Pavithra Gowda: ಒಬ್ಬೊಂಟಿಯಾದ ಪವಿತ್ರಾ ಗೌಡ: ಮೇಲಿಂದ ಮೇಲೆ ಟೆಂಪಲ್ ರನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಡಿ-ಗ್ಯಾಂಗ್ ಲಾಕ್ ಆಗಿ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಸಂಬಂಧ ನುಚ್ಚು ನೂರಾಗಿದೆ. ಅಲ್ಲಿಂದಲೇ ಇಬ್ಬರೂ ಮುಖ ನೋಡದಷ್ಟು ದೂರವಾಗಿ ಹೋಗಿದ್ದಾರೆ. ಒಬ್ಬೊಂಟಿಯಾದ ಪವಿತ್ರಾ ಗೌಡ ಜೈಲಿನಿಂದ ಹೊರ ಬಂದ ಬಳಿಕ ಮೇಲಿಂದ ಮೇಲೆ ಟೆಂಪಲ್ ರನ್ ಶುರು ಮಾಡಿದ್ದಾರೆ.
ಹೌದು... ಆಕಡೆ ಸುಪ್ರೀಂ ಕೋರ್ಟ್‌ನಲ್ಲಿ ಬಿಗ್ ರಿಲೀಫ್ ಸಿಗುತ್ತಿದ್ದಂತೆ ಈ ಕಡೆ ಪವಿತ್ರಾ ಗೌಡ ಟೆಂಪಲ್ ರನ್ ಮಾಡುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ ದೆಹಲಿಗೆ ಹೋಗಿ ಪವಿತ್ರಾ ಗೌಡ ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದರು. ದರ್ಶನದ ಮೊದಲ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಇಲ್ಲಿಂದ ಸೀದಾ ವೈಷ್ಣವ ದೇವಿ ದರ್ಶನಕ್ಕೆ ಹೋಗೋ ಪ್ಲ್ಯಾನ್ ಮಾಡಿದ್ದಾರೆ. ನಂತರ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ಅಲ್ಲಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲು ಪ್ಲ್ಯಾನ್ ಮಾಡಿದ್ದಾರಂತೆ.

ಒಬ್ಬೊಂಟಿಯಾದ ಪವಿತ್ರಾ ಗೌಡ
ಜೈಲಿನಿಂದ ಹೊರ ಬಂದ ಬಳಿಕ ಪವಿತ್ರಾ ಗೌಡ ಒಬ್ಬೊಂಟಿಯಾಗಿದ್ದಾರೆ. ಆರ್‌ಆರ್ ನಗರಕ್ಕೂ ಹೋಗುತ್ತಿಲ್ಲ. ಸುಬ್ಬನ ಸುಳಿಯೂ ಇಲ್ಲ. ಒಂದು ಕಾಲದಲ್ಲಿ ಪವಿತ್ರಾ ಗೌಡ ಆರ್‌ಆರ್ ನಗರದಲ್ಲಿ ಮಹಾರಾಣಿಯಂತೆ ಇದ್ದವರು. ಸುಬ್ಬನ ಸಾರಾಥ್ಯದಲ್ಲಿದ್ದ ಸುಬ್ಬಿ ಪ್ರಪಂಚವನ್ನೇ ಗೆದ್ದ ಖುಷಿಯಲ್ಲಿ ಇದ್ದವರು. ಆದರೀಗ ಅದ್ಯಾವ ಖುಷಿಯೂ ಇಲ್ಲ. ಸುಬ್ಬನ ಸ್ನೇಹವೂ ಇಲ್ಲ. ಜೈಲಿನಿಂದ ಬಂದ ತಿಂಗಳು ಕಳೆದು ಹೋದರೂ ಕೂಡ ಮಾತಿಲ್ಲ ಕತೆಯಿಲ್ಲ. ಕೋರ್ಟ್ ಅಂಗಳದಲ್ಲಿ ದಾಸನ ಮುಖ ನೋಡಿದ್ದು ಬಿಟ್ಟರೆ ಮತ್ತೆಂದು ದರ್ಶನ್ ಮುಖ ನೋಡಿಲ್ಲ. ಹೀಗಾಗಿ ಸುಬ್ಬ ಸುಬ್ಬಿಯ ಚಾಪ್ಟರ್ ಕ್ಲೋಸ್ ಅಂತ ಎಲ್ಲರು ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಯಾರು?
ದರ್ಶನ್‌ಗೆ ಅಷ್ಟದಿಗ್ಬಂಧನ ಹಾಕಿದ ವಿಜಯಲಕ್ಷ್ಮೀ
ಪವಿತ್ರಾ ದರ್ಶನ್ ಸಹವಾಸಕ್ಕೆ ಬಾರದಿರಲು ವಿಜಯಲಕ್ಷ್ಮೀ ಅಷ್ಟದಿಗ್ಬಂಧನ ಹಾಕಿದ್ದಾರೆ. ಗಂಡನನ್ನು ಸೆರಗಿನಲ್ಲಿ ಕಟ್ಟಿಕೊಂಡ ವಿಜಯಲಕ್ಷ್ಮೀ ಸಾರಥಿಯ ಸುತ್ತ ಏಳು ಸುತ್ತಿನ ಬೇಲಿ ಹಾಕಿದ್ದಾರೆ. ಆ ಬೇಲಿ ದಾಟಿ ಹೋಗಲು ದರ್ಶನ್‌ಗೂ ಆಗುತ್ತಿಲ್ಲ. ಅದನ್ನು ಭೇದಿಸಿ ಸುಬ್ಬನನ್ನು ಭೇಟಿ ಮಾಡಲು ಸುಬ್ಬಿಗೂ ಆಗುತ್ತಿಲ್ಲ. ದರ್ಶನ್ ಎಲ್ಲೇ ಹೋದರು ವಿಜಯಲಕ್ಷ್ಮೀ ನೆರಳಾಗಿ ನಿಲ್ತಾಯಿದ್ದಾರೆ. ಆರ್‌ಆರ್ ನಗರ ನಿವಾಸಕ್ಕೂ ಹೋಗಲು ಬಿಡದೇ ತನ್ನ ಮನೆಯಲ್ಲೇ ಇರುವಂತೆ ಮಾಡಿದ್ದಾರೆ.
ಭಗವದ್ಗೀತೆ ಸಂದೇಶ ಪವಿತ್ರಾ ಆಕ್ರೋಶ
ಇದೇ ಹೊತ್ತಿನಲ್ಲಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಭಗವದ್ಗೀತೆಯ ಸಂದೇಶವೊಂದನ್ನು ಹಾಕಿಕೊಂಡಿದ್ದಾರೆ. ಅರ್ಜುನನಿಗೆ ಗೀತೋಪದೇಶ ಮಾಡುವ ಫೋಟೋ ಹಾಕಿ ಒಂದೆರೆಡು ಸಾಲುಗಳನ್ನು ಗೀಚಿದ್ದಾರೆ. ''ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ, ಮೇಲೊಬ್ಬ ಎಲ್ಲವನ್ನೂ ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೂ ನ್ಯಾಯ ನೀಡುವನು'' ಎಂದು ಗೀತೋಪದೇಶದ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಪವಿತ್ರಾ ಪೋಸ್ಟ್ ಹಿಂದೆ ಸಾರಥಿಯ ನೋವಿದೆ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಿರುವ ಪವಿತ್ರಾ ಗೌಡ ತಮ್ಮ ಮನದಾಳದ ಮಾತುಗಳನ್ನು ಹೊರ ಹಾಕುತ್ತಿರುವಂತೆ ಕಾಣಿಸುತ್ತಿದೆ.
ಡಿ-ಗ್ಯಾಂಗ್‌ಗೆ ಬಿಗ್ ರಿಲೀಫ್
ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೈಲುವಾಸ ಅನುಭವಿಸಿ ಜಾಮೀನು ಪಡೆದು ಹೊರಬಂದರೂ ಕಣ್ತುಂಬ ನಿದ್ದೆ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಏನಾಗುತ್ತೋ ಅಂತ ಭಯದಲ್ಲಿ ಇದ್ದ ಡಿ-ಗ್ಯಾಂಗ್‌ಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್‌ಗೆ ಸುಪ್ರೀಂ ಕೋರ್ಟ್ ಕಳೆದ ದಿನ ಬಿಗ್ ರಿಲೀಫ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳಲ್ಲಿ ದರ್ಶನ್, ಪವಿತ್ರಾ ಗೌಡ, ನಾಗರಾಜು, ಲಕ್ಷ್ಮಣ್, ಜಗದೀಶ್ ಹಾಗೂ ಪ್ರದೂಷ್ ಪ್ರಮುಖರು. ಇವರಿಗೆಲ್ಲಾ ಕೊಲೆ ಕೇಸ್‌ನಲ್ಲಿ ಹೈಕೋರ್ಟ್ ರೆಗ್ಯೂಲರ್ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದರಿಂದ ಭಯದಲ್ಲಿದ್ದ ಡಿ-ಗ್ಯಾಂಗ್‌ಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಇದರಿಂದ ಡಿ-ಗ್ಯಾಂಗ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಇದೇ ಖುಷಿಯಲ್ಲಿ ಪವಿತ್ರಾ ಟೆಂಪಲ್ ರನ್ ಶುರು ಮಾಡಿದ್ದಾರೆ.












Click it and Unblock the Notifications