"ಅದು ಬೀಚ್, ಬೆಡ್‌ರೂಂ ಅಲ್ಲ" ಪ್ರಿಯಾಂಕಾ ಚೋಪ್ರಾ ವಿಡಿಯೋ ಫುಲ್ ಟ್ರೋಲ್
ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಟ್ರೋಲ್‌ಗೆ ಒಳಗಾಗಿದ್ದಾರೆ. ಈ ಬೆಡಗಿಯ ಹಾಟ್ ಅವತಾರ ಕಂಡು ಪಡ್ಡೆಹುಡುಗರು ನಿದ್ದೆಗೆಟ್ಟಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ (Nick Jonas) ಅವರು ಬೀಚ್‌ನಲ್ಲಿ ಲಿಪ್-ಲಾಕ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಕ್ ಜೋನಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಕ್ಲಿಪ್‌ನಲ್ಲಿ, ಅವರು ಸಮುದ್ರ ತೀರದಲ್ಲಿ ಪತ್ನಿ ಪ್ರಿಯಾಂಕಾಗೆ ಚುಂಬಿಸಿದ್ದಾರೆ. ಪ್ರಿಯಾಂಕಾ ಅವರು ನಿಕ್ ಮೇಲೆ ಎರಗಿ ಹಗ್ ಮಾಡಿಕೊಂಡಿರುವುದನ್ನು ನೋಡಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರೆ, ಇದೆಲ್ಲ ಜಾಸ್ತಿ ಆಯ್ತು ಅಂತಿದ್ದಾರೆ ಟ್ರೋಲಿಗರು.
ಬಾಲಿವುಡ್‌ನಲ್ಲಿ ಯಶಸ್ಸು ಸಾಧಿಸಿದ ನಂತರ, ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನತ್ತ ಹೆಜ್ಜೆ ಹಾಕಿದರು. 'ಕ್ವಾಂಟಿಕೊ' ನಂತಹ ಸರಣಿಗಳ ಮೂಲಕ ಅವರು ಹಾಲಿವುಡ್‌ನಲ್ಲಿ ಮಿಂಚಿದರು. ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿಯೂ ಅವಕಾಶಗಳನ್ನು ಪಡೆದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅದೇ ಸಮಯದಲ್ಲಿ, ಅವರು ತನಗಿಂತ ಕಿರಿಯ ಹಾಲಿವುಡ್ ಸ್ಟಾರ್ ಗಾಯಕ ನಿಕ್ ಜೋನಾಸ್‌ರನ್ನು ಪ್ರೀತಿಸಿ ಮದುವೆಯಾದರು. ಅವರ ದಂಪತಿಗೆ ಮಾರಿಯಾ ಚೋಪ್ರಾ ಜೋನಾಸ್ ಎಂಬ ಮಗಳಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟೀವ್ ಆಗಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ವೈಯಕ್ತಿಕ ವಿವರಗಳ ಜೊತೆಗೆ ಸಿನಿಮಾ ಸುದ್ದಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರ ಕುಟುಂಬದ ಕೆಲವು ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಅವರು ತಮ್ಮ ಪತಿಯೊಂದಿಗೆ ಬೀಚ್‌ಗೆ ಹೋಗಿದ್ದರು. ಆಗ ಅವರ ಮೇಲೆ ಹತ್ತಿ ಲಿಪ್‌ಲಾಕ್ ನೀಡುವ ಮೂಲಕ ನೆಟ್ಟಿಗರ ಕಣ್ಣಿಗೆ ಸಿಲುಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಒಟ್ಟಿಗೆ ಲಿಪ್‌ಲಾಕ್ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿವೆ.
ಈ ವಿಡಿಯೋದಲ್ಲಿ ಪ್ರಾರಂಭದಲ್ಲಿ ನಿಕ್ "Without her" ಎಂಬ ಸಾಲಿನೊಂದಿಗೆ ಒಂಟಿಯಾಗಿ ಇದ್ದಾರೆ ಎಂದು ಹೇಳಿದ್ದಾರೆ. ನಂತರ ಪ್ರಿಯಾಂಕಾ ಓಡಿ ಬಂದು ಅವರ ಮೇಲೆ ಎಗರಿ ಕೂತಿದ್ದಾರೆ. ಇಬ್ಬರೂ ಪ್ರೀತಿಯಿಂದ ಲಿಪ್‌ಲಾಕ್ ಮಾಡಿದ್ದಾರೆ. ಬಳಿಕ ಅದನ್ನು "With her" ಎಂದು ಹೇಳಿದ್ದಾರೆ. ಈ ವಿಡಿಯೋ ಬ್ಯಾಕ್‌ಗ್ರೌಂಡ್‌ನಲ್ಲಿ "I Can't Lose" ಎಂಬ ಜೋನಸ್ ಬ್ರದರ್ಸ್ ಗೀತೆ ಕೂಡ ಇದೆ. ಪ್ರಿಯಾಂಕಾ ಮತ್ತು ನಿಕ್ ನಡುವೆ 2018 ರಲ್ಲಿ ಪ್ರೇಮಗಾಥೆ ಆರಂಭವಾಗಿ ಅದೇ ವರ್ಷ ವಿವಾಹವಾಗಿದ್ದರು.
ಇದೆಲ್ಲ ಮನೆಯಲ್ಲೇ ಮಾಡಬಹುದಿತ್ತು!
ಇದಕ್ಕೆ ನೆಟಿಜನ್‌ಗಳು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಅವರು ಮುದ್ದಾದ ಜೋಡಿ ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಅವರನ್ನು ಅತಿ ಆಯ್ತು ಎನ್ನುತ್ತಿದ್ದಾರೆ. ಕೆಲವರು ಪ್ರಿಯಾಂಕಾ ಅವರ ಕಿಸ್ಸಿಂಗ್ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ, ಈ ಪ್ರಣಯವನ್ನು ಮನೆಯಲ್ಲಿಯೇ ಮಾಡಬಹುದು ಎಂದು ಹೇಳುತ್ತಿದ್ದಾರೆ. ಪ್ರಸ್ತುತ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಅವರನ್ನು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.












Click it and Unblock the Notifications