ಅಲ್ಲಿಗೆ ಹೋಗಿದ್ದಾಗ ನನಗೆ ದೆವ್ವದ ಅನುಭವ ಆಯ್ತು: ಪ್ರಿಯಾಂಕಾ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿದ್ದ ಶ್ ಸಿನಿಮಾ ಕನ್ನಡದ ಹಾರರ್ ಸಿನಿಮಾಗಳಲ್ಲಿ ಒಂದು ವಿಶೇಷ ಸ್ಥಾನ ಪಡೆದಿದೆ. ಅಷ್ಟರಮಟ್ಟಿಗೆ ಆ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿತ್ತು. ಇನ್ನು ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ಕೂಡ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ದೆವ್ವ, ಭೂತ ಅನುಭವ ಆಗಿತ್ತಾ ಎಂಬ ಪ್ರಶ್ನೆಗೆ ಪ್ರಿಯಾಂಕಾ ಉಪೇಂದ್ರ ಬೆಚ್ಚಿಬೀಳಿಸುವ ಉತ್ತರ ನೀಡಿದ್ದಾರೆ. ತಮಗೆ ಆಗಿದ ಭಯಾನಕ ಅನುಭವದ ಬಗ್ಗೆ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್‌ಗೆ ಪ್ರಿಯಾಂಕಾ ಉಪೇಂದ್ರ ಅತಿಥಿಯಾಗಿ ಬಂದಿದ್ದರು. ಈ ವೇಳೆ ಪ್ರಿಯಾಂಕಾ ಅವರಿಗೆ ನೀವು ನಿಜವಾದ ದೆವ್ವ ನೋಡಿದ್ದೀರಾ? ಎಂದು ಪ್ರಶ್ನೆ ಕೇಳಲಾಯಿತು. ನಿಮಗೂ ಈ ದೆವ್ವದ ಸಿನಿಮಾಗೂ ಏನು ಸಂಬಂಧ? ಎಷ್ಟು ದೆವ್ವದ ಸಿನಿಮಾ ಮಾಡಿದ್ದೀರಾ? ನಿಜ ಜೀವನದಲ್ಲಿ ನೀವು ದೆವ್ವ ನೋಡಿದ್ದೀರಾ? ಎಂದು ಸೃಜನ್ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಪ್ರಿಯಾಂಕಾ, ನಾನು ದೆವ್ವವನ್ನು ನಿಜವಾಗಿ ನೋಡಲಿಲ್ಲ. ಆದರೆ ದೆವ್ವದ ಅನುಭವ ನನಗೆ ಆಗಿದೆ. ಊಟಿಯಲ್ಲಿ ಒಮ್ಮೆ ಒಂದು ನೆರಳಿನ ಆಕಾರ ಕಾಣಿಸಿಕೊಂಡಿತ್ತು ಎಂದು ತಮ್ಮ ಭಯಾನಕ ಅನುಭವವನ್ನು ಹೇಳಿಕೊಂಡರು.
ಬಳಿಕ ಇದ್ದಕ್ಕಿದ್ದಂತೆ ಅದಾದ ನಂತರ ನಾನು ನಿಮ್ಮ ಮನೇಲಿ ನೋಡಿದೆ ಎಂದು ಪ್ರಿಯಾಂಕಾ ಜೋಕ್ ಮಾಡಿದ್ದರು. ಇದಕ್ಕೆ ಶಾಕ್ ಆದ ಸೃಜನ್ ಲೋಕೇಶ್ ಎಲ್ಲಿ? ಎಂದು ಕೇಳಿದರು. ನೀವು ಸಡನ್ನಾಗಿ ಮೇಕಪ್ ಇಲ್ಲದೆ ಬರ್ತೀರಲ್ಲ? ಎಂದು ಸೃಜನ್ ಕಾಲೆಳೆದರು. ಇದಕ್ಕೆ ಸೃಜನ್ ಯೋಗರಾಜ್ ಭಟ್ ಅವರ ಕಡೆಗೆ ನೋಡಿದರು. ನನ್ನ ಯಾಕೆ ನೋಡ್ತೀಯ, ಮೇಡಂ ಅವರನ್ನ ಕೇಳು ಎಂದು ಭಟ್ಟರು ಹೇಳಿದ್ರು. ನೀವು ಎಷ್ಟೋ ಸಲ ನನ್ನ ಮೇಕಪ್ ಇಲ್ಲದೆ ನೋಡಿದ್ದೀರಲ್ಲ ಅದಕ್ಕೆ ನೋಡಿದೆ ಎಂದು ಸೃಜನ್ ಮತ್ತೊಂದು ಜೋಕ್ ಮಾಡಿದ್ರು.
ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಅವರು ಮಮ್ಮಿ ಹಾರರ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಅವರ ಮತ್ತೊಂದು ಹಾರರ್ ಸಿನಿಮಾ ತೆರೆಗೆ ಬರಲಿದೆ. ಮಮ್ಮಿ ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಅವರೇ ಈ ಹೊಸ ಹಾರರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದರಲ್ಲೂ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಅವರು ನಿರ್ಮಾಣ ಮಾಡಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪ್ರಿಯಾಂಕಾ ಅವರ ಮುಖ ರಕ್ತಸಿಕ್ತವಾಗಿ ಭಯಾನಕವಾಗಿರುವುದು ಕಂಡುಬಂದಿದೆ. ಈ ಸಿನಿಮಾ ಕೂಡ ಭಯಾನಕವಾಗಿ ಶೂಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ನನ್ನ ಮೊದಲ ಹಾರರ್ ಸಿನಿಮಾಗಿಂತಲೂ ಹೆಚ್ಚು ಭಯಾನಕವಾಗಿದೆ. ಈ ಸಿನಿಮಾವನ್ನು ಸಂಪೂರ್ಣ ಸಿಸಿಟಿವಿ ಕಾನ್ಸೆಪ್ಟ್‌ನಲ್ಲಿ ಶೂಟಿಂಗ್ ಮಾಡಲಾಗಿದೆ. ಆರಂಭದಲ್ಲಿ ಈ ಸಿನಿಮಾ ಹೇಗೆ ಬರುತ್ತೋ ಎಂದು ಸಿದ್ಧವಾಗುತ್ತದೆ ಎಂಬ ಚಿಂತೆ ಇತ್ತು. ಆದರೆ ಅಂತಿಮವಾಗಿ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ಪ್ರಿಯಾಂಕಾ ಹೇಳಿದ್ದರು.












Click it and Unblock the Notifications