Actor Doddanna: ನಟ ದೊಡ್ಡಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ.!-ಕಾರಣ ಏನು, ಇಲ್ಲಿದೆ ಮಾಹಿತಿ
Actor Doddanna: ಯಾವ ಪಾಪದ ಕರ್ಮವೋ ಗೊತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಇಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಆದ್ದರಿಂದ ಇದನ್ನು ಸರಿಪಡಿಸಬೇಕೆಂದು ಹಾಗೂ ಕಲಾವಿದರ ಸಂಘ ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ, ನಾಗಾರಾಧನೆಯನ್ನು ಮಾಡಲಾಗಿತ್ತು. ಇದರ ಬೆನ್ನೆಲ್ಲೆ ಹಿರಿಯ ನಟ ದೊಡ್ಡಣ್ಣಗೆ ಸಂಕಷ್ಟವೊಂದು ಎದುರಾಗಿದೆ.
ಕನ್ನಡ ಚಿತ್ರರಂಗ ಒಗ್ಗಟ್ಟು, ಥಿಯೇಟರ್, ನಿರ್ಮಾಪಕರ ಸಮಸ್ಯೆ ನಿವಾರಣೆಗಾಗಿ ಪೂಜೆ ಮಾಡಲಾಗಿತ್ತು. ಇದರಲ್ಲಿ ನಟ ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಇದರ ನಡುವೆಯೇ ಕಲಾವಿದರ ಸಂಘದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಸಾಮಾಜಿಕ ಹೋರಾಟಗಾರ ಹಾಗೂ ರಾಜಕಾರಣಿ ಎನ್.ಆರ್.ರಮೇಶ್ ಮಾತನಾಡಿ, ಸಹಕಾರ ಸಂಘಗಳ ನಿಯಮದ ಪ್ರಕಾರನ ಚುನಾವಣೆ ನಡೆಸುತ್ತುಲ್ಲ. ಹೊಸ ಕಲಾವಿದರ ನೋಂದಣಿಯನ್ನೂ ಮಾಡಿಲ್ಲ. ಯಾವ ಕಲಾವಿದರೂ ಕೂಡ ಸರಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿಲ್ಲ, ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಸಿಲ್ಲ. ಲೆಕ್ಕ ಪರಿಶೋಧನಾ ವರದಿ ಸಲ್ಲಿಸಿಲ್ಲ. ದೊಡ್ಡಣ್ಣ ಮಾತ್ರ ಸಂಘದ ಖಜಾಂಚಿ ಆಗಿದ್ದು, ಉಳಿದವರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಖಜಾಂಚಿ ದೊಡ್ಡಣ್ಣ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಲೆಕ್ಕ ಪರಿಶೋಧನಾ ವರದಿ ಕೊಡದೇ ಇದ್ದಿದ್ದಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮದಿಂದ ಬೇರೆ ಬೇರೆ ಸಂಘಗಳು ಹುಟ್ಟಿಕೊಳ್ಳುತ್ತಿವೆ. ಜಗ್ಗೇಶ್, ಸುಂದರ್ ರಾಜ್, ಶ್ರೀನಾಥ್, ರಮೇಶ್ ಯಾರಿಗೂ ಒಂದೂ ಸಂದೇಶ ಕೂಡ ಹೋಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಯಾರೋ ಕೆಲವರು ಮಾತ್ರ ಈ ಸಂಘವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕಲಾವಿದರಲ್ಲಿ ಒಗ್ಗಟ್ಟಿಲ್ಲ, ಅದೆಲ್ಲ ತೋರ್ಪಡಿಕೆಗೆ ಮಾತ್ರ. ಕನ್ನಡ ಕಲಾವಿದರು ಒಗ್ಗಟ್ಟಾಗಿದ್ದಾರೆ ಅಂದರೆ, ಅದು 8ನೆ ಅದ್ಭುತ. ರಾಕ್‌ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಇಬ್ಬರೇ ಇರುವುದು. ಬೇರೆ ಯಾವ ಪದಾಧಿಕಾರಿಗಳು ಸಕ್ರಿಯರಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೆಲ ದಿನದ ಹಿಂದಷ್ಟೆ ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ಕೆಲ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡಿಸಲಾಯ್ತು. ಈ ಪೂಜೆ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಟ ದೊಡ್ಡಣ್ಣ ಮತ್ತು ರಾಕ್‌ಲೈನ್ ವೆಂಕಟೇಶ್ ಹೊತ್ತಿದ್ದರು. ನಟ ದೊಡ್ಡಣ್ಣ ಮತ್ತು ಅವರ ಪತ್ನಿಯವರೇ ಪೂಜೆಗೆ ಕುಳಿತಿದ್ದರು. ಪ್ರಕಾಶ್ ಅಮ್ಮಣ್ಣಾಯ ಸೇರಿ ಇನ್ನೂ ಕೆಲವು ಆಚಾರ್ಯರು, ಪೂಜಾರಿಗಳು ಪೂಜೆಗೆ ಆಗಮಿಸಿ ಪೂಜೆ ನಡೆಸಿಕೊಟ್ಟರು. ದೇವರ ನುಡಿಯನ್ನು ಸಹ ಈ ಸಂದರ್ಭದಲ್ಲಿ ಕೇಳಲಾಗಿತ್ತು ಎಂದು ತಿಳಿದುಬಂದಿದೆ.












Click it and Unblock the Notifications