ನಾನು ಎರಡನೇ ಮದುವೆಯಾಗುತ್ತೇನೆ: ಅಚ್ಚರಿ ಹೇಳಿಕೆ ಕೊಟ್ಟ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಪತ್ನಿ

ಇಂದು ನಾವೆಲ್ಲರೂ ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಬೇಕಾದಷ್ಟು ಸೌಲಭ್ಯಗಳು ಇಂದು ನಮಗೆ ಸುಲಭವಾಗಿ ಸಿಗುತ್ತಿವೆ. ಆದರೂ ಕೂಡ ಮನಸ್ಸಿಗೆ ನೆಮ್ಮದಿ ಇಲ್ಲ.ಈಗಿನ ಕಾಲದಲ್ಲಿ ಜನರು ಬಹಳ ಫಾಸ್ಟ್ ಇದ್ದಾರೆ. ಪ್ರೀತಿ, ಪ್ರೇಮ, ಮದುವೆಯಾಗುತ್ತಾರೆ, ಅಷ್ಟೇ ಬೇಗನೆ ಡಿವೋರ್ಸ್ ಕೂಡ ಆಗುತ್ತಾರೆ. ನಮ್ಮವರ ಜೊತೆ ನಾವು ಸಂಬಂಧದ ಮೌಲ್ಯವನ್ನು ಮರೆತು ಬದುಕುತ್ತಿದ್ದೇವೆ ಮತ್ತು ಬಾಂಧವ್ಯವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ಪವರ್‌ ಸ್ಟಾರ್‌ ಪತ್ನಿಯೂ ಎರಡನೇ ಮದುವೆಗೆ ಗ್ರೀನ್‌ ಸಿಗ್ನಿಲ್‌ ಕೊಟ್ಟಿದ್ದಾರೆ.

ಹೌದು, ಪವನ್ ಕಲ್ಯಾಣ್ ಅವರಿಂದ ರೇಣು ದೇಸಾಯಿ ಅವರು ಬೇರ್ಪಟ್ಟು ಸುಮಾರು 13 ವರ್ಷಗಳಾಗಿವೆ. ಬರೋಬ್ಬರಿ 13 ವರ್ಷಗಳ ಕಾಲ ಇನ್ನೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ರೇಣು ದೇಸಾಯಿ ಅವರಿಗೆ ಇಬ್ಬರು ಮಕ್ಕಳು. ರೇಣು ದೇಸಾಯಿ ಅವರು ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾಳನ್ನು ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸುತ್ತಿದ್ದಾರೆ. ರೇಣು ದೇಸಾಯಿ ಅವರು ಎರಡನೇ ಮದುವೆ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಪವರ್‌ ಸ್ಟಾರ್‌ ಪವನ್‌ ಕಲ್ಯಾಣ ಅವರಿಗೆ ಡಿವೋರ್ಸ್‌ ಪಡೆದು ಬರೋಬ್ಬರಿ 13 ವರ್ಷಗಳ ಬಳಿಕ ಇದೀಗ ಎರಡನೇ ಮದುವೆ ಬಗ್ಗೆ ಪ್ರಕ್ರಿಯಿಸಿದ್ದಾರೆ.

Pawan Kalyan Wife Renu Desai Clarity On Second Marriage

ಈ ಕುರಿತು ಸಂದರ್ಶನವೊಂದರಲ್ಲಿ ಪವನ್‌ ಕಲ್ಯಾಣ ಮಾಜಿ ಪತ್ನಿ ರೇಣು ದೇಸಾಯಿ ಅವರು ಮಾತನಾಡಿ,ಎರಡನೇ ಮದುವೆಯಾಗಲು ಸಿದ್ಧಳಾಗಿದ್ದೇನೆ.. ಆದರೆ ಇಲ್ಲಿ ಒಂದು ಸಣ್ಣ ತಿರುವು ಇದೆ. ಮದುವೆಯಾಗಲು ಇನ್ನೂ ಕೆಲವು ದಿನ ಬೇಕು ಎಂದು ಹೇಳಿದ್ದಾರೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಖಂಡಿತವಾಗಿಯೂ ಮದುವೆಯಾಗುವುದಾಗಿ ರೇಣು ದೇಸಾಯಿ ಸ್ಪಷ್ಟಪಡಿಸಿದ್ದಾರೆ. ಇನ್ನೂ ಈ ವೇಳೆ ಇಷ್ಟು ವರ್ಷವಾದರೂ ಎರಡನೇ ಮದುವೆಯಾದೇ ಇರುವುದಕ್ಕೆ ಕಾರಣವನ್ನೂ ಸಹ ಬಹಿರಂಗಪಡಿಸಿದ್ದಾರೆ.

ನಾನು ಮಕ್ಕಳ ಹಿತದೃಷ್ಟಿಯಿಂದ ಮದುವೆಯಾಗಲಿಲ್ಲ. ಒಂದು ಸಮಯದಲ್ಲಿ ಮದುವೆಯಾಗಲು ರೆಡಿಯಾಗಿ ನಿಶ್ಚಿತಾರ್ಥವೂ ಆಗಿತ್ತು. ಆದರೆ ಅದು ಕಾರಣಂತಾರಗಳಿಂದ ರದ್ದಾಯಿತು. ಆದರೆ ಆ ಸಮಯದಲ್ಲಿ, ನನ್ನ ಮಕ್ಕಳಾದ ಅಕಿರಾ ಮತ್ತು ಆದ್ಯ ಇನ್ನೂ ಚಿಕ್ಕವರಾಗಿದ್ದರು. ಅವರಿಗೆ ಆರೈಕೆದಾರರ ಅಗತ್ಯವಿತ್ತು. ಒಂದೊಳ್ಳೆ ಒಡನಾಟದ ಅಗತ್ಯವಿತ್ತು. ನಾನು ಮದುವೆಯಾದರೇ ನನ್ನ ಮಕ್ಕಳು ಒಂಟಿಯಾಗುತ್ತಾರೆ.. ಏಕೆಂದರೇ ತಂದೆ ಈಗಾಗಲೇ ದೂರವಾಗಿದ್ದಾರೆ. ನಾನೂ ಕೂಡ ಹೊರಟು ಹೋದರೆ, ಅವರು ಒಂಟಿತನದ ಭಾವನೆಯನ್ನು ಎದುರಿಸಬೇಕಾಗುತ್ತದೆ ಎಂದು ಮದುವೆ ಮುಂದೂಡಿದ್ದೇನೆ ಎಂದು ರೇಣು ದೇಸಾಯಿ ಹೇಳಿದ್ದಾರೆ.

ಇನ್ನೂ ಎರಡ್ಮೂರು ವರ್ಷದಲ್ಲಿ ಮಕ್ಕಳು ಮಕ್ಕಳು ದೊಡ್ಡವರಾಗುತ್ತಾರೆ. ಅವರು ಕಾಲೇಜಿಗೆ ಹೋಗುತ್ತಾರೆ. ನಂತರ ಅವರಿಗೆ ಸ್ನೇಹಿತರು ಮತ್ತು ಪ್ರೇಮಿಗಳ ಹೊಸ ಲೋಕವಿರುತ್ತದೆ. ಅವರು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆಗ ತಮ್ಮ ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿರುವುದಿಲ್ಲ, ಅವರಿಗೆ ಬೆಂಬಲ ಮಾತ್ರ ಬೇಕಾಗುತ್ತದೆ. ಆಗ ನಾನು ಸ್ವತಂತ್ರಳಾಗಿ ನನ್ನ ದಾಂಪತ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾನು ಇಷ್ಟು ವರ್ಷಗಳಿಂದ ಕಾಯುತ್ತಿದ್ದೇನೆ ಎಂದು ರೇಣು ದೇಸಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+