darshan thoogudeepa: ನಟ ದರ್ಶನ್‌ ಭೇಟಿಯಾಗಲು ಇವರಿಗೆ ಮಾತ್ರ ಅವಕಾಶ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದಿರುವ ನಟ ದರ್ಶನ್ ತೂಗುದೀಪ ಅವರು ಆರೋಗ್ಯ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್‌ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಅವರು ಆಸ್ಪತ್ರೆಗೆ ಹೋಗಿಬರುತ್ತಿದ್ದು, ವೈದ್ಯರಿಗೆ ಮಹತ್ವದ ವಿಚಾರವೊಂದನ್ನು ಹೇಳಿದ್ದಾರೆ ಎನ್ನಲಾಗಿದೆ.

ಬಿಜಿಎಸ್ ಆಸ್ಪತ್ರೆಯ ವೈದ್ಯರಿಗೆ ಕೂಡ ವಿಜಯಲಕ್ಷ್ಮಿ ಅವರು ಖಡಕ್‌ ಸೂಚನೆ ನೀಡಿದ್ದಾರಂತೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್‌ ಅವರಿಗೆ ಒಂದು ರೀತಿ ಸರ್ಪಗಾವಲು ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಮಾಧ್ಯಮಗಳು ಹಾಗೂ ಇತರೆ ಮಂದಿಗೆ ದರ್ಶನ್‌ ಅವರ ಯಾವುದೇ ಮಾಹಿತಿ ಕೊಡಬಾರದು ಎಂದು ವಿಜಯಲಕ್ಷ್ಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Only 7 People Are Allowed To Meet Actor Darshan Thoogudeepa In The Hospital

ಬಿಜಿಎಸ್‌ ಆಸ್ಪತ್ರೆಯ 4ನೇ ಮಹಡಿಯಲ್ಲಿ ದರ್ಶನ್ ಅವರು ಚಿಕಿತ್ಸೆ ಪಡೆಯುತ್ತಿದ್ದು, ನೆಚ್ಚಿನ ನಟನನ್ನು ನೋಡಬೇಕು ಎಂದು ಹಲವರು ಆಸ್ಪತ್ರೆಯ ಬಳಿ ಬೀಡುಬಿಟ್ಟಿದ್ದಾರೆ. ದರ್ಶನ್‌ ಅವರ ಬಗ್ಗೆ ಮಾಧ್ಯಮಗಳಲ್ಲಿ ಸವಿಸ್ತಾರವಾಗಿ ಸುದ್ದಿ ಪ್ರಸಾರ ಆಗುತ್ತಿರುವ ಹಿನ್ನೆಲೆ ಅವರ ಜಾಮೀನಿಗೆ ಯಾವುದೇ ತೊಂದರೆ ಆಗಬಾರದು ಎಂದು ವಿಜಯಲಕ್ಷ್ಮಿ ಅವರು ಈ ಉಪಾಯ ಮಾಡಿದ್ದಾರಂತೆ.

ಇನ್ನು ದರ್ಶನ್‌ ಅವರನ್ನು ಭೇಟಿಯಾಗಲು ಕೇವಲ ಏಳು ಜನರಿಗಷ್ಟೇ ಅವಕಾಶ ನೀಡುವಂತೆ ಅಲ್ಲಿನ ವೈದ್ಯರು ಹಾಗೂ ಭದ್ರತಾ ಸಿಬ್ಬಂದಿಗೆ ವಿಜಯಲಕ್ಷ್ಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ದರ್ಶನ್‌ ಇರುವ ವಿಶೇಷ ವಾರ್ಡ್‌ಗೆ ತಮ್ಮ ಹೆಸರು ಎಂಟ್ರಿ ಮಾಡಿದರೆ ಮಾತ್ರವೇ ಇವರನ್ನು ಒಳಗೆ ಹೋಗಲು ಅವಕಾಶ ನೀಡುವಂತೆ ರೂಲ್ಸ್‌ ಮಾಡಲಾಗಿದೆ.

Only 7 People Are Allowed To Meet Actor Darshan Thoogudeepa In The Hospital

ವಿಜಯಲಕ್ಷ್ಮಿ ಅವರೂ ಸೇರಿದಂತೆ ಒಟ್ಟು ಏಳು ಜನರಿಗೆ ಮಾತ್ರವೇ ದರ್ಶನ್‌ ಅವರನ್ನು ಭೇಟಿಯಾಗುವ ಅವಕಾಶ ನೀಡಲಾಗಿದೆ. ದರ್ಶನ್‌ ಅವರು ಪುತ್ರ ವಿನೀಶ್, ತಾಯಿ ಮೀನಾ ತೂಗುದೀಪ, ಸಹೋದರಿಯ ಪುತ್ರ ಚಂದ್ರು, ಸಹೋದರ ದಿನಕರ್‌ ತೂಗುದೀಪ, ನಟ ಹಾಗೂ ದರ್ಶನ್‌ ಆಪ್ತ ಧನ್ವೀರ್‌ ಹಾಗೂ ಸಂಬಂಧಿಕ ಸುಶಾಂತ್‌ ಅವರಿಗೆ ಮಾತ್ರವಷ್ಟೇ ದರ್ಶನ್‌ ಭೇಟಿಯಾಗಲು ಅನುವು ಮಾಡಿಕೊಡುವಂತೆ ವಿಜಯಲಕ್ಷ್ಮಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇವರಲ್ಲದೆ ಇನ್ಯಾರೇ ಬಂದರೂ ದರ್ಶನ್‌ ಅವರು ಭೇಟಿಗೆ ಅವಕಾಶ ಕೊಡಲೇಬೇಡಿ. ದರ್ಶನ್‌ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವ ಕಾರಣಕ್ಕೂ ಮಾಹಿತಿ ಹೊರಗೆ ಹೋಗಬಾರದು ಎಂದು ಖಡಕ್‌ ಆಗಿ ವಿಜಯಲಕ್ಷ್ಮಿ ಹೇಳಿದ್ದಾರೆ ಎನ್ನಲಾಗಿದೆ.

Only 7 People Are Allowed To Meet Actor Darshan Thoogudeepa In The Hospital

ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್‌ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂಬ ಕಾರಣಕ್ಕೆ ಹೈಕೋರ್ಟ್‌ ಅವರಿಗೆ ಮಧ್ಯಂತರ ಜಾಮೀನು ಕೊಟ್ಟಿತ್ತು.

ಜಾಮೀನಿಗೂ ಮುನ್ನ ಹಲವು ಷರತ್ತುಗಳನ್ನು ಕೋರ್ಟ್‌ ವಿಧಿಸಿದ್ದು, ಅದನ್ನು ಪಾಲಿಸುವುದು ದರ್ಶನ್‌ ಅವರಿಗೆ ಈಗಿರುವ ಸವಾಲು ಎನ್ನಲಾಗಿದೆ. ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿರುವ ದರ್ಶನ್‌ ಸದ್ಯ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆ ಅವರಿಗೆ ಕುಟುಂಬದಿಂದಲೂ ಟೈಟ್‌ ಸೆಕ್ಯೂರಿಟಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+