ನನ್ನ ಜೀವನದ ಕೆಲವು ರಹಸ್ಯಗಳು ಅವರಿಗೆ ಮಾತ್ರ ಗೊತ್ತಿತ್ತು : ಕಣ್ಣೀರಿಟ್ಟ ರೇಖಾ ದಾಸ್
ಕನ್ನಡ ಚಿತ್ರರಂಗದಲ್ಲಿ ತಮ್ಮ ಹಾಸ್ಯ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.ಹಲವು ದಿನಗಳಿಂದ ಬ್ಯಾಂಕ್ ಜನಾರ್ಧನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಹಿರಿಯ ನಟ ಬ್ಯಾಂಕ್ ಜನಾರ್ಧನ್ ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದು, ಬ್ಯಾಂಕ್ ಜನಾರ್ಧನ್ ಅವರ ನೆನೆದು ಹಿರಿಯ ನಟಿ ರೇಖಾ ದಾಸ್ ಅವರು ಕಣ್ಣೀರು ಹಾಕಿದ್ದಾರೆ.
ಬ್ಯಾಂಕ್ ಜನಾರ್ಧನ್ ಹಾಗೂ ರೇಖಾ ದಾಸ್ ಅವರಿಬ್ಬರ ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಅಪ್ಪ ಮಗಳಾಗಿ, ಗಂಡ ಹೆಂಡ್ತಿಯಾಗಿ, ಬ್ಯಾಂಕ್ ಜನಾರ್ಧನ್ ಅವರೊಂದಿಗೆ ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ರೇಖಾ ದಾಸ್ ನಟಿಸಿದ್ದಾರೆ. ರಿಯಲ್ ಲೈಫ್‌ನಲ್ಲೂ ಸಹ ಬ್ಯಾಂಕ್ ಜನಾರ್ಧನ್ ಹಾಗೂ ರೇಖಾ ದಾಸ್ ಅವರ ನಡುವೆ ತಂದೆ ಮಗಳ ಸಂಬಂಧವೇ ಇತ್ತು. ತಂದೆ ಸಮಾನರಾಗಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಕಳೆದುಕೊಂಡು ರೇಖಾ ದಾಸ್ ಅವರು ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ.

ಬ್ಯಾಂಕ್ ಜನಾರ್ಧನ್ ಅವರು ತೀರಿ ಹೋದ ವಿಷಯ ನನಗೆ ಗೊತ್ತೇ ಇರಲಿಲ್ಲ. ಹಿಂದಿನ ದಿನವೇ ಶೃಂಗೇರಿಗೆ ಹೊರಟಿದ್ದೆ ನಾನು. ಅಲ್ಲಿಗೆ ನಾನು ಐದೂವರೆಗೆ ರೀಚ್ ಆದೆ. ಅಲ್ಲಿ ನನಗೆ ಮೂರು ಗಂಟೆ ರೆಸ್ಟ್ ತಗೊಳ್ಳಿ ಆಮೇಲೆ ನಾನು ಹೇಳುತ್ತೇನೆ ಅಂದಿದ್ದರು. ನಾನು ಮಲಗಿದ್ದೆ. ಆಗ ಹಿರಿಯ ನಟಿ ಸಿತಾರಾ ಒಂದು ನ್ಯೂಸ್ ಇದೆ ಅಂತ ಎಬ್ಬಿಸಿದ್ದಳು. ಏನಾಯ್ತು ಅಂತ ಕೇಳಿದಾಗ, ನಿಮ್ಮ ಪಪ್ಪಾ ಹೊರಟು ಹೋದರಂತೆ ಅಂದಳು. ಅದನ್ನು ಹೇಳಿದಾಗ ತಲೆ ಮೇಲೆ ಬಂಡೆ ಬಿದ್ದ ಹಾಗೆ ಆಯ್ತು. ನ್ಯೂಸ್ ನೋಡುತ್ತಿದ್ದೆ. ಅದನ್ನು ಕನ್ಫರ್ಮ್ ಮಾಡಿಕೊಳ್ಳುವ ಮುನ್ನವೇ ಕರೆಗಳು ಬರುವುದಕ್ಕೆ ಶುರುವಾಗಿತ್ತು ಎಂದು ಕಣ್ಣೇರಿಟ್ಟಿದ್ದಾರೆ.
ಬ್ಯಾಂಕ್ ಜನಾರ್ಧನ್ ಅವರ ನಿಧನರಾದ ಬಗ್ಗೆ ನನಗೆ ಗೊತ್ತಿರಲಿಲ್ಲ. ಪೋಷಕ ಕಲಾವಿದರ ಸಂಘಕ್ಕೆ ಫೋನ್ ಮಾಡಿದಾಗ ನಿಮ್ಮ ಪೊಪ್ಪ ಹೋಗ್ಬಿಟ್ರು. ಅದಾಗ ನನಗೆ ಜೋರಾಗಿ ಅಳು ಬಂತು. ಅಲ್ಲಿ ಶೂಟಿಂಗ್ ಮಾಡುತ್ತಿದ್ದವರೆಲ್ಲ ಓಡಿ ಬಂದರು. ಸಮಾಧಾನ ಮಾಡಿಕೊಳ್ಳಿ. ಟಿವಿಯವರೊಂದಿಗೆ ಮಾತಾಡಿ ಅಂತ ಹೇಳಿದರು. ನನಗೆ ಅವರ ಬಗ್ಗೆ ಏನು ಹೇಳುವುದು? ನನಗೆ ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ. ನನ್ನ ಜೀವನದ ರಹಸ್ಯಗಳು ಅವರಿಗೆ ಗೊತ್ತಿತ್ತು. ನನ್ನ ಜೀವನದ ಕೆಲವು ರಹಸ್ಯಗಳು, ವೈಯಕ್ತಿಕ ಸಮಸ್ಯೆಗಳು ಅದು ಅವರಿಗೆ ಬಿಟ್ಟರೆ, ಬೇರೆ ಯಾರಿಗೂ ಗೊತ್ತಿಲ್ಲ. ಅದು ಅವರಲ್ಲಿಯೇ ಹೊರಟು ಹೋಯ್ತು ಎಂದು ಹೇಳಿದ್ದಾರೆ.
ನಾನು ಬದುಕಿರುವವರೆಗೂ ನನ್ನಲ್ಲಿ ಇರುತ್ತೆ. ನಾನು ಸತ್ತಾಗ ನನ್ನಲ್ಲೇ ಹೊರಟು ಹೋಗುತ್ತೆ ಅಂತ. ಆ ರೀತಿ ಇದ್ವಿ ನಾವು. ಕಷ್ಟ ಸುಖವನ್ನು ಹಂಚಿಕೊಳ್ಳುತ್ತಿದ್ವಿ. ಎಷ್ಟೋ ಬಾರಿ ಅವರು ಆಸ್ಪತ್ರೆಗೆ ದಾಖಲಾದಾಗ ನಾನು ಓಡಿ ಹೋಗುತ್ತಿದ್ದೆ. ಅಯ್ಯೋ ನಿನಗೆ ಯಾರೇ ಹೇಳಿದರು? ನೀನು ಬರಬಾರದಾಗಿತ್ತು. ನೀನು ನೋಡಬಾರದು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಎಷ್ಟೋ ಸಲ ಅವರ ಮಗನಿಗೆ ಹೇಳುತ್ತಿದ್ದರು. ಯಾರಿಗೂ ಹೇಳುವುದಕ್ಕೆ ಹೋಗಬೇಡ ಅಡ್ಮಿಟ್ ಆಗಿದ್ದೀನಿ ಅಂತ ಹೇಳೋರು ಎಂದು ಹಿರಿಯ ನಟಿ ರೇಖಾ ದಾಸ್ ಕಣ್ಣೀರು ಹಾಕಿದ್ದಾರೆ.












Click it and Unblock the Notifications