಣ.
ಅಂದಹಾಗೆ ಸ್ಯಾಂಡವುಲ್ ಸಿನಿಮಾ ಪ್ರಿಯರಿಗೆ 'ದಿಯಾ' ಸಿನಿಮಾ ಚಿರಪರಿಚಿತ. ಅದ್ರಲ್ಲೂ ಈ ಸಿನಿಮಾ ಅಂದಿಗೆ ಕ್ರಿಯೇಟ್ ಮಾಡಿದ್ದ ಹವಾ ಇಂದಿಗೂ ಕಮ್ಮಿ ಆಗಿಲ್ಲ. ದಿಯಾ ಚಿತ್ರದ ನಾಯಕ ಪೃಥ್ವಿ ಅಂಬಾರ್ ಅದ್ಭುತವಾಗಿ ಅಭಿನಯಿಸಿದ್ರು. ಇದೀಗ ಅಂತಹದ್ದೇ ಪ್ರೇಮ ಕಥೆನ ಹೊತ್ತು ಬಂದಿರುವ ಪೃಥ್ವಿ, ಕಮಾಲ್ ಮಾಡುವ ಮುನ್ಸೂಚನೆಯ ನೀಡಿದ್ದಾರೆ. 'ಜೂನಿ' ಕ್ಯಾರೆಕ್ಟರ್ ಟೀಸರ್ ಅನಾವರಣ ಆಗಿದೆ. ಜೂನಿ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೇಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದು ಸಖತ್ ಇಂಪ್ರೆಸಿವ್ ಆಗಿದೆ, ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್.

'ಜೂನಿ' ಹಿಂದೆ 'ದಿಯಾ' ಹೀರೋ!
'ದಿಯಾ' ಸಿನ್ಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ವಿ ಸಾಲು ಸಾಲು ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ, ತಮಿಳು ಸಿನಿಮಾ ಇಂಡಸ್ಟ್ರಿಗೂ ಪಾದರ್ಪಣೆ ಮಾಡಿರುವ ಪೃಥ್ವಿ ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಿದ್ದಾಗ 'ಜೂನಿ' ಗಮನ ಸೆಳೆಯುತ್ತಿದೆ. ಜನ್ನಿ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ 'ಜೂನಿ' ಸಿನಿಮಾ ಮೂಲಕ ನಿರ್ದೇಶಕರಾಗಿ ಹೆಜ್ಜೆ ಇಡೋಕೆ ಸಿದ್ಧವಾಗಿದ್ದಾರೆ.
ನಿರ್ದೇಶಕನ ಕೋರ್ಸ್ ಮುಗಿಸಿದ್ದ ವೈಭವ್ ಮಹಾದೇವ್, ಈಗ ಜೂನಿ ಚಿತ್ರಕ್ಕೆ ಕಥೆ & ಚಿತ್ರಕಥೆ ಬರೆದಿದ್ದಾರಂತೆ. ಅವರೇ ಆ್ಯಕ್ಷನ್ ಕಟ್ ಕೂಡ ಹೇಳಿದ್ದು, ಹೀಗಾಗಿ ಸಿನಿಮಾ ಸದ್ದು ಮಾಡ್ತಿದೆ. ವಿಭಿನ್ನ ಟೈಟಲ್‌ನ ಜೂನಿ ಸಿನಿಮಾದಲ್ಲಿ ರಿಷಿಕಾ ನಾಯಕ್ ನಟಿಸಿದ್ದಾರೆ. ಇವರ ಜೊತೆ ಭಾರಿ ದೊಡ್ಡ ತಾರಾಗಣವನ್ನೇ ಪರಿಚಯ ಮಾಡಲು ಸಿನಿಮಾ ಟೀಂ ಈಗ ಸಿದ್ಧತೆ ನಡೆಸುತ್ತಿದೆ.
ಸಿನಿಮಾ ಕಥೆ ಹೇಗಿರಲಿದೆ ಗೊತ್ತೆ?
ಹೆಸರಲ್ಲೇ ಡಿಫರೆಂಟ್ ಆಗಿ ಹೈಪ್ ಕ್ರಿಯೇಟ್ ಮಾಡಿರುವ ಜೂನಿ ಚಿತ್ರ, ರೋಮ್ಯಾಂಟಿಕ್ ಕಥಾ ಹಂದರ ಇರುವ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆ ಎಳೆ ಇಟ್ಕೊಂಡು ಚಿತ್ರಕಥೆ ಹೆಣೆಯಲಾಗಿದೆ ಅಂತೆ.

ಇನ್ನು ತ್ರಿಶೂಲ ಕ್ರಿಯೇಷನ್ ಅಡಿ ಮೋಹನ್ ಕುಮಾರ್ ಸಿನಿಮಾಗೆ ಹಣ ಹಾಕಿದ್ದು, ಶ್ರೇಯಸ್ ಸಹ ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದಾರೆ. ಒಟ್ನಲ್ಲಿ ಕನ್ನಡ ಸಿನಿ ಪ್ರಿಯರಿಗೆ ಮತ್ತೊಂದು ಸರ್ಪ್ರೈಸ್ ಸಿಗೋದು ಈ ಮೂಲಕ ಈಗ ಬಹುತೇಕ ಪಕ್ಕಾ ಆಗಿದ್ದು. ಹೀಗಾಗಿ ಈ ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್‌ಗೆ ಇನ್ನಷ್ಟು ದಿನಗಳ ಕಾಲ ಕಾಯಬೇಕಿದೆ.












Click it and Unblock the Notifications