Pavithra Gowda: ಎ1 ಆರೋಪಿ ದರ್ಶನ್‌ ಗೆಳತಿಗೆ ಬಿಗ್ ಶಾಕ್; ಪವಿತ್ರಾ ಗೌಡಗೆ ಜೈಲೇ ಗತಿ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಸದ್ಯ ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾದಾಗ ಪವಿತ್ರಾ ಗೌಡ, ದರ್ಶನ್ ಪ್ರದೋಷ್ ಸೇರಿ 17 ಜನರು ಆರೋಪಿಗಳಾಗಿದ್ದರು. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಅರೆಸ್ಟ್ ಆಗಿ ಆರು ತಿಂಗಳು ಪರಪ್ಪನ ಅಗ್ರಹಾರ ಸೇರಿದ್ದ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕಿದ ನಂತರ ಪವಿತ್ರಾ ಗೌಡ ತಾನಾಯ್ತು, ತನ್ನ ಕುಟುಂಬ, ಬ್ಯುಸಿನೆಸ್, ಟೆಂಪಲ್ ರನ್ ಅಂತ ತಕ್ಕಮಟ್ಟಿಗೆ ಹಾಯಾಗಿದ್ದರು. ಆದರೆ ಸುಪ್ರೀಂ ಶಾಕ್ ಕೊಟ್ಟಿತ್ತು. ಇದೀಗ ದರ್ಶನ್‌ , ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜೈಲಿನಲ್ಲಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಮೊರೆ ಹೋಗಿದ್ದರು. ಅಲ್ಲಿ ಸುಪ್ರೀಂ ವಿಚಾರಣೆ ನಂತರ ದರ್ಶನ್, ಪವಿತ್ರಾ ಗೌಡ ಸೇರಿ 7 ಜನರ ಜಾಮೀನು ರದ್ದು ಮಾಡಿ ಅರೆಸ್ಟ್ ಮಾಡಲು ತೀರ್ಪು ಕೊಟ್ಟಿತ್ತು. ಆಗಸ್ಟ್ 14ರಂದು ಪವಿತ್ರಾ ಗೌಡ ಅವರನ್ನು ಅವರ ಮನೆಯಿಂದಲೇ ಅರೆಸ್ಟ್ ಮಾಡಲಾಯ್ತು. ಹೇಗಾದರೂ ಸರಿ ಹೊರಗೆ ಬರಲೇಬೇಕು ಅಂತ ಪಣತೊಟ್ಟಿರುವಂತೆ ಕಾಣುತ್ತಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಪವಿತ್ರಾ ಗೌಡಗೆ ಬಿಗ್‌ ಶಾಕ್‌ ಎದುರಾಗಿದೆ.

Pavithra Gowda bail application rejected by court

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಕಾರಣ ಏಳು ಮಂದಿ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗಷ್ಟೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಅರ್ಜಿ ಹಾಕಿದ್ದರು ಆದರೆ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.

ನನ್ನಿಂದ ಯಾವುದೇ ತಪ್ಪು ಆಗಿಲ್ಲ. ತಮ್ಮಿಂದ ರೇಣುಕಾ ಸ್ವಾಮಿ ನಿಧನ ಹೊಂದಿಲ್ಲ ಎಂಬುದನ್ನೂ ಸೇರಿದಂತೆ, ತಾನು ಮಹಿಳೆ ಹಾಗೂ ಸಿಂಗಲ್ ಮದರ್ ಆಗಿದ್ದು, ಮಗಳ ಹತ್ತನೇ ತರಗತಿ ಓದುತ್ತಿದ್ದಾರೆ, ನನ್ನ ಪೋಷಕರ ಆರೈಕೆ ಮಾಡಬೇಕು ಇನ್ನಿತರೆ ಕಾರಣಗಳನ್ನು ಪವಿತ್ರಾ ಗೌಡ ನೀಡಿ, ಕೆಳ ಹಂತದ ನ್ಯಾಯಾಲಯದಲ್ಲಿ ಪವಿತ್ರಾ ಗೌಡ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಯಾವುದೇ ಕಾರಣವನ್ನು ನ್ಯಾಯಾಲಯ ಪರಿಗಣಿಸಿಲ್ಲ. ಪವಿತ್ರಾ ಅವರ ಜಾಮೀನು ಅರ್ಜಿಯನ್ನು ಕೆಳಹಂತದ ನ್ಯಾಯಾಲಯ ರದ್ದು ಮಾಡಿದೆ. ಇಂದು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಪವಿತ್ರ ಗೌಡ ಸಲ್ಲಿಸಿದ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ ಈ ಮೂಲಕ ಪವಿತ್ರ ಗೌಡಗೆ ಜೈಲೇ ಗತಿ ಎಂಬಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+