Kantara Chapter 1: ₹68,920 ಕೊಟ್ಟು ಕಾಂತಾರ ಚಾಪ್ಟರ್-1 ಟಿಕೆಟ್‌ ಖರೀದಿಸಿದ ಪ್ರತಾಪ್‌ ಸಿಂಹ

ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌-1 ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲೆಡೆ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಗುರುವಾರ ಮೊದಲ ದಿನವೇ ಎಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಂಡುಬಂದಿದ್ದು, ಇಂದು ಕೂಡ ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಜನ ಕಾಂತಾರ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಕೂಡ ಕಾಂತಾರ ಚಾಪ್ಟರ್‌-1 ಸಿನಿಮಾ ವೀಕ್ಷಿಸಲು ಟಿಕೆಟ್‌ ಬುಕ್‌ ಮಾಡಿದ್ದಾರೆ. ಬರೋಬ್ಬರಿ ₹68,920 ಕೊಟ್ಟು ಟಿಕೆಟ್‌ ಬುಕ್‌ ಮಾಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೌದು ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಪ್ರೀಕ್ವೆಲ್‌ ಕೂಡ ಥಿಯೇಟರ್‌ಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿ ಸೂಪರ್‌ ಎಂದಿದ್ದಾರೆ. ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಈ ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ 68,920 ರೂಪಾಯಿ ಕೊಟ್ಟು ಟಿಕೆಟ್‌ ಖರೀದಿಸಿದ್ದಾರೆ.

Pratap Simha Spends 68 920 Rupees For Kantara Chapter 1 Ticket Viral News

ಪ್ರತಾಪ್‌ ಸಿಂಹ ಅವರು ಕೇವಲ ತಾವು ಮಾತ್ರವಲ್ಲದೆ, ತಮ್ಮ ಕಾರ್ಯಕರ್ತರಿಗೂ ಸೇರಿ ಅವರು ಟಿಕೆಟ್‌ ಬುಕ್‌ ಮಾಡಿದ್ದಾರೆ. ನಾಳೆ 4 ಗಂಟೆಗೆ ಕಾರ್ಯಕರ್ತರೆಲ್ಲ ಒಡಗೂಡಿ ಕಾಂತಾರ ಸಿನಿಮಾ ನೋಡೋಣ, ಡಿಆರ್‌ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಎಂದು ಪ್ರತಾಪ್‌ ಸಿಂಹ ಮಾಹಿತಿ ಹಂಚಿಕೊಂಡಿದ್ದಾರೆ. ಲಕ್ಸುರಿ, ಪ್ರೀಮಿಯಂ, ಸ್ಟ್ಯಾಂಡರ್ಡ್‌ ಸೇರಿ ಫುಲ್‌ ಸ್ಕ್ರೀನ್‌ನ 197 ಸೀಟುಗಳನ್ನು ಬುಕ್‌ ಮಾಡಿದ್ದಾರೆ. ಇದರ ಒಟ್ಟು ಟಿಕೆಟ್‌ ಮೊತ್ತ 68,920 ರೂಪಾಯಿ ಎಂದು ವಿವರ ಹಂಚಿಕೊಂಡಿದ್ದಾರೆ.

ಬಾಕ್ಸಾಫೀಸ್‌ ಕಲೆಕ್ಷನ್‌ ಎಷ್ಟು?

ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರ ಗುರುವಾರ ಭಾರತದಲ್ಲಿ ₹60 ಕೋಟಿ ಲಾಭ ಗಳಿಸಿದೆ ಎಂದು ವರದಿಯಾಗಿದೆ. ಕನ್ನಡ ಆವೃತ್ತಿಯಿಂದಲೇ ₹18 ಕೋಟಿ ಬಂದರೆ, ಹಿಂದಿ-ಡಬ್ ಮಾಡಿದ ಆವೃತ್ತಿಯಿಂದ ₹19 ಕೋಟಿ ಕಲೆಕ್ಷನ್‌ ಮಾಡಿದೆಯಂತೆ. ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಸಹ ಮೊದಲ ದಿನದಂದು ಉತ್ತಮ ಗಳಿಕೆ ಕಂಡಿದ್ದು, ಪ್ಯಾನ್-ಇಂಡಿಯಾ ಮಟ್ಟದಲ್ಲೂ ಮೊದಲ ದಿನವೇ ಯಶಸ್ಸು ಕಂಡಿದೆ.

ಶುಕ್ರವಾರ ಸಂಜೆ 5 ಗಂಟೆಯ ವೇಳೆಗೆ ಈ ಚಿತ್ರವು ದೇಶೀಯವಾಗಿ ₹20.56 ಕೋಟಿ ನಿವ್ವಳ ಗಳಿಕೆ ಮಾಡಿದ್ದು, ಭಾರತದಲ್ಲಿ ₹ 80.56 ಕೋಟಿ ಗಳಿಸಿದೆ. ಈ ಮೂಲಕ ಕಾಂತಾರ ಈಗಾಗಲೇ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ. ಕಳೆದ ತಿಂಗಳು ಸು ಫ್ರಮ್ ಸೋ ಸಿನಿಮಾ ಭಾರತದಲ್ಲಿ ₹92 ಕೋಟಿ ನಿವ್ವಳ ಗಳಿಸಿತ್ತು. ಶನಿವಾರದ ವೇಳೆಗೆ ರಿಷಬ್‌ ಸಿನಿಮಾ ಈ ದಾಖಲೆ ಮುರಿಯಲಿದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+