Darshan Thoogudeepa: ಪ್ರೀತಿಗೆ ಮೋಸ ಮಾಡುವವರು ನಾಯಿಗಳು, ಪವಿತ್ರಾ ಗೌಡ ಮಾಜಿ ಗಂಡನ ಸ್ಫೋಟಕ....
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗ ಜಾಮೀನು ಪಡೆದು, ರಿಲೀಸ್ ಆಗಿ ಹೊರಗೆ ಸ್ವತಂತ್ರ ಹಕ್ಕಿಯಾಗಿ ಹಾರಾಡಲು ಬರ್ತಿದ್ದಾರೆ. ಇಂತಹ ಸಮಯದಲ್ಲೇ ಪವಿತ್ರಾ ಗೌಡ ಗಂಡ ನೀಡುತ್ತಿರುವ ಹೇಳಿಕೆಗಳು ಸಂಚಲನ ಸೃಷ್ಟಿಸಿ, ವೈರಲ್ ಆಗುತ್ತಿವೆ. ಅದರಲ್ಲೂ, ಪ್ರೀತಿಗೆ ಮೋಸ ಮಾಡುವವರು ನಾಯಿಗಳು ಅಂತಾ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೆ ಡಿ-ಬಾಸ್ ದರ್ಶನ್ ಅವರ ಹವ ಏನೆಂದು ತೋರಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಮತ್ತೊಂದ್ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ಕೂಡ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿದ್ದು, ಇವತ್ತು ರಿಲೀಸ್ ಆಗಿ ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಹೊರಗೆ ಬರುತ್ತಿದ್ದಾರೆ. ಇದೇ ಸಮಯದಲ್ಲಿ ಪವಿತ್ರಾ ಗೌಡ ಮಾಜಿ ಗಂಡ....

ಪ್ರೀತಿಗೆ ಮೋಸ ಮಾಡುವವರು ನಾಯಿಗಳು!
ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೊರ ಬರುತ್ತಿರುವ ವಿಚಾರ ಭರ್ಜರಿ ಸೌಂಡ್ ಮಾಡ್ತಿದೆ. ಡಿ-ಬಾಸ್ ದರ್ಶನ್ ಅಭಿಮಾನಿಗಳು, ಇಂದು ಆಸ್ಪತ್ರೆಯಿಂದ ದರ್ಶನ್ ತೂಗುದೀಪ್ ಅವರು ಹೊರ ಬಂದ ತಕ್ಷಣ ದೊಡ್ಡ ಮೆರವಣಿಗೆ ಮಾಡಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, ಪವಿತ್ರಾ ಗೌಡ ಮಾಜಿ ಗಂಡ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಪ್ರೀತಿಗೆ ಮೋಸ ಮಾಡುವವರು ನಾಯಿಗಳು ಅಂತಾ ಪವಿತ್ರಾ ಗೌಡ ಮಾಜಿ ಗಂಡ....
ಮಾಜಿ ಗಂಡನಿಂದ ಪವಿತ್ರಾ ಬಗ್ಗೆ....
ಪವಿತ್ರಾ ಗೌಡ ಮಾಜಿ ಗಂಡನಿಗೆ ತನ್ನ ಹೆಂಡತಿಯನ್ನ ಬಿಟ್ಟು ಬದುಕಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಪ್ರತಿ ದಿನವೂ ನರಳುತ್ತಿರುವ ಪವಿತ್ರಾ ಗೌಡ ಮಾಜಿ ಗಂಡ, ನನ್ನ ಹೆಂಡತಿ ಮತ್ತೆ ವಾಪಸ್ ನನ್ನ ಜೀವನಕ್ಕೆ ಬಂದರೆ ಸಾಕು ಅಂತಾ ಕಾಯುತ್ತಿದ್ದಾರೆ.
ಆದರೆ ಇದೇ ಸಮಯದಲ್ಲಿ ಪವಿತ್ರಾ ಗೌಡ ಮಾಜಿ ಗಂಡ, ಪ್ರೀತಿಗೆ ಮೋಸ ಮಾಡುವವರು ನಾಯಿಗಳು ಅಂತಾ ಹೇಳಿದ್ದು ಸಂಚಲನ ಎಬ್ಬಿಸಿದೆ. ಹಾಗಾದ್ರೆ ಪವಿತ್ರಾ ಗೌಡ ಮಾಜಿ ಗಂಡ ಪ್ರೀತಿಗೆ ಮೋಸ ಮಾಡುವವರು ನಾಯಿಗಳು ಅಂತಾ ಹೇಳಿದ್ದು ಯಾರಿಗೆ?
ಪವಿತ್ರಾ ಗೌಡಗೆ ಜಾಮೀನು ಸಿಕ್ಕ ಬೆನ್ನಲ್ಲೇ ಪವಿತ್ರಾ ಗೌಡ ಮಾಜಿ ಗಂಡನ ಹೇಳಿಕೆ ದೊಡ್ಡ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಪವಿತ್ರಾ ಗೌಡ ಮಾಜಿ ಗಂಡ ಪ್ರೀತಿಯ ಪಾಠವನ್ನ ಮಾಡಿದ್ದು, ಪ್ರೀತಿಯಲ್ಲಿ ಯಾವುದೇ ಕಾರಣಕ್ಕೂ ಮೋಸ ಮಾಡಬಾರದು & ಬದಲಾಗಬಾರದು ಅಂತಾ ಹೇಳಿದ್ದಾರೆ. ಹಾಗೇ, ಪ್ರೀತಿಯಲ್ಲಿ ಮೋಸ ಮಾಡುವವರು ನಾಯಿಗಳಿಗೆ ಸಮ ಎಂದು ಹೇಳಿದ್ದು, ಈಗಲೂ ತಾವು ಪವಿತ್ರಾ ಗೌಡ ಮೇಲೆ ಪ್ರೀತಿ ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಡಿ-ಬಾಸ್ & ಪವಿತ್ರಾ ಗೌಡಗೆ ರಿಲೀಫ್!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿರುವ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಆದರೆ ಈ ವಿಚಾರದಲ್ಲಿ ಪವಿತ್ರಾಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೆಲ್ಲಾ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಘಟ್ಟ ತಲುಪಿದಂತೆ ಆಗಿದೆ.












Click it and Unblock the Notifications