ಪವಿತ್ರಾ ಗೌಡ ವಿಜಯಲಕ್ಷ್ಮೀ ವಾರ್ ಮತ್ತೆ ಶುರು: ದರ್ಶನ್ ಪತ್ನಿ ಅಭಿಮಾನಿಗೆ ಕೌಂಟರ್‌ ಕೊಟ್ಟ ಸುಬ್ಬಿ

ಜೈಲಿಗೆ ಹೋಗಿ ಬಂದ ಬಳಿಕ ನಟ ದರ್ಶನ್ ಪವಿತ್ರಾ ಗೌಡ ಅವರಿಂದ ದೂರ ಉಳಿದಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಹಾಕಿದ ಗೆರೆಯನ್ನು ದಾಟಿ ದರ್ಶನ್ ಹೊರಬರುತ್ತಿಲ್ಲ. ಪವಿತ್ರಾ ಗೌಡ ಹತ್ತಿರವೂ ಸುಳಿಯದೆ ದಾಸ ದೂರ ಆಗಿದ್ದಾರೆ. ಆದರೆ ಯುಗಾದಿ ಹೊತ್ತಲ್ಲಿ ಮತ್ತೆ ಹಳೆಯ ವರಸೆ ಶುರುವಾದಂತೆ ಕಾಣಿಸುತ್ತಿದೆ. ವಿಜಯಲಕ್ಷ್ಮೀ ಜೊತೆಗೆ ಪವಿತ್ರಾ ಸೋಶಿಯಲ್ ಮೀಡಿಯಾ ವಾರ್‌ಗೆ ಇಳಿದಂತಿದೆ.

ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಮುಖ ಆರೋಪಿ. ಇವರು ದರ್ಶನ್ ಜೈಲಿಗೆ ಹೋಗೋಕೆ ಕಾರಣರಾದವರು. ಇದೀಗ ಯುಗಾದಿ ಹೊತ್ತಲ್ಲಿ ಪವಿತ್ರಾ ಗೌಡ ಹೊಸ ಪೋಸ್ಟ್ ಹಾಕಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. 'ನನ್ನ ಮುಟ್ಟೋಕಾಗಲ್ಲ' ಎನ್ನುವ ಪೋಸ್ಟ್ ಸದ್ಯ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದು ವಿಜಯಲಕ್ಷ್ಮೀಗೆ ಕೊಟ್ಟ ತಿರುಗೇಟಾ ಎಂಬ ಪ್ರಶ್ನೆಯನ್ನು ಮೂಡಿಸಿದೆ. ವಿಜಯಲಕ್ಷ್ಮೀ ಫಾಲೋವರ್ಸ್ ಹಾಕಿದ್ದ ಅದೊಂದು ಕಾಮೆಂಟ್ ಪವಿತ್ರಾ ಗೌಡ ಅವರನ್ನು ಕೆರಳಿಸಿದಂತೆ ಕಾಣಿಸುತ್ತಿದೆ.

Pavithra gowda responds to vijayalakshmi fans comment

ಅಂದಹಾಗೆ ಇತ್ತೀಚೆಗೆ ನಟ ದರ್ಶನ್ ಕೇರಳದಲ್ಲಿ ಶತ್ರು ಸಂಹಾರ ಪೂಜೆ ನೆರವೇರಿಸಿದ್ದರು. ಇದರ ಬೆನ್ನಲ್ಲೆ ಪವಿತ್ರಾ ಗೌಡ ಯುಗಾದಿಯಂದೇ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಹೋಮ ಹವನ ಮಾಡಿಸಿದ್ದಾರೆ. ಬಳಿಕ ಹಾಕಿರುವ ಪೋಸ್ಟ್ ಸದ್ಯ ಚರ್ಚೆಯ ವಿಷಯವಾಗಿದೆ.

ಯುಗಾದಿಯಂದು ಪವಿತ್ರಾ ಗೌಡ ಪೋಸ್ಟ್‌ವೊಂದನ್ನು ಹಾಕಿದ್ದರು. ಆ ಪೋಸ್ಟ್‌ನಲ್ಲಿ 'ಕೆಟ್ಟ ದೃಷ್ಟಿ ಯಾವಾಗಲೂ ನನ್ನನ್ನು ನೋಡುತ್ತಿರುತ್ತದೆ. ಆದರೆ ಅದು ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ನೆಗೆಟಿವಿಟಿಯೇ ತುಂಬಿರುವ ಈ ಜಗತ್ತಿನಲ್ಲಿ ನಿಮ್ಮ ದೃಷ್ಟಿ ಪಾಸಿಟಿವಿಟಿಯಿಂದ ಮಿಂಚಲಿ' ಎಂದು ಬರೆದಿದ್ದರು. ಅಷ್ಟಕ್ಕೂ ಪವಿತ್ರಾ ಗೌಡ ಈ ರೀತಿ ಪೋಸ್ಟ್ ಹಾಕಲು ಕಾರಣವಿದೆ.

ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ವಿಜಯಲಕ್ಷ್ಮೀ ಶೇರ್ ಮಾಡಿದ ಫೋಟೋಗೆ ಫ್ಯಾನ್ ಒಬ್ಬರು ಕಾಮೆಂಟ್ ಮಾಡಿದ್ದರು. ಅಭಿಮಾನಿ ತಮ್ಮ ಕಾಮೆಂಟ್‌ನಲ್ಲಿ- 'ಯಾರ ಕಣ್ಣು ನಿಮ್ಮ ಮೇಲೆ ಬೀಳದೆ ಇರಲಿ' ಎಂದು ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರ ಫೋಟೋಗೆ ಕಾಮೆಂಟ್ ಮಾಡಿದ್ದರು. ಈ ಕಾಮೆಂಟ್ ನೋಡಿ ಪವಿತ್ರಾ ಗೌಡ ಕೌಂಟರ್ ಕೊಟ್ಟು 'ಕೆಟ್ಟ ದೃಷ್ಟಿ ತಾಗಲ್ಲ' ಎಂದು ಪೋಸ್ಟ್ ಮಾಡಿದ್ರಾ ಎಂಬ ಪ್ರಶ್ನೆ ಮೂಡಿದೆ.

Pavithra gowda responds to vijayalakshmi fans comment

ಪವಿತ್ರಾ ಗೌಡ ಕಳೆದ ವರ್ಷ ಇದೇ ಸಮಯಕ್ಕೆ ನಮ್ಮ ಸಂಬಂಧಕ್ಕೆ ಹತ್ತು ವರ್ಷ ಎಂದು ಬರೆದು ಪೋಸ್ಟ್ ಮಾಡಿದ್ದರು. ದರ್ಶನ್ ಅವರೊಂದಿಗಿನ ಪೋಟೋಗಳನ್ನೂ ಹಂಚಿಕೊಂಡಿದ್ದರು. ಆದರೆ ಈಗ ಕೇವಲ ಒಂದು ವರ್ಷದಲ್ಲಿ ಎಲ್ಲವೂ ಬದಲಾಗಿದೆ. ಪವಿತ್ರಾ ಗೌಡಾಗೆ ದರ್ಶನ್ ದರ್ಶನ ನೀಡಿ ಅನೇಕ ದಿನಗಳೇ ಕಳೆದು ಹೋಗಿವೆ. ಹೀಗಾಗಿ ಪೋಸ್ಟ್ ಮೂಲಕ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮೀ ಅವರೊಂದಿಗೆ ಮತ್ತೆ ವಾರ ಶುರು ಮಾಡಿದ್ರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಒಟ್ಟಿನಲ್ಲಿ ಶತ್ರು ಸಂಹಾರಕ್ಕಾಗಿ ಎರಡೂ ಕಡೆ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಯುಗಾದಿ ಪೋಸ್ಟ್ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+