Darshan Thoogudeepa: ವಿಜಯಲಕ್ಷ್ಮಿಗೆ ಖಡಕ್ ವಾರ್ನಿಂಗ್ ಕೊಟ್ಟ ಪವಿತ್ರಾ?
ವಿಜಯಲಕ್ಷ್ಮಿ ದರ್ಶನ್ ಅವರಿಗೆ ಪವಿತ್ರಾ ಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. 'ದರ್ಶನ್ ಶ್ರೀನಿವಾಸ್ ಹಾಗೂ ನಾನು 10 ವರ್ಷಗಳಿಂದ ಜೊತೆಯಲ್ಲಿ ಸಂತೊಷವಾಗಿದ್ದೇವೆ. ಇದು ವಿಜಯಲಕ್ಷ್ಮಿಗೂ ಗೊತ್ತಿದೆ' ಎಂದು ಪವಿತ್ರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ. ಹಾಗಾದರೆ ಏನಿದು ಪೋಸ್ಟ್? ಪವಿತ್ರಾ ಈ ರೀತಿ ಬರೆದಿದ್ದು ಯಾಕೆ?
ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಪವಿತ್ರಾ ಗೌಡ ಖಡಕ್ ವಾರ್ನಿಂಗ್ ಕೊಟ್ಟ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟ್ ಈಗ ವೈರಲ್ ಆಗುವುದಕ್ಕೂ ಕಾರಣ ಇದೆ. ಹಾಗಾದರೆ ಏನದು ಕಾರಣ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜೈಲಿನಿಂದ ಹೊರಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ಟಿವ್ ಆಗಿದ್ದಾರೆ. ದೇಶದ ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪುನಾರಂಭಿಸಲು ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಭರ್ಜರಿ ಶಾಪಿಂಗ್ ಕೂಡ ಮಾಡುತ್ತಿದ್ದಾರೆ. ಪವಿತ್ರಾ ಟೆಂಪಲ್ ರನ್ ಫೋಟೋ ಹಾಗೂ ವೀಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.
ಇತ್ತ ವಿಜಯಲಕ್ಷ್ಮೀ ಅವರು ತಮ್ಮ ಪತಿ ದರ್ಶನ್ ತೂಗುದೀಪ ಅವರೊಂದಿಗೆ ಸಂತಸದ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಮೊನ್ನೆಯಷ್ಟೇ ವಿಜಯಲಕ್ಷ್ಮಿ ಹುಟ್ಟುಹಬ್ಬವನ್ನು ದರ್ಶನ್ ಅವರು ಅದ್ಧೂರಿಯಾಗಿ ಆಚರಿಸಿ ಸರ್ಪೈಸ್ ಕೊಟ್ಟಿದ್ದರು. ಇದರ ಫೋಟೋಗಳನ್ನು ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದರಿಂದ ಪವಿತ್ರಾ ಗೌಡ ಅವರ ಹೊಟ್ಟೆ ಉರಿದು ಹೋಗಿದೆ.
ಯಾಕೆಂದರೆ ಜೈಲಿಗೆ ಹೋಗುವ ಮುನ್ನ ಪವಿತ್ರಾ ಹಾಗೂ ದಾಸ ರಾಜ ರಾಣಿಯಂತೆ ಕಾಲ ಕಳೆದಿದ್ದರು. ಆರ್ಆರ್ ನಗರ ಮನೆಯಲ್ಲಿ ಗೌಡ್ತಿ ಸಿಕ್ಕಾಪಟ್ಟೆ ಖುಷಿಯಾಗಿ ತನ್ನದೇ ರಾಜಭಾರ ಮಾಡಿಕೊಂಡಿದ್ದರು. ದರ್ಶನ್ ತನ್ನ ಸೊತ್ತು ಎನ್ನುವಂತೆ ಜೀವನ ನಡೆಸುತ್ತಿದ್ದರು. ಆದರೆ ಇದೀಗ ಇದೆಲ್ಲದಕ್ಕೂ ವಿಜಯಲಕ್ಷ್ಮೀ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಲ್ಲದೆ ದರ್ಶನ್ ಜೊತೆಗೆ ತುಂಬಾ ಖುಷಿಯಾಗಿರುವ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ಕಂಡು ಒಬ್ಬೊಂಟಿಯಾದ ಪವಿತ್ರಾಗೆ ಸಹಿಸಿಕೊಳ್ಳುವುದು ಕಷ್ಟವಾದಂತಿದೆ.
ಇಷ್ಟೆಲ್ಲಾ ಆದರೂ ಕೂಡ ಪವಿತ್ರಾ ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಹೆಸರಿನಲ್ಲಿ ಪೂಜೆ ಮಾಡಿಸಿದ್ದರು. ಇದು ಡಿ-ಬಾಸ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಪವಿತ್ರಾ ದೇವಸ್ಥಾನ ಭೇಟಿ ಫೋಟೋಗಳನ್ನೂ ಹಂಚಿಕೊಮಡಿದ್ದರು. ವಿಜಯಲಕ್ಷ್ಮೀ ಹಾಗೂ ದರ್ಶನ್ ಜೊತೆಯಾಗಿ ಇರುವುದು ಪವಿತ್ರಾಗೆ ಸಹಿಸಲು ಆಗುತ್ತಿಲ್ಲ ಎನ್ನುವ ರೀತಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಪವಿತ್ರಾ ಈ ಹಿಂದೆ ವಿಜಯಲಕ್ಷ್ಮೀಗೆ ಖಡಕ್ ವಾರ್ನಿಂಗ್ ಕೊಟ್ಟ ಪೋಸ್ಟ್ ಈಗ ವೈರಲ್ ಆಗಿದೆ. ಹಾಗಾದರೆ ಆ ಪೋಸ್ಟ್‌ನಲ್ಲಿ ಏನಿದೆ?
ವಿಜಯಲಕ್ಷ್ಮೀಗೆ ಖಡಕ್ ವಾರ್ನಿಂಗ್ ಕೊಟ್ಟ ಪವಿತ್ರಾ
'ನಾನು ಪವಿತ್ರಾ ಗೌಡ. ನಾನು ಹಾಗೂ ದರ್ಶನ್ ಶ್ರೀನಿವಾಸ್ ಅವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೊಷವಾಗಿದ್ದೇವೆ. ಈ ವಿಷಯ ವಿಜಯಲಕ್ಷ್ಮೀ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮೀಯವರೆ ನನಗೆ ಹಲವಾರು ಸಾರಿ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದು, ವಿಜಯಲಕ್ಷ್ಮಿ ಅವರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಸಿರುತ್ತಾರೆ. ಅದರ ಕೆಲವು ಸಾಕ್ಷಿಗಳನ್ನ ಸಮಯ ಬಂದಾಗ ಹಂಚಿಕೊಳ್ಳುತ್ತೇನೆ' ಎಂದು ಪವಿತ್ರಾ ಬರೆದಿದ್ದರು.
ಜೊತೆಗೆ 'ವಿಜಯಲಕ್ಷ್ಮಿ ಅವರು ನನ್ನ ವಿರುದ್ಧವಾಗಿ ಪೋಸ್ಟ್‌ಗಳನ್ನ ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ಮಗಳ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಎಂಬ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸಿರುವುದು ನನಗೆ ಮಾನಸಿಕ ನೋವು ಉಂಟು ಮಾಡಿದೆ. ನನ್ನ ವೈಯಕ್ತಿಕ ಫೋಟೋಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇಲ್ಲ. ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಲೀಗಲ್ ಆಕ್ಷನ್ ತೆಗೆದುಕೊಳ್ಳಲು ಬರುತ್ತದೆ. ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ' ಎಂದು ಪವಿತ್ರಾ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಈ ಪೋಸ್ಟ್ ಅಪಪ್ರಚಾರ ಮಾಡುವವರಿಗೆ ಎಚ್ಚರಿಕೆ ಕೊಟ್ಟಂತಿದೆ.












Click it and Unblock the Notifications