ಈಗ ಸಿನಿಮಾ ನೋಡೋರಿಗಿಂತ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ- ರಿಷಬ್ ಶೆಟ್ಟಿ
ಬೆಂಗಳೂರು, ಆಗಸ್ಟ್ 10: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ತೆರೆ ಕಂಡ ಎಲ್ಲಾ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಕಥೆ ಎಷ್ಟೇ ಚೆನ್ನಾಗಿದ್ದರೂ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿಲ್ಲ ಎನ್ನುವುದು ಎಲ್ಲಾ ನಿರ್ಮಾಪಕರು, ನಿರ್ದೇಶಕರು ಹಾಗೂ ಸಂಪೂರ್ಣ ಚಿತ್ರತಂಡದ ದೂರಾಗಿದೆ. ಜನ ಯಾಕೆ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವುದನ್ನು ಸದ್ಯ ಎಲ್ಲರ ಪ್ರಶ್ನೆಯಾಗಿದೆ. ಈವೊಂದು ಪ್ರಶ್ನೆ ಹಾಗೂ ಗೊಂದಲದ ಬಗ್ಗೆ ನಟ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.
ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, 'ಇವತ್ತು ಸಿನಿಮಾ ನೋಡುವವರಿಗಿಂತ ಸಿನಿಮಾ ಮಾಡುವವರು ಜಾಸ್ತಿ ಆಗಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಅವರಿಬ್ಬರೇ ಶೂಟಿಂಗ್ ಮಾಡುತ್ತಿರುತ್ತಾರೆ. ಅವರಿಬ್ಬರೇ ಎಡಿಟ್ ಮಾಡುತ್ತಿರುತ್ತಾರೆ, ಅವರಿಬ್ಬರೇ ಡೈಲಾಗ್ ಬರೆಯುತ್ತಾರೆ. ಅವರು ಒಂದು ಪಂಚ್ ಡೈಲಾಗ್ ಹೊಡೆದರೆ ಹೆಂಡತಿ ಒಂದು ಪಂಚ್ ಡೈಲಾಗ್ ಹೊಡೆಯುತ್ತಾರೆ. ಅವರೇ ಒಂದು ಹಾಡು ಬರೆಯುತ್ತಾರೆ. ಅದು ಮಿಲಿಯನ್ ಗಟ್ಟಲೆ ವೀವ್ಸ್ ಆಗುತ್ತದೆ. ಅದರಲ್ಲಿ ಕಮೆಂಟ್ಸ್ ಚೆಕ್ ಮಾಡುತ್ತಾ ಇರುತ್ತಾರೆ. ಅವರು ನಮಗಿಂತ ಬ್ಯೂಸಿ ಇರುತ್ತಾರೆ ಎಂದರು.

ಇವತ್ತಿನ ಸನ್ನಿವೇಶಕ್ಕೆ ನಮಗೆ ಪ್ರೇಕ್ಷಕರ ಜೊತೆಗೆ ಕಾಂಪಿಟೇಷನ್ ಇರುವುದು. ಅವರು ಸಕ್ಕಾಪಟ್ಟೆ ಅಪ್ಡೇಟ್ ಆಗಿರುತ್ತಾರೆ. ನಾನು ಇದನ್ನು ಮೂರ್ನಾಲ್ಕು ವರ್ಷಗಳ ಹಿಂದೆಯೇ ಹೇಳಿದ್ದೆ. ಇದೇ ಜಾಗದಲ್ಲಿ. ಆಡಿಯನ್ಸ್ ನಮಗಿಂತ ಎರಡು ಮೂರು ವರ್ಷ ಮುಂದೆ ಇರುತ್ತಾರೆ. ನಾವು ಮೂರು ವರ್ಷ ಹಿಂದೆ ಮಾಡಿರುವ ಕಥೆಯನ್ನು ಇವತ್ತು ತೆಗೆದುಕೊಂಡು ಬಂದು ಹೇಳುತ್ತೇವೆ. ನಮಗೂ ಪ್ರೇಕ್ಷಕರಿಗೂ ತುಂಬಾ ದೊಡ್ಡ ಗ್ಯಾಪ್ ಇದೆ. ಅದನ್ನು ನಾವು ಟ್ರೈ ಮಾಡಬೇಕು ಅಂತಾ ನಾನು ಅಂದುಕೊಳ್ಳುತ್ತೇನೆ ಎಂದು ಹೇಳಿದರು.
ಇನ್ನು ಕಥೆ ಚೆನ್ನಾಗಿದೆ ಜನ ಬರುತ್ತಿಲ್ಲ ಅಂದರೆ ಥಿಯೇಟರ್ ಎಕ್ಸ್‌ಪೀರೆನ್ಸ್ ಜನರಿಗೆ ಸಿಗುತ್ತಿಲ್ಲ. ಥಿಯೇಟರ್ ಎಕ್ಸ್‌ಪೀರೆನ್ಸ್ ಸಿಕ್ಕರೆ ಜನ ಬರುತ್ತಾರೆ. ನಾವು ಚಿತ್ರರಂಗದವರು ಜನರಿಗೆ ಬೈಯುವುದು ಮಾಡಿಕೊಂಡು ಕುಳಿತಿರುತ್ತಾರೆ. ಜನರಿಗೆ ಸಾವಿರ ಆಯ್ಕೆಗಳಿರುತ್ತದೆ. ನಿಮ್ಮ ಮೊಬೈಲ್‌ನ ಸ್ಕ್ರೀನ್ ಟ್ರೈಂ ಚೆಕ್ ಮಾಡಿದರೆ ಗೊತ್ತಾಗುತ್ತದೆ. ಜನರು ಮೊಬೈಲ್‌ನಲ್ಲಿ ಅಷ್ಟು ಎಂಗೇಜ್ ಆಗಿದ್ದಾರೆ ಎಂದು ಹೇಳಿದರು.












Click it and Unblock the Notifications