ಹುಡಗಿಯರ ಜೊತೆ ಮಾತ್ರವಲ್ಲ ಹುಡಗರ ಜೊತೆಗೂ ಮಿಸ್ ಬಿಹೇವಿಯರ್ ಆಗುತ್ತೆ- ನಯನಾ ನಾಗರಾಜ್
ನಯನಾ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೆಚ್ಚು ಸುದ್ದಿಯಲ್ಲಿದ್ದಾರೆ. ಗಿಣಿರಾಮ ಧಾರಾವಾಹಿಯಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದ ನಯನಾ ನಾಗರಾಜ್ ತಮ್ಮ ಸಿಹಿ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ಅವರು ಹೆಣ್ಣು ಮಕ್ಕಳ ಮೇಲೆ ಆಗುವ ಶೋಷಣೆಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರವಲ್ಲ ಗಂಡು ಮಕ್ಕಳ ಮೇಲೂ ಶೋಷಣೆಯಾಗುತ್ತಿದೆ ಎಂದು ನಯನಾ ನಾಗರಾಜ್ ಹೇಳಿಕೊಂಡಿದ್ದಾರೆ.
ರಾಜೇಶ್ ರಿವೀಲ್ಸ್ ಸಂದರ್ಶನದಲ್ಲಿ ಮಾತನಾಡಿದ ನಯನಾ ಈಗಿನ ಹೆಣ್ಣು ಮಕ್ಕಳನ್ನು ಯಾವ ರೀತಿ ಬೆಳಸಬೇಕು? ಯಾವ ರೀತಿ ತಿಳಿ ಹೇಳಬೇಕು ಎಲ್ಲವನ್ನೂ ಹಂಚಿಕೊಂಡಿದ್ದಾರೆ. ನಯನಾ ಹತ್ತನೇ ತರಗತಿ ಓದುವಾಗ ತಂದೆಯೊಂದಿಗೆ ಶಿವಾಜಿನಗರ ಮಾರುಕಟ್ಟೆಗೆ ತೆರಳಿದ್ದರಂತೆ. ವಾಪಸ್ ಮನೆಗೆ ಹಿಂದಿರುಗುವಾಗ ಬಸ್ ವಿಚಾರಿಸಲು ತಂದೆ ನಯನಾ ಅವರಿಗೆ ಹೇಳಿದ್ದರು. ಆಗ ಬಸ್ ಬಗ್ಗೆ ವಿಚಾರಿಸಲು ಓಡಿ ಹೋಗುವಾಗ ನಯನಾ ಅವರ ಮುಂದೆ ಬರುತ್ತಿದ್ದ ಹುಡುಗನೊಬ್ಬ ಅವರ ಎದೆಗೆ ಜೋರಾಗಿ ಹೊಡೆದಿದ್ದಾನೆ.

ಎದೆಗೆ ಬಿದ್ದ ಏಟಿಗೆ ನಯನಾ ಅಲ್ಲೇ ಕುಸಿದು ಕೆಳಗೆ ಬಿದ್ದಬಿಟ್ಟರು. ನಂತರ ಅವರ ತಂದೆ ಹಾಗೂ ಆ ಸ್ಥಳದಲ್ಲಿ ಇದ್ದ ಜನ ಆ ಯುವಕನನ್ನು ಹಿಡಿಯಲು ಮುಂದಾದಾಗ ಯುವಕ ಯಾರ ಕೈಗೂ ಸಿಗದೇ ಎಸ್ಕೇಪ್ ಆದ. ಇದರಿಂದ ನಯನಾ ತುಂಬಾ ಬೇಸರಗೊಂಡರು. ಇಂತಹ ಘಟನೆಗಳು ಎಲ್ಲರ ಜೀವನದಲ್ಲೂ ನಡೆಯುತ್ತವೆ ಎಂದು ನಯನಾ ಹೇಳಿದ್ದಾರೆ.
ಆದರೆ ಇಂತಹ ಸಂದರ್ಭಗಳಲ್ಲಿ ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಅನ್ನೋದನ್ನು ಮರೆತು ನಾವೇ ಗಟ್ಟಿಯಾಗಿ ನಿಂತು ಧೈರ್ಯದಿಂದ ಸಂದರ್ಭಗಳನ್ನು ಎದುರಿಸಬೇಕು ಎಂದು ನಯನಾ ಕಿವಿ ಮಾತು ಹೇಳಿದ್ದಾರೆ. ಶಿವಾಜಿ ನಗರ ಮಾತ್ರ ಅಲ್ಲ, ಮೆಜೆಸ್ಟಿಕ್, ಮಾರ್ಕೇಟ್, ಗಾಂಧಿ ಬಜಾರ್ ಇನ್ನಿತರ ಯಾವುದೇ ಸ್ಥಳಗಳಲ್ಲೂ ಇಂಹತ ಘಟನೆಗಳು ನಡೆಯಬಹುದು.
ಇದರಿಂದ ಹೆಣ್ಣುಮಕ್ಕಳು ಧೈರ್ಯಗೆಡಬಾರದು ತಮ್ಮ ಮಕ್ಕಳಿಗೂ ಈ ವಿಚಾರದ ಬಗ್ಗೆ ತಿಳಿಹೇಳಬೇಕು. ಗುಡ್ ಟಚ್ ಬ್ಯಾಡ್ ಟಚ್, ಯಾರಿಂದ ದೂರ ಇರಬೇಕು? ಹೇಗಿರಬೇಕು ಎಲ್ಲದರ ಬಗ್ಗೆನೂ ಹೇಳಬೇಕು. ಯಾಕೆಂದರೆ ನಾವು ಅಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ. ನಾವು ಮಕ್ಕಳಿಗೆ ಈ ವಿಚಾರ ಹೇಳುವುದು ಮಾತ್ರವಲ್ಲ ನಮ್ಮ ಮಕ್ಕಳು ಇಂತಹ ವಿಚಾರಗಳನ್ನು ನಮ್ಮ ಮುಂದೆ ಭಯ ಇಲ್ಲದೆ ಹೇಳಿಕೊಳ್ಳುವ ಅವಕಾಶ ಇರಬೇಕು. ಇದು ಪೋಷಕರ ಜವಬ್ದಾರಿ ಆಗಿರುತ್ತದೆ ಎಂದು ನಯನಾ ಹೇಳಿದ್ದಾರೆ.
ಅಲ್ಲದೆ ನಾವೂ ಕೂಡ ಇದೆಲ್ಲದರ ಬಗ್ಗೆ ಈಗಲೂ ನಮ್ಮ ತಂದೆ ತಾಯಿ ಮುಂದೆ ಹೇಳಿಕೊಳ್ಳುತ್ತೇವೆ. ಅಂತಹ ಫ್ರೀಡಂ ನಮಗೆ ಅವರು ಕೊಟ್ಟಿದ್ದಾರೆ. ಇದನ್ನು ಮುಚ್ಚಿ ಇಟ್ಟುಕೊಂಡರೆ ಏನ್ ಲಾಭವಿಲ್ಲ. ಅದರಿಂದ ಸಮಸ್ಯೆಗಳು ನಮಗೇ ಜಾಸ್ತಿ. ಇಂತಹ ಘಟನೆಗಳು ನಡೆದಾಗ ತಕ್ಷಣ ಪ್ರತಿಕ್ರಿಯಿಸಿ ಹೊಡೆದು ಬುದ್ಧಿ ಕಲಿಸಬೇಕು. ನಂತರ ಹತ್ತಿರದ ಪೊಲೀಸ್ ಠಾಣೆಗೆ ಹೋಗಬೇಕು. ಪೊಲೀಸರು ನಮ್ಮ ರಕ್ಷಣೆ ಮಾಡುತ್ತಾರೆ. ತಕ್ಷಣ ಅವರು ನಮಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ನಯನಾ ಹೆಣ್ಣು ಮಕ್ಕಳಿಗೆ ಕಿವಿ ಮಾತು ಹೇಳಿದ್ದಾರೆ.
ಅಷ್ಟೇ ಅಲ್ಲ ಇವತ್ತು ಕೇವಲ ಹೆಣ್ಣು ಮಕ್ಕಳ ಮೇಲೆ ಮಾತ್ರ ಷೋಷಣೆ ಆಗುತ್ತೆ ಎಂದು ನಾನು ಹೇಳುವುದಿಲ್ಲ. ಪುರುಷರಿಗೂ ಷೋಷಣೆ ಆಗುತ್ತದೆ. ನನ್ನ ಸ್ನೇಹಿತರೇ ನನ್ನ ಬಳಿ ಎಷ್ಟೋ ಬಾರಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಬಸ್ ಕಂಡೆಕ್ಟರ್ ಪುರುಷರೊಂದಿಗೆ ಕೆಟ್ಟದಾಗಿ ವರ್ತಿಸಿರುವ ಬಗ್ಗೆ ನನ್ನ ಸ್ನೇಹಿತರು ನನ್ನೊಂದಿಗೆ ಚರ್ಚಿಸಿದ್ದಾರೆ. ಹೀಗಾಗಿ ಇವತ್ತು ಪುರುಷರು ಕೂಡ ಸೇಫ್ ಇಲ್ಲ ಎಂದು ನಯನಾ ಹೇಳಿದ್ದಾರೆ.
ಒಟ್ಟಿನಲ್ಲಿ ಇವತ್ತಿನ ದಿನಮಾನಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೇಗೆ ಜೀವಿಸಿದರೆ ಸುರಕ್ಷಿತ ಅನ್ನೋದನ್ನು ಸಂದರ್ಶನದಲ್ಲಿ ನಯನಾ ವಿವರಿಸಿದ್ದಾರೆ. ನಿಜವಾಗಲೂ ನಾವೆಲ್ಲಾ ಈ ರೀತಿಯಾಗಿ ಬದುಕುವುದನ್ನು ಕಲಿಯಬೇಕಿದೆ.












Click it and Unblock the Notifications