Pavithra Gowda: 'ಪವಿತ್ರಾ ಗೌಡ ಪ್ರೆಗ್ನೆಂಟ್' - ಗರ್ಭಿಣಿಯಾಗುವ ಸೂಚನೆಗಳು ಯಾವುವು?
ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲೂ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಪ್ರೇಮ ವಿಚಾರ ಭಾರೀ ಸುದ್ದಿಯಾಗುತ್ತಿದೆ. ಅಲ್ಲದೆ ಇವರಿಬ್ಬರ ನಡುವಿನ ಪ್ರೀತಿಯೇ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲ್ಲಲು ಕಾರಣ ಎನ್ನುವ ಮಾತುಗಳು ಕೇಳಿ ಬಂದಿವೆ. ಇದರ ನಡುವೆ ಪವಿತ್ರಾ ಗೌಡ ಗರ್ಭಿಣಿ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಾಗಾದರೆ ಗರ್ಭಿಣಿಯಾಗುವ ಸೂಚನೆಗಳು ಯಾವುವು? ಈ ಸೂಚನೆಗಳು ಪವಿತ್ರಾ ಗೌಡ ಅವರಿಗೆ ಇದಿಯಾ? ಇದೆಲ್ಲದರ ಬಗ್ಗೆ ತಿಳಿಯೋಣ.
ಪವಿತ್ರಾ ಗೌಡ ಸ್ಯಾಂಡಲ್‌ವುಡ್ ನಟಿ. ಆದರಿವರು ಯಾವುದೇ ಸಿನಿಮಾಗಳಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಗುರುತಿಸಿಕೊಂಡಿಲ್ಲ. ಕೆಲ ಸಿನಿಮಾಗಳಲ್ಲಿ ನಟಿಯಾಗಿ ನಟಿಸಿದ್ದು ಬಿಟ್ಟರೆ ಇವರು ಹೆಚ್ಚು ಸುದ್ದಿಯಾಗಿದ್ದು ನಟ ದರ್ಶನ್ ತೂಗುದೀಪ್ ವಿಚಾರದಲ್ಲಿ. ಹೌದು... ಖ್ಯಾತ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ಹೀಗಾಗಿನೇ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಕಾಮೆಂಟ್ ಮಾಡಿದ ರೇಣುಕಾಸ್ವಾಮಿಯನ್ನು ದರ್ಶನ್ ಹಾಗೂ ಅವರ ಗ್ಯಾಂಗ್ ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ. ಆದರೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದೆ.

ಅದೇನೆಂದರೆ ಪವಿತ್ರಾ ಗೌಡ ಮತ್ತೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಈ ಗಾಳಿ ಸುದ್ದಿ ನಿಜವೋ ಸುಳ್ಳೊ ಗೊತ್ತಿಲ್ಲ. ಆದರೆ ಪವಿತ್ರಾ ಗೌಡ ಪೊಲೀಸ್ ವಿಚಾರಣೆ ವೇಳೆ ಮಾವಿನ ಕಾಯಿ ಕೇಳಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಪವಿತ್ರಾ ಗೌಡ ಗರ್ಭಿಣಿ ಆಗಿರುವುದಕ್ಕೆನೇ ಅವರು ಮಾವಿನ ಕಾಯಿ ಕೇಳಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಹಾಗಾದರೆ ಪವಿತ್ರಾ ಗೌಡ ಅವರು ಮಾವಿನ ಕಾಯಿ ಬೇಕು ಅಂತ ಕೇಳಿದ್ದು ನಿಜನಾ?
'ಮಾವಿನ ಕಾಯಿ ಕೇಳಿದ ಪವಿತ್ರಾ ಗೌಡ'
ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದರು ಎಂಬುದಕ್ಕೆ ಯಾವುದೇ ನಿಖರ ಮಾಹಿತಿ ಇಲ್ಲ. ಹಾಗೊಂದು ವೇಳೆ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದ್ದರೆ ಅವರನ್ನು ತಪಾಸಣೆಗೆ ಒಳಪಡಿಸಿ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಅಂತಹ ಯಾವುದೇ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿಲ್ಲ. ಹೀಗಿದ್ದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗರ್ಭಿಣಿ ಎಂಬ ಗಾಳಿ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಹಾಗಾದರೆ ಮಾವಿನ ಕಾಯಿ ತಿಂದರೆ ಗರ್ಭಿಣಿ ಅಂತ ಅರ್ಥನಾ? ಗರ್ಭಿಣಿಯಾಗುವ ಸೂಚನೆಗಳೇನು?
ಮಾವಿನ ಕಾಯಿ ಕೇಳಿದರೆ ಗರ್ಭಿಣಿ ಅಂತ ಅರ್ಥನಾ?
ಸಾಮಾನ್ಯವಾಗಿ ಗರ್ಭಿಣಿಯ ಮಹಿಳೆಯರಿಗೆ ಮಾವಿನ ಕಾಯಿ ತಿನ್ನುವ ಬಯಕೆಯಾಗುತ್ತದೆ. ಇದು ಎಲ್ಲರಿಗೂ ಇರಬೇಕೆಂದಿಲ್ಲ. ಅಥವಾ ಮಾವಿನ ಕಾಯಿ ಕೇಳಿದವರೆಲ್ಲರೂ ಗರ್ಭಿಣಿ ಎಂದರ್ಥವಲ್ಲ. ಸಾಮಾನ್ಯವಾಗಿ ಬಹುತೇಕ ಗರ್ಭಿಣಿ ಮಹಿಳೆಯರು ಮಾವಿನ ಕಾಯಿ ತಿನ್ನಲು ಬಯಸುತ್ತಾರೆಂಬ ಕಾರಣಕ್ಕೆ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದರೆಂದು ಟ್ರೋಲ್ ಮಾಡಲಾಗಿದೆ.

ಆದರೆ ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದರು ಎಂಬುದಕ್ಕೆ ಯಾವುದೇ ನಿಖರ ಮಾಹಿತಿ ಇಲ್ಲ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಯಾಕಿಂತ ವಿಚಾರ ಬಂತು ಎಂಬ ಪ್ರಶ್ನೆ ಕಾಡತೊಡಗಿದೆ. ಅಂದಹಾಗೆ ಪವಿತ್ರಾ ಗೌಡ ಅವರಿಗೆ ಈಗಾಗಲೇ ಬೇರೆಯವರೊಂದಿಗೆ ಮದುವೆಯಾಗಿದ್ದು ಅವರಿಬ್ಬರಿಗೆ ಒಬ್ಬ ಮಗಳೂ ಇದ್ದಾಳೆ. ಪವಿತ್ರಾ ತಮ್ಮ ಮೊದಲ ಪತಿ ಸಂಜಯ್ ಸಿಂಗ್ ಅವರೊಂದಿಗೆ ವಿಚ್ಚೇದನ ಪಡೆದಿದ್ದಾರೆ. ಜೊತೆಗೆ ತಮ್ಮ ಮಗಳೊಂದಿಗೆ ವಾಸ ಮಾಡುತ್ತಿದ್ದರು.
ಬಳಿಕ ಪವಿತ್ರಾ ಹಾಗೂ ನಟ ದರ್ಶನ್ ನಡುವೆ ಪ್ರೀತಿ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ. ಹೀಗಿರುವಾಗ ಪವಿತ್ರಾ ಗೌಡ ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದ್ದು ಭಾರೀ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ಗರ್ಭಿಣಿಯಾಗುವ ಸೂಚನೆಗಳೇನು? ಒಬ್ಬ ಗರ್ಭಿಣಿಗಿರುವ ಸೂಚನೆಗಳೆಲ್ಲವೂ ಪವಿತ್ರಾ ಗೌಡಗೆ ಇದಿಯಾ?
ಗರ್ಭಿಣಿಗಿರುವ ಸೂಚನೆಗಳೆಲ್ಲವೂ ಪವಿತ್ರಾ ಗೌಡಗೆ ಇದಿಯಾ?
ಮಗು ತಾಯಿಯ ಗರ್ಭದಲ್ಲಿ ನೆಲೆಯಾಗುವಾಗ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ವಾಂತಿ, ತಲೆ ನೋವು, ಊಟ-ತಿಂಡಿ ಬೇಡ ಎನಿಸುವುದು, ಹೊಟ್ಟೆ ನೋವು, ಬೆನ್ನು ನೋವು, ತಲೆ ನೋವು, ಆಯಾಸದ ಅನುಭವ ಹೀಗೆ ವಿವಿಧ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ.

ಹೀಗಾಗಿ ಒಂದು ವೇಳೆ ಇದರಲ್ಲಿ ಒಂದೇ ಒಂದು ಲಕ್ಷಣ ಪವಿತ್ರಾ ಗೌಡ ಅವರಲ್ಲಿ ಕಾಣಿಸಿಕೊಂಡಿದ್ದರೂ ಅವರನ್ನು ಜೈಲಲ್ಲಿ ಇಡುವ ಬದಲಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಆಗಿರುವ ಬಗ್ಗೆ ಯಾವುದೇ ಖಚಿತ ಮಾಹಿತಿಗಳು ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಳ್ಳು ಸುದ್ದಿ ವೈರಲ್ ಮಾಡುತ್ತಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿದೆ.












Click it and Unblock the Notifications