ಕನ್ನಡಿಗರು ಮೆಚ್ಚಿದ್ದ ಜನಪ್ರಿಯ ಧಾರಾವಾಹಿ ಹಿಂದಿಗೆ ರಿಮೇಕ್‌, ಅಲ್ಲೂ ಇದೇ ಪಾತ್ರ ಇದೇ ಹಾಡು

ಕನ್ನಡ ಕಿರುತೆರೆ ಪ್ರೇಕ್ಷಕರನ್ನು ವರ್ಷಗಳ ಕಾಲ ರಂಜಿಸಿದ್ದ ಖ್ಯಾತ ಧಾರಾವಾಹಿಯೊಂದು ಇದೀಗ ಹಿಂದಿಗೂ ರಿಮೇಕ್‌ ಆಗುತ್ತಿದೆ. ವಿಶೇಷವಂದರೆ ಕನ್ನಡದ ಧಾರಾವಾಹಿಯಲ್ಲಿದ್ದ ಪಾತ್ರಗಳ ಹೆಸರನ್ನೇ ಹಿಂದಿಯಲ್ಲೂ ಮುಂದುವರಿಸಲಾಗಿದೆ. ಈ ಧಾರಾವಾಹಿಯ ಇಂಟ್ರೋ ಸಾಂಗ್‌ ಕೂಡ ಅದೇ ಕನ್ನಡ ರೀತಿಯಲ್ಲೇ ಹಿಂದಿಯಲ್ಲೂ ಮಾಡಲಾಗಿದೆ. ಇಷ್ಟಕ್ಕೂ ಆ ಧಾರಾವಾಹಿ ಯಾವುದು ಎನ್ನುವ ವಿವರ ಇಲ್ಲಿದೆ. ಜೀ ವಾಹಿನಿಯಲ್ಲಿ ಅನಿರುದ್ಧ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದ ಜೊತೆ ಜೊತೆಯಲಿ ಸೀರಿಯಲ್‌ ಇದೀಗ ರಿಮೇಕ್‌ ಆಗುತ್ತಿದ್ದು ಹಿಂದಿ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದೆ.

ಹಿರಿತೆರೆಯಲ್ಲಿ ಮಿಂಚಿದ್ದ ಅನಿರುದ್ಧ ಅವರು ಈ ಧಾರಾವಾಹಿ ಮೂಲಕ ಕಿರುತೆರೆಯಲ್ಲೂ ಮೋಡಿ ಮಾಡಿದ್ದರು. ಮೇಘಾ ಶೆಟ್ಟಿ ಹಾಗೂ ಅನಿರುದ್ಧ್‌ ಅವರ ಪಾತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಟಿಆರ್‌ಪಿಯಲ್ಲೂ ಒಂದು ಕಾಲಕ್ಕೆ ಈ ಧಾರಾವಾಹಿ ಹವಾ ಕ್ರಿಯೇಟ್‌ ಮಾಡಿತ್ತು. ಇದಲ್ಲದೆ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಕೂಡ ಜನರ ಬಾಯಲ್ಲಿ ಗುನುಗುತ್ತಿತ್ತು. ಈ ಸೂಪರ್ ಹಿಟ್ ಕಂಡಿದ್ದ ಧಾರಾವಾಹಿ ಇದೀಗ "ತುಮ್ ಸೇ ತುಮ್ ತಕ್" ಎಂಬ ಹೆಸರಿನಲ್ಲಿ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

Popular Kannada Serial Jothe Jotheyalli Remake In Hindi As Tum Se Tum Tak

ಕನ್ನಡದಲ್ಲಿದ್ದ ಟೈಟಲ್‌ ಟ್ರ್ಯಾಕ್‌ ಅನ್ನೇ ಹಿಂದಿಗೂ ಬಳಸಿಕೊಳ್ಳಲಾಗಿದೆ. ಹಿಂದಿ ಸಾಲುಗಳಷ್ಟೇ ಬದಲಾಗಿದೆ. ಇದನ್ನು ಜೀ ಹಿಂದಿ ಹಂಚಿಕೊಂಡಿದೆ. ಮತ್ತೊಂದು ಅಚ್ಚರಿ ವಿಚಾರವೆಂದರೆ ಕನ್ನಡದಲ್ಲಿ ಅನಿರುದ್ಧ ಹಾಗೂ ಮೇಘಾ ಅವರ ಪಾತ್ರಗಳ ಹೆಸರನ್ನೇ ಹಿಂದಿಯಲ್ಲೂ ಮುಂದುವರಿಸಲಾಗಿದೆ. ಅನಿರುದ್ಧ ಆರ್ಯವರ್ಧನ್‌ ಆಗಿ, ಮೇಘಾ ಶೆಟ್ಟಿ ಅನು ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಹಿಂದಿ ಧಾರಾವಾಹಿಯಲ್ಲೂ ಇದೇ ಹೆಸರುಗಳನ್ನು ಬಳಸಲಾಗಿದೆ.

ಕನ್ನಡದಲ್ಲಿ ಅನಿರುದ್ಧ್ ಜತ್ಕರ್, ಮೇಘಾ ಶೆಟ್ಟಿ , ಮಾನಸಾ ಮನೋಹರ್, ಬಿಎಂ ವೆಂಕಟೇಶ್, ಜೈ ಜಗದೀಶ್, ವಿಜಯಲಕ್ಷ್ಮೀ ಸಿಂಗ್, ಶಿವಾಜಿ ಜಾಧವ್, ಅಪೂರ್ವ ಸೇರಿದಂತೆ ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಟಿಆರ್‌ಪಿಯಲ್ಲಿ ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ ಈ ಸೀರಿಯಲ್ ಕೂಡ ಒಂದಾಗಿತ್ತು. ಯುಟ್ಯೂಬ್‌ನಲ್ಲೂ ಈ ಸೀರಿಯಲ್‌ನ ಟೈಟಲ್‌ ಟ್ರ್ಯಾಕ್‌ 30 ಮಿಲಿಯನ್‌ ವೀಕ್ಷಣೆ ಪಡೆದಿತ್ತು. ಇದು ಕನ್ನಡ ಕಿರುತೆರೆಯಲ್ಲೇ ದೊಡ್ಡ ದಾಖಲೆ ಎನ್ನಲಾಗಿತ್ತು.

Popular Kannada Serial Jothe Jotheyalli Remake In Hindi As Tum Se Tum Tak

ಜೊತೆ ಜೊತೆಯಲಿ ಧಾರಾವಾಹಿಯ ಕಥೆ ನೋಡುವುದಾದರೆ 45 ವರ್ಷದ ಆರ್ಯವರ್ಧನ್, 20 ವರ್ಷದ ಅನು ಸಿರಿಮನೆಯನ್ನು ಪ್ರೀತಿಸಿ ಮದುವೆಯಾಗ್ತಾರೆ, ಇಂತಹ ಕಾಂಬಿನೇಷನ್‌ನಲ್ಲಿ ಧಾರಾವಾಹಿ ಬಂದಿದ್ದು ಅಪರೂಪ ಎಂದು ಹೇಳಲಾಗಿತ್ತು. ಎರಡೂ ಪಾತ್ರಗಳ ನಡುವೆ ವಯಸ್ಸಿನ ಅಂತರವಿದ್ದರೂ ಪ್ರೇಕ್ಷಕರು ಈ ಕಥೆ ಮೆಚ್ಚಿಕೊಂಡಿದ್ದರು. ಹಾಗಾಗಿ ದೊಡ್ಡ ಮಟ್ಟದಲ್ಲಿ ಈ ಧಾರಾವಾಹಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಹಿಟ್‌ ಕಂಡ ಬೆನ್ನಲ್ಲೇ ಹಿಂದಿಗೂ ರಿಮೇಕ್‌ ಆಗುತ್ತಿದ್ದು, ಅಲ್ಲಿಯೂ ಮೋಡಿ ಮಾಡಲಿದೆಯಾ ಎಂಬುದು ಸದ್ಯದಲ್ಲೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+