Puneeth Rajkumar: ಕನ್ನಡ ಚಿತ್ರರಂಗದಲ್ಲೇ ಪುನೀತ್ ರಾಜ್‌ಕುಮಾರ್‌ ರೀತಿ ಈ ವಿಷಯದಲ್ಲಿ ಯಾವ ನಟರೂ ಇಲ್ಲ: ರಕ್ಷಿತಾ

Puneeth Rajkumar: ನಟ, ದಿ. ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಕೆಲಸ ಮಾಡಿರುವ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹಲವು ವಿಷಯಗಳನ್ನು ನಟಿ ರಕ್ಷಿತಾ ಪ್ರೇಮ್ ಅವರು ಹಂಚಿಕೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ಅಪ್ಪು ಸಿನಿಮಾ ಮಾರ್ಚ್‌ 14ಕ್ಕೆ ರೀರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಅಪ್ಪು ಸಿನಿಮಾದ ನಟಿ ರಕ್ಷಿತಾ ಅವರ ಮೊದಲ ಸಿನಿಮಾ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುನೀತ್‌ ಅವರ ಜೊತೆ ನಟನೆ ಮಾಡುವುದಕ್ಕೆ ನನಗೆ ಕಷ್ಟವಾಗುತ್ತಿತ್ತು ಅಂತಲೂ ಅವರು ಹೇಳಿದ್ದಾರೆ. ಅವರು ಅಷ್ಟೊಂದು ಅದ್ಭುತವಾಗಿ ನಟಿಸುತ್ತಿದ್ದರು ಎಂದು ಹೇಳಿದ್ದಾರೆ.

ಅಪ್ಪು ನಾನು ನಟಿಸಿದ ಮೊದಲ ಸಿನಿಮಾ. ಮೊದಲ ಸಿನಿಮಾ ಅಂತ ಬಂದಾಗ ಎಲ್ಲರ ಲೈಫ್‌ನಲ್ಲೂ ಬ್ಯೂಟಿಫುಲ್‌ ಆಗಿ ಇರುತ್ತೆ. ಇದೇ ರೀತಿಯ ಅನುಭವ ನನಗೂ ಇತ್ತು. ಆ ಅನುಭವಗಳು ತುಂಬಾ ಡಿಫರೆಂಟ್ ಆಗಿತ್ತು ಅಂತ ಹೇಳಿದ್ದಾರೆ. ಅಪ್ಪು ಅವರ ಜೊತೆ ನಟಿಸುವುದು ಎನ್ನುವುದು ನನಗೆ ಡಬಲ್‌ ಖುಷಿಯ ವಿಷಯವಾಗಿತ್ತು. ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ನನ್ನ ಅಪ್ಪ ಮತ್ತು ಅಮ್ಮ ಕೆರಿಯರ್ ಸ್ಟಾರ್ಟ್‌ ಮಾಡಿದ್ದರು. ನನ್ನ ಸಿನಿಮಾ ಕೆರಿಯರ್‌ ಸಹ ಅಲ್ಲಿಂದಲೇ ಪ್ರಾರಂಭವಾಯಿತು ಅಂತ Tv9ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

No Actor in Kannada Cinema Can Dance like Puneeth Rajkumar Rakshita

ಪುನೀತ್‌ರಂತೆ ಡ್ಯಾನ್ಸ್‌ ಮಾಡುವವರು ಇಲ್ಲ!

ಪಾರ್ವತಮ್ಮ ರಾಜ್‌ಕುಮಾರ್‌ ಅವರು ನನಗೆ ಯಾವಾಗಲೂ ಸ್ಫೂರ್ತಿ. ಅಪ್ಪು ಅಂತಹ ಸಿನಿಮಾವನ್ನು ನೆನಪಿಕೊಂಡಾಗ, ಇಲ್ಲ ಸಿನಿಮಾ ಅಂತ ನೆನಪಿಸಿಕೊಂಡಾಗ ಬ್ಯೂಟಿಫುಲ್ ಮೂಮೆಂಟ್ಸ್‌ ನೆನಪಾಗುತ್ತೆ ಅಂತ ಅವರು ಹೇಳಿದ್ದಾರೆ. ಅಪ್ಪು ಅವರು ಅದ್ಭುತ ನಟ, ಫೈಟರ್ ಹಾಗೂ ಡ್ಯಾನ್ಸರ್‌. ಅವರ ಜೊತೆ ನಟಿಸುವುದಕ್ಕೆ ಮತ್ತು ಡ್ಯಾನ್ಸ್‌ ಮಾಡುವುದಕ್ಕೆ ತುಂಬಾನೇ ಕಷ್ಟವಾಗುತ್ತಿತ್ತು. ಅವರು ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದರು. ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಅಷ್ಟೊಂದು ಅದ್ಭುತವಾಗಿ ಡ್ಯಾನ್ಸ್‌ ಮಾಡುವವರು ಯಾರು ಇಲ್ಲ ಅಂತ ಅವರು ಹೇಳಿದ್ದಾರೆ. ಅಪ್ಪು ಅವರ ರೀತಿ ಇಂದಿಗೂ ಯಾರು ಡ್ಯಾನ್ಸ್‌ ಮಾಡುವವರು ಇಲ್ಲ ಎಂದು ಅವರ ಡ್ಯಾನ್ಸ್‌ನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಆ ಸಿನಿಮಾ 23 ವರ್ಷವಾದ ಮೇಲೆ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಅಪ್ಪು ಅವರ 50ನೇ ಬರ್ತಡೇ ದಿನ ಬಿಡುಗಡೆಯಾಗುತ್ತಿದೆ. ಇದಕ್ಕಿಂತಲೂ ವಿಶೇಷವಾಗಿರುವುದು ಇನ್ನೇನು ಬೇಕು. ನಾನು ಖಂಡಿತವಾಗಿಯೂ ಮೊದಲ ದಿನ ಮೊದಲ ಶೋ ನೋಡುತ್ತೇನೆ. ಹೊಸ ಇತಿಹಾಸವನ್ನು ಸೃಷ್ಟಿ ಮಾಡೋಣ ಅಂತ ಅವರು ಹೇಳಿದ್ದಾರೆ.

ಅಪ್ಪು ರೀರಿಲೀಸ್‌ಗೆ ಭರ್ಜರಿ ರೆಸ್ಪಾನ್ಸ್‌

ನಟ ಪುನೀತ್‌ ರಾಜ್‌ ಕುಮಾರ್‌ ಅವರು ನಟಿಸಿದ್ದ ಅಪ್ಪು ಸಿನಿಮಾ ಶುಕ್ರವಾರ ಮಾರ್ಚ್‌ 14ಕ್ಕೆ ರೀರಿಲೀಸ್‌ ಆಗುತ್ತಿದ್ದು. ಅಭಿಮಾನಿಗಳು ಈ ಸಿನಿಮಾ ನೋಡುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಬರೋಬ್ಬರಿ 23 ವರ್ಷಗಳ ನಂತರ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಅಲ್ಲದೆ ನಾಳೆ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವೂ ಆಗಿರುವುದರಿಂದ ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ಗೆ ವಿಶೇಷ ಗೌರವ ಸೂಚಿಸಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+